ಕೊಪ್ಪಳ: ಜಿಲ್ಲೆಯಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ 12,726 ಹೆಕ್ಟರ್ ಬೆಳೆ ನಾಶವಾಗಿದ್ದು, ಅತಿ ಹೆಚ್ಚು ನಷ್ಟವಾಗಿದೆ ಎಂದು ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಹೇಳಿದರು.
ಜಿಲ್ಲೆಯಲ್ಲಿ ಮಾತನಾಡಿದ ಅವರು, ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ಬಹಳ ಕಡೆ ನಷ್ಟವಾಗಿದ್ದು, 12,726 ಹೆಕ್ಟರ್ ಬೆಳೆ ನಾಶ ಆಗಿದೆ. ಎನ್‌ಡಿಆರ್‌ಎಫ್ ಮೂಲಕ ಹಣ ನೀಡಿದರೆ ರೈತರಿಗೆ ನಷ್ಟವಾಗುತ್ತದೆ. ಈ ಬಗ್ಗೆ ಸಿಎಂ ಹಾಗೂ ಮಿನಿಸ್ಟರ್ ಗಮನಕ್ಕೆ ತರಲಾಗಿದೆ. ಅಧಿಕಾರಿಗಳ ಜೊತೆ ಮಾತನಾಡಿ ಸೂಚನೆ ನೀಡಿದ್ದೇವೆ. ಬೆಳೆ ಹಾನಿ ಬಗ್ಗೆ ಪರೀಶಿಲನೆ ನಡೆಸಿ, ವರದಿ ನೀಡಲು ಹೇಳಿದ್ದೇನೆ. ರೈತರ ಹಾನಿಗೆ ವಿಶೇಷ ಪ್ಯಾಕೇಜ್ ಕೇಳಲಾಗಿದೆ. ವರದಿ ಬರುವವರೆಗೂ ಕಾಯೋಣ, ಕ್ಯಾಬಿನೆಟ್ ಮುಗಿದ ಬಳಿಕ ಸಿಎಂ ಜೊತೆ ಮಾತನಾಡಲು ಯೋಜನೆ ಮಾಡಲಾಗಿದೆ ಎಂದು ಹೇಳಿದರು.ಇದನ್ನೂ ಓದಿ: Mumbai Attack | ರಾಣಾ ವಿರುದ್ಧ ಸಾಕ್ಷಿಗಾಗಿ ನಿಗೂಢ ಮಹಿಳೆಯ ಹಿಂದೆ ಬಿದ್ದ ಎನ್‌ಐಎ
ಜಾತಿಗಣತಿ ಬಹಿರಂಗ (Caste Census) ವಿಚಾರವಾಗಿ ಮಾತನಾಡಿ, ಜಾತಿಗಣತಿಗೆ ವಿರೋಧವಿದೆ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ಸದನದಲ್ಲಿ ಯಾರು ವಿರೋಧ ಮಾಡಿಲ್ಲ, ವರದಿಯನ್ನು ನಾನೇ ಓಪನ್ ಮಾಡಿರುವುದು. ಇದು ಜಾತಿಜನಗಣತಿ ಅಲ್ಲ, ಇದು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಗಣತಿ. 1.66 ಲಕ್ಷ ಅಧಿಕಾರಿಗಳು ಸರ್ವೇ ಮಾಡಿದ್ದಾರೆ. ಎಲ್ಲ ಸಮುದಾಯದ ಅಧಿಕಾರಿಗಳು ಈ ಸರ್ವೇಯಲ್ಲಿ ಭಾಗವಹಿಸಿದ್ದಾರೆ. 2011ರಲ್ಲಿ ಜನಗಣತಿ ಆದಾಗ 6.11 ಕೋಟಿ ಇತ್ತು. ಬಿಜೆಪಿಯವರು 95% ಗಣತಿಗೆ ಒಪ್ಪಿಕೊಳ್ಳುವವರು, ಈ ಗಣತಿಗೆ ಯಾಕೆ ಒಪ್ಪಿಕೊಳ್ಳುತ್ತಿಲ್ಲ. ಇವತ್ತು ಸಂಜೆಯವರೆಗೂ ಎಲ್ಲ ಮಂತ್ರಿಗಳಿಗೂ ವರದಿಯ ಪ್ರತಿಯನ್ನು ಕಳಿಸುತ್ತೇನೆ. ಮಾಧ್ಯಮಗಳಲ್ಲಿ ಬರುತ್ತಿರುವುದು ಸುಳ್ಳು ಮಾಹಿತಿ, ಏ.17ರ ನಂತರ ಮಾಧ್ಯಮಕ್ಕೆ ಕೊಡುತ್ತೇವೆ. ಸದ್ಯ ಮಾಧ್ಯಮದಲ್ಲಿ ಬರುತ್ತಿರುವ ಅಂಕಿಸಂಖ್ಯೆ ತಪ್ಪಾಗಿದೆ ಎಂದರು.
ಬೋವಿ ನಿಗಮದ ಹಗರಣ ವಿಚಾರವಾಗಿ ಮಾತನಾಡಿ, ಜಾತಿಗಣತಿ ಮುಗಿಯಲಿ, ನಾನು ಆಮೇಲೆ ಮಾತನಾಡುತ್ತೇನೆ. ಇದರಲ್ಲಿ ಯರ‍್ಯಾರು ಬಿಜೆಪಿಯವರು ಇದ್ದಾರೆ, ಎಲ್ಲ ಮಾಹಿತಿ ಒದಗಿಸುತ್ತೇನೆ. ನಾನು ಅದರ ಬಗ್ಗೆ ಸಂಪೂರ್ಣ ಮಾಹಿತಿ ತಗೆದುಕೊಳ್ತೀನಿ ಎಂದು ತಿಳಿಸಿದರು.ಇದನ್ನೂ ಓದಿ: ಉಕ್ರೇನ್‌ನ ಸುಮಿ ಮೇಲೆ ರಷ್ಯಾ ಕ್ಷಿಪಣಿ ದಾಳಿ – 21 ಮಂದಿ ಸಾವು