Hombale Films ಜೊತೆ ಕೈಜೋಡಿಸಿದ ರಜನಿಕಾಂತ್?

Public TV
2 Min Read
rajanikanth 1 1

ಹೊಂಬಾಳೆ ಫಿಲ್ಮ್ಸ್ಇದೀಗ ಕೆಜಿಎಫ್, ಕೆಜಿಎಫ್ 2 (KGF 2), ಕಾಂತಾರ (Kantara) ಅಂತಹ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನ ಕೊಡ್ತಿದೆ. ಸ್ಟಾರ್ ಕಲಾವಿದರ ಜೊತೆ ಸಿನಿಮಾ ಮಾಡ್ತಿದ್ದಾರೆ. ಈ ಬೆನ್ನಲ್ಲೇ ಹೊಂಬಾಳೆ ಸಂಸ್ಥೆ (Hombale Films) ಜೊತೆ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

rajanikanth 2 1

ಹೊಂಬಾಳೆ ಸಂಸ್ಥೆ ನಿರ್ಮಾಣದಲ್ಲಿ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ ‘ಕಾಂತಾರ’ ಸಿನಿಮಾ ನೋಡಿ ತಲೈವಾ ಭೇಷ್ ಎಂದಿದ್ದರು. ರಿಷಬ್‌ನ ಮನೆಗೆ ಆಹ್ವಾನಿಸಿ ಸನ್ಮಾನಿಸಿದ್ದರು. ಇದೆಲ್ಲದರ ಬೆನ್ನಲ್ಲೇ ಹೊಂಬಾಳೆ ಬ್ಯಾನರ್ ಚಿತ್ರದಲ್ಲಿ ರಜನಿಕಾಂತ್ (Rajanikanth) ನಟಿಸ್ತಾರೆ ಎನ್ನುವ ಊಹಾಪೋಹ ಶುರುವಾಗಿತ್ತು. ಆದರೆ ಈ ಬಗ್ಗೆ ಇದುವರೆಗೂ ಅಧಿಕೃತ ಮಾಹಿತಿ ಮಾತ್ರ ಸಿಕ್ಕಿಲ್ಲ.‌ ಇದನ್ನೂ ಓದಿ: ವಿಜಯ್‌ ವರ್ಮಾ ಜೊತೆ KGF ನಟಿ ತಮನ್ನಾ ಡಿನ್ನರ್‌ ಡೇಟ್‌

hombale films 3

ರಜನಿಕಾಂತ್ (Rajanikanth) ಅವರು ಹೊಂಬಾಳೆ ಫಿಲ್ಮ್ಸ್ ಚಿತ್ರದಲ್ಲಿ ನಟಿಸೋದು ಪಕ್ಕಾ ಎನ್ನುವ ಚರ್ಚೆ ಈಗ ಕಾಲಿವುಡ್‌ನಲ್ಲಿ (Kollywood) ಶುರುವಾಗಿದೆ. ಸುಧಾ ಕೊಂಗರ (Sudha Kongara) ಅವರು ತಲೈವಾ ನಟನೆಯ ಚಿತ್ರಕ್ಕೆ ನಿರ್ದೇಶನ ಮಾಡುತ್ತಾರೆ ಎನ್ನಲಾಗ್ತಿದೆ. ಈ ಹಿಂದೆಯೇ ಹೊಂಬಾಳೆ ಸಂಸ್ಥೆ- ಸುಧಾ ಕೊಂಗರ ನಿರ್ದೇಶನದಲ್ಲಿ ಒಂದು ಸಿನಿಮಾ ಘೋಷಿಸಿತ್ತು. ಆದರೆ ಆ ಚಿತ್ರಕ್ಕೆ ಹೀರೋ ಯಾರು ಎನ್ನುವುದು ಪಕ್ಕ ಆಗಿರಲಿಲ್ಲ. ತಮಿಳಿನ ಸೂರ್ಯ, ಯಶ್, ಸಿಂಬು ಸೇರಿದಂತೆ ಹಲವರ ಹೆಸರುಗಳು ಕೇಳಿಬಂದಿತ್ತು. ಆದರೆ ಈಗ ತಲೈವಾ ಹೆಸರು ಚಾಲ್ತಿಗೆ ಬಂದಿದೆ. ಈಗಾಗಲೇ ಸುಧಾ ಕೊಂಗರ ಸೂಪರ್ ಸ್ಟಾರ್‌ಗೆ ಕಥೆ ಹೇಳಿದ್ದಾರಂತೆ. ಅದಕ್ಕೆ ತಲೈವಾ ಕೂಡ ಓಕೆ ಎಂದಿದ್ದಾರೆ ಅಂತೆ. ಈ ವಿಚಾರ ಅದೆಷ್ಟರ ಮಟ್ಟಿಗೆ ನಿಜಾ? ಎಂಬುದನ್ನ ಚಿತ್ರತಂಡ ತಿಳಿಸುವವರೆಗೂ ಕಾದುನೋಡಬೇಕಿದೆ.

rajanikanth 4

3 ವರ್ಷಗಳ ಹಿಂದೆ ಬಂದ ‘ಸುರರೈ ಪೋಟ್ರು’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಕೊರೊನಾ ಸಂಕಷ್ಟದ ಸಮಯದಲ್ಲಿ ನೇರವಾಗಿ ಓಟಿಟಿಗೆ ಬಂದಿದ್ದ ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಜಿ.ಆರ್ ಗೋಪಿನಾಥ್ ಜೀವನಾಧರಿತ ಈ ಚಿತ್ರದಲ್ಲಿ ಸೂರ್ಯ ಹೀರೊ ಆಗಿ ನಟಿಸಿದ್ದರು. ಸುಧಾ ಕೊಂಗರ ನಿರ್ದೇಶನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ನಿರ್ದೇಶಕಿ ಸುಧಾ ಕೊಂಗರ ಹೊಸ ಬಗೆಯ ಸಿನಿಮಾ ಮಾಡಲು ಮುಂದಾಗಿದ್ದಾರೆ.

Share This Article