ಬೆಂಗಳೂರು: ಕೇಂದ್ರ ಸರ್ಕಾರವೇ (Union Govt) ಕೋಣ ಎಂದು ವಿಧಾನಸಭೆಯಲ್ಲಿ ಸ್ಪೀಕರ್ ಪೀಠದಲ್ಲಿದ್ದ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ (Rudrappa Lamani) ಹೇಳಿದ್ದಾರೆ.
ಭದ್ರಾ ಜಲಾಶಯದ (Bhadra Dam) ಮುಳುಗಡೆ ಸಂತ್ರಸ್ತರಿಗೆ ಮಂಜೂರಾಗಿರುವ ದರಖಾಸ್ತು ಜಮೀನುಗಳ ರೈತರನ್ನು ಒಕ್ಕಲೆಬ್ಬಿಸದಂತೆ ಹಾಗೂ ಸಂತ್ರಸ್ತರಿಗೆ ನೆರವು ನೀಡುವ ಬಗ್ಗೆ ತರೀಕೆರೆ ಶಾಸಕ ಜಿ.ಹೆಚ್. ಶ್ರೀನಿವಾಸ್ ಗಮನ ಸೆಳೆದರು. ಆಗ ಸಮಸ್ಯೆ ಕುರಿತು ಪಕ್ಷಾತೀತವಾಗಿ ಎಲ್ಲ ಶಾಸಕರು ಸರ್ಕಾರವನ್ನು ಆಗ್ರಹಿಸಿದರು. ಇದನ್ನೂ ಓದಿ: ಸರ್ಕಾರಿ ನೌಕರರು ಆರ್‌ಎಸ್‌ಎಸ್ ಸೇರಬಹುದು – ಇಂದಿರಾ ಗಾಂಧಿ ಅಂದು ನಿಷೇಧ ಹೇರಿದ್ದು ಯಾಕೆ?
ಮಧ್ಯಪ್ರವೇಶ ಮಾಡಿದ ಡೆಪ್ಯುಟಿ ಸ್ಪೀಕರ್, ಸಂಸದರಿಗೆ ಹೇಳಿ ಕೇಂದ್ರ ಸರ್ಕಾರದ ಗಮನಕ್ಕೆ ತನ್ನಿ ಎಂದರು. ಅಲ್ಲದೇ ರಾಜ್ಯ ಸರ್ಕಾರಕ್ಕೆ ಕೂಡಾ ಸಭೆ ನಡೆಸಿ ಸೂಕ್ತ ನಿರ್ಧಾರಕ್ಕೆ ಬನ್ನಿ ಎಂದು ಸೂಚಿಸಿದ್ರು. ಇದನ್ನೂ ಓದಿ: ದರ್ಶನ್‌ಗೆ ಜೈಲೂಟವೇ ಗತಿ
ಈ ವೇಳೆ ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಗಿದೆ ಎಂದು ಡೆಪ್ಯುಟಿ ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಸುರೇಶ್ ಕುಮಾರ್, ಕೋಣ ಯಾರು ಅಂತಾ ಗೊತ್ತಾಗಲಿಲ್ಲ ಎಂದು ಕೇಳಿದರು. ಆಗ ಕೇಂದ್ರ ಸರ್ಕಾರವೇ ಕೋಣ ಎಂದು ಸ್ಪೀಕರ್ ಪೀಠದಲ್ಲಿದ್ದ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ತಿರುಗೇಟು ನೀಡಿದರು.