ಅಶ್ವಿನಿ ಪುನೀತ್ ರಾಜ್‌ಕುಮಾರ್ ನೇತೃತ್ವದಲ್ಲಿ `ಪುನೀತ ಪರ್ವ’ (Puneeth Parva) ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್ ಜೊತೆಗೆ ಬಹುಭಾಷಾ ತಾರೆಯರು ಸಾಥ್ ಕೂಡ ನೀಡಿದ್ದಾರೆ. ಸೌತ್ ಆಕ್ಟರ್ ನಟ ಶರತ್ ಕುಮಾರ್ ಕೂಡ ಪುನೀತ ಪರ್ವಕ್ಕೆ ಆಗಮಿಸಿದ್ದಾರೆ. ಈ ವೇಳೆ ಪುನೀತ್ ನೆನೆದು ಭಾವುಕರಾಗಿದ್ದಾರೆ.
`ಪುನೀತ ಪರ್ವ’ ಕಾರ್ಯಕ್ರಮದಲ್ಲಿ ಬಹುಭಾಷಾ ನಟ ಶರತ್ ಕುಮಾರ್(Sarath Kumar) ಭಾಗಿಯಾಗಿದ್ದಾರೆ. ರಾಜಕುಮಾರ ಜೊತೆಗಿನ ನೆನಪನ್ನ ಈ ವೇಳೆ ಬಿಚ್ಚಿಟ್ಟಿದ್ದಾರೆ. ಮೊದಲು ನನಗೆ ಕರೆ ಮಾಡಿ, ರಾಜಕುಮಾರ ಚಿತ್ರದಲ್ಲಿ ನಟಿಸುವಂತೆ ಹೇಳಿದ್ದರು. ಈ ಚಿತ್ರದ ಸೆಟ್‌ನಲ್ಲಿ ನಾವು ಮೊದಲು ಭೇಟಿಯಾಗಿದ್ವಿ. ಈ ಚಿತ್ರ ಬಿಗ್ ಹಿಟ್ ಆಯ್ತು. ಅಪ್ಪುಗೆ ಮಾನವೀಯ ಗುಣ ಉಳ್ಳವರಾಗಿದ್ದರು. ಸಾಕಷ್ಟು ಸಾಮಾಜಿಕ ಕಾರ್ಯಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದರು. ಇದನ್ನೂ ಓದಿ:ನಿರ್ದೇಶನದತ್ತ ಶ್ರುತಿ ಹರಿಹರನ್: ನಟನೆಗೆ ಫುಲ್ ಸ್ಟಾಪ್?
ಪುನೀತ್ ಅವರಲ್ಲಿ ನಾವು ಒಂದು ಫೇಸ್ ನೋಡಿದ್ದೀವಿ. ಆದರೆ ಅವರ ಸಾಕಷ್ಟು ಒಳ್ಳೆಯ ಮುಖಗಳು ಇದೀಗ ನಮಗೆ ತಿಳಿದು ಬಂದಿದೆ ಎಂದು ಪುನೀತ್ ಅವರ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅವರು ಯಾವಾಗಲೂ ನಮ್ಮ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅಪ್ಪು ಈಗ ದೇವರಾಗಿದ್ದಾರೆ ಎಂದು ಶರತ್ ಕುಮಾರ್ ಭಾವುಕರಾಗಿದ್ದಾರೆ.