ಸೌತ್ ನಟ ರವಿ ಮೋಹನ್ (Ravi Mohan) ಅವರು ಆರತಿ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡೋದಾಗಿ ಕಳೆದ ಸೆಪ್ಟೆಂಬರ್‌ನಲ್ಲಿ ಘೋಷಿಸಿದ್ದರು. ಈ ಬೆನ್ನಲ್ಲೇ ಇದೀಗ ಗಾಯಕಿ ಕೆನಿಶಾ ಫ್ರಾನ್ಸಿಸ್ ಜೊತೆ ರವಿ ಮೋಹನ್ ಕಾಣಿಸಿಕೊಂಡಿದ್ದಾರೆ. ಅವರ ಫೋಟೋ ವೈರಲ್ ಆಗಿದ್ದು, ಇಬ್ಬರ ರಿಲೇಷನ್‌ಶಿಪ್ ವಿಚಾರ ಮುನ್ನೆಲೆಗೆ ಬಂದಿದೆ. ಇದನ್ನೂ ಓದಿ:ಆರ್ಮಿಗೆ ಸಂಬಂಧಿಸಿದ ವಿಡಿಯೋಗಳನ್ನು ಶೇರ್ ಮಾಡಬೇಡಿ: ರಾಜಮೌಳಿ ಮನವಿ
ನಿರ್ಮಾಪಕ ಇಶಾರಿ ಗಣೇಶ್ ಅವರ ಮಗಳ ಮದುವೆಯಲ್ಲಿ ಕೆನಿಶಾ ಜೊತೆ ರವಿ ಮೋಹನ್ ಆಗಮಿಸಿದ್ದು, ಇಬ್ಬರೂ ಗೋಲ್ಡನ್ ಕಲರ್ ಉಡುಗೆಯಲ್ಲಿ ಮಿಂಚಿದ್ದಾರೆ. ಸಮಾರಂಭದಲ್ಲಿ ಕೆನಿಶಾ ಜೊತೆ ನಟ ಕ್ಲೋಸ್ ಆಗಿ ಇರುವ ವಿಡಿಯೋ ನೋಡಿ ಇಬ್ಬರ ನಡುವೆ ಪ್ರೀತಿ ಇದ್ಯಾ ಎಂದೆಲ್ಲಾ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ:‘ಆಪರೇಷನ್ ಸಿಂಧೂರ’ ಟೈಟಲ್‌ಗೆ ಬೇಡಿಕೆ- ರಿಜಿಸ್ಟರ್ ಮಾಡಲು ಮುಗಿಬಿದ್ದ ನಿರ್ಮಾಪಕರು
ಸದ್ಯ ಬೆಂಗಳೂರಿನ ಗಾಯಕಿ ಕೆನಿಶಾ ಜೊತೆ ರವಿ ಮೋಹನ್ ಕಾಣಿಸಿಕೊಂಡಿರೋದು ಡೇಟಿಂಗ್ ವದಂತಿಗೆ ಪುಷ್ಠಿ ನೀಡಿದೆ. ಈ ಹಿಂದೆಯೇ ಕೆನಿಶಾ ಜೊತೆ ರವಿ ಮೋಹನ್ ಹೆಸರು ಸದ್ದು ಮಾಡಿತ್ತು. ಆದರೆ ನಾವಿಬ್ಬರು ಫ್ರೆಂಡ್ಸ್ ಎಂದು ನಟ ಸ್ಪಷ್ಟನೆ ನೀಡಿದ್ದರು. ಆದರೀಗ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿರೋದು ಗಾಸಿಪ್ ಪ್ರಿಯರ ಬಾಯಿಗೆ ಆಹಾರವಾಗಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆರತಿ ಜೊತೆಗಿನ ವೈವಾಹಿಕ ಜೀವನಕ್ಕೆ ಅಂತ್ಯ (Divorce) ಹಾಡೋದಾಗಿ ಘೋಷಿಸಿದ್ದರು. ಡಿವೋರ್ಸ್‌ಗೆ ನನ್ನ ಸಮ್ಮತಿ ಇಲ್ಲ ಎಂದು ಆರತಿ ಕಿಡಿಕಾರಿದ್ದರು. ಪ್ರಸ್ತುತ ಇಬ್ಬರ ಡಿವೋರ್ಸ್ ವಿಚಾರ ಕೋರ್ಟ್‌ದಲ್ಲಿದೆ.