ಕೊಪ್ಪಳ: ಸರ್ಕಾರಿ ಬಸ್ ತಪಾಸಣೆ ಮಾಡುತ್ತಿದ್ದ ನಕಲಿ ಸಾರಿಗೆ ಅಧಿಕಾರಿಯನ್ನು ಕಂಡಕ್ಟರ್ ಪತ್ತೆ ಹಚ್ಚಿ ಮೇಲಾಧಿಕಾರಿಗಳಿಗೆ ಒಪ್ಪಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ತಾಲೂಕಿನ ಹುಲಗಿಯಿಂದ ಗಂಗಾವತಿ ಕಡೆ ಹೊರಟಿದ್ದ ಬಸ್‍ನ್ನು ತಪಾಸಣೆ ಮಾಡುವ ನೆಪದಲ್ಲಿ ಬಂದ ಆತ, ಟಿಕೆಟ್ ಮತ್ತು ಕ್ಯಾಶ್ ತಪಾಸಣೆ ಮಾಡಿದ್ದಾನೆ. ಈ ವೇಳೆ ಬಸ್ ಕಂಡೆಕ್ಟರ್ ಗೆ ಸಂಶಯ ಬಂದು ವಿಚಾರಣೆ ಮಾಡಿದಾಗ ನಕಲಿ ಅಧಿಕಾರಿ ಎಂದು ತಿಳಿದು ಬಂದಿದೆ.
Advertisement
ಬಸ್ ಪ್ರಯಾಣಿಕನ ಸೋಗಿನಲ್ಲಿ ಬಸ್ ಹತ್ತಿದ ಅಸಾಮಿ ನಂತರ ಕಂಡಕ್ಟರ್ ಬಳಿ ಬಂದು ನಾನು ತನಿಖಾಧಿಕಾರಿ ಎಂದು ಹೇಳಿ ಟಿಕೆಟ್ ಮಷಿನ್ ಪಡೆದುಕೊಂಡಿದ್ದಾನೆ. ಟೆಕೆಟ್ ಮತ್ತು ಹಣ ಎಲ್ಲವನ್ನು ಪರಿಶೀಲನೆ ಮಾಡಿದ್ದಾನೆ. ನಂತರ ನೀನು ಟಿಕೆಟ್ ಸರಿಯಾಗಿ ನೀಡಿಲ್ಲ. ನಿನ್ನ ಮೇಲೆ ಕೇಸ್ ಹಾಕುತ್ತೇನೆ ಎಂದು ಕಂಡಕ್ಟರ್ ಗೆ ಅವಾಜ್ ಹಾಕಿದ್ದಾನೆ. ಜೊತೆಗೆ 500 ರೂ. ದುಡ್ಡನ್ನು ಪಡೆದುಕೊಂಡಿದ್ದಾನೆ.
Advertisement
Advertisement
ಈ ವೇಳೆ ಅಸಾಮಿಯ ನಡುವಳಿಕೆ ನೋಡಿ ಅನುಮಾನಗೊಂಡ ಕಂಡಕ್ಟರ್, ಆತನನ್ನು ಪಶ್ನೆ ಮಾಡಲು ಶುರು ಮಾಡಿದ್ದಾರೆ. ನೀನು ನಮ್ಮ ಸಾರಿಗೆ ಇಲಾಖೆ ಅಧಿಕಾರಿನಾ? ನಿನ್ನ ಗುರುತಿನ ಚೀಟಿ ತೋರಿಸು ಎಂದು ಕೇಳಿದ್ದಾರೆ. ಈ ವೇಳೆ ಬೇರೆ ಏನೋ ಸಬೂಬು ಹೇಳಿ ಹೊರಹೋಗಲು ನೋಡಿದ ಆತನನ್ನು ಹಿಡಿದ ಕಂಡಕ್ಟರ್, ಆತನನ್ನು ಸಾರಿಗೆ ಇಲಾಖೆ ಮೇಲಾಧಿಕಾರಿಗಳಿಗೆ ಒಪ್ಪಿಸಿದ್ದಾರೆ.
Advertisement
ಸಿಕ್ಕಿಬಿದ್ದ ವ್ಯಕ್ತಿ ಆಂಧ್ರ ಮೂಲದವನು ಎಂದು ತಿಳಿದುಬಂದಿದ್ದು, ವಿಚಾರಣೆ ಮಾಡುವ ವೇಳೆ ನಾನು ನಕಲಿ ಅಧಿಕಾರಿ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಕೂಡಲೆ ನಕಲಿ ಅಧಿಕಾರಿಯನ್ನು ಕಂಡೆಕ್ಟರ್ ಹನುಮೇಶ್ ಮೇಲಾಧಿಕಾರಿ ವಶಕ್ಕೆ ಒಪ್ಪಿಸಿದ್ದಾರೆ.