ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ ಆಧಾರ ಕಾರ್ಡ್ ಗಾಗಿ ರಾತ್ರಿ ಜನರು ಬ್ಯಾಂಕ್ ಮುಂದೆ ಮಲಗುತ್ತಿದ್ದಾರೆ.
ಬ್ಯಾಂಕಿನ ಸಿಬ್ಬಂದಿ ರಾತ್ರಿ ಬಂದವರಿಗೆ ಮಾತ್ರ ಟೋಕನ್ ನೀಡುತ್ತಾರೆ. ಆದ ಕಾರಣ ಗಂಗಾವತಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂದೆ ಜನರು ಆಧಾರ್ ಕಾರ್ಡ್ ಮಾಡಿಸಲು ಕ್ಯೂ ನಿಲ್ಲಲು ಬಂದು ಅಲ್ಲೇ ರಾತ್ರಿ ಮಲಗುವ ಪರಿಸ್ಥಿತಿ ಬಂದಿದೆ.
ವಾರಕ್ಕೆ ಕೇವಲ ನೂರು ಆಧಾರ್ ಕಾರ್ಡ್ ಮಾಡಿಕೊಡುವುದರಿಂದ, ಗಂಗಾವತಿ ತಾಲೂಕಿನ ಹಳ್ಳಿಯ ಜನರು ರಾತ್ರಿ ಬಂದು ಆಧಾರ ಕಾರ್ಡ್ ಗಾಗಿ ಸಾಲಿನಲ್ಲಿ ನಿಲ್ಲುತ್ತಾರೆ. ಈ ವಿಚಾರವಾಗಿ ತಹಶೀಲ್ದಾರ್ ಅವರಿಗೆ ಗಮನಕ್ಕೆ ತಂದರು ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ ಎಂದು ಹಳ್ಳಿಯ ಜನರು ಕಿಡಿಕಾರಿದ್ದಾರೆ.