ಕೊಪ್ಪಳ: ಕೊಪ್ಪಳ ಮನೆ ಮಗಳು, ಗಾಯಕಿ ಗಂಗಮ್ಮ ಅವರ ಯುಗಳ ಗೀತೆಗೆ ಸಂಗೀತಾಸಕ್ತರು ತಲೆ ದೂಗಿದರು.
ಆನೆಗೊಂದಿ ಉತ್ಸವದ ಸಮಾರೋಪ ಸಮಾರಂಭದ ಮುಖ್ಯ ವೇದಿಕೆಯಲ್ಲಿ ಗಂಗಮ್ಮ ಮತ್ತು ಗಾಯಕ ಹೇಮಂತ್ ಅವರ ಜೊತೆಯಾಗಿ ಹಾಡಿದ ಯುಗಳ ಗೀತೆ, ಕೇಳಿಸದೆ ಕಲ್ಲು ಕಲ್ಲಿನಲಿ ಹಂಪಿಯ ಗುಡಿ, ಮನೆಯನು ಬೆಳಗಿದೆ, ಬಾಳ ಬಂಗಾರ ನೀನು, ಲೋಕವೆ ಹೇಳಿದ ಮಾತಿದು ಹಾಡುಗಳನ್ನು ಹಾಡುವ ಮೂಲಕ ಕೊಪ್ಪಳ ಜನತೆಯ ಸಿನಿ ರಸಿಕರ ಮನ ತಣಿಸಿದರು. ಇವರನ್ನು ಆನೆಗೊಂದಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಂಜನಾ ದೇವಿ ಸನ್ಮಾನಿಸಿದರು. ಇದನ್ನೂ ಓದಿ: ಕೆರೆ ಹೂಳೆತ್ತುವ ಕೆಲಸ ಜಲಕ್ರಾಂತಿಗೆ ನಾಂದಿಯಾಗಲಿ: ಯಶ್
Advertisement
Advertisement
ಐತಿಹಾಸಿಕ ಆನೆಗೊಂದಿ ಉತ್ಸವಕ್ಕೆ ಇಂದು ಸಂಭ್ರಮದ ತೆರೆ ಬಿದ್ದಿದೆ. ಎರಡು ದಿನಗಳ ಕಾಲ ನಡೆದ ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು ಆನೆಗೊಂದಿಯಲ್ಲಿ ಸಂಭ್ರಮ ಮನೆ ಮಾಡಿತ್ತು. ಸಮಾರೋಪ ಸಮಾರಂಭದ ಬಳಿಕ ನಡೆದ ವಿವಿಧ ಕಾರ್ಯಕ್ರಮಗಳು ನೆರೆದಿದ್ದ ಪ್ರೇಕ್ಷಕರಿಗೆ ಮನೋರಂಜನೆ ನೀಡಿದವು. ಇದನ್ನೂ ಓದಿ: ಆನೆಗೊಂದಿ ಉತ್ಸವದಲ್ಲಿ ರಾಕ್ ಕ್ಲೈಂಬಿಂಗ್ ಸಾಹಸ ಪ್ರದರ್ಶನ
Advertisement
ಮೊಬೈಲ್ ಮಲ್ಲಪ್ಪ ಎಂದು ಖ್ಯಾತಿ ಪಡೆದ ಧಾರವಾಡದ ಹಾಸ್ಯ ಕಲಾವಿದ ಮಲ್ಲಪ್ಪ ಅವರು ಜನರಿಗೆ ಸಖತ್ ಮನರಂಜನೆ ನೀಡಿದರು. ಬೆಂಗಳೂರಿನ ಚಿತ್ರತಂಡದ ಸಂತೆ ಇಂದ ನಡೆದ ಕಾರ್ಯಕ್ರಮಗಳು ನೋಡುಗರನ್ನು ತನ್ನತ್ತ ಸೆಳೆದವು. ಕಾರ್ಯಕ್ರಮದ ಕುರಿತು ಮಾತನಾಡಿದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಪ್ರತಿ ವರ್ಷ ಆನೆಗೊಂದಿ ಉತ್ಸವ ಆಚರಣೆ ಮಾಡುತ್ತೇವೆ ಎಂದು ಜನರಿಗೆ ಆಶ್ವಾಸನೆ ನೀಡಿದರು. ಇದನ್ನೂ ಓದಿ: ಆನೆಗೊಂದಿ ಉತ್ಸವದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ: ಸಾರ್ವಜನಿಕರಿಂದ ಹರ್ಷ