ಉಡುಪಿ: ದಕ್ಷಿಣ ಭಾರತಾದ್ಯಂತ ಭಕ್ತರನ್ನು ಹೊಂದಿರುವ ಕೊಲ್ಲೂರಿನ ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಚಂಡಿಕಾ ಹೋಮದಂದಲೇ ವಾರ್ಷಿಕ 1.77 ಕೋಟಿ ರೂಪಾಯಿ ಆದಾಯ ಬಂದಿದೆ.
ದೇಗುಲದ ಆದಾಯವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು, 2024-25ನೇ ಸಾಲಿನಲ್ಲಿ 71 ಕೋಟಿ ರೂ. ದಾಟಿದೆ. ಇದು ಕಳೆದ ವರ್ಷಕ್ಕಿಂತ 3 ಕೋಟಿ ರೂ. ಹೆಚ್ಚು. ಹುಂಡಿಯಲ್ಲಿ ಕಾಣಿಕೆ ರೂಪದಲ್ಲಿ ಸಂಗ್ರಹವಾದ ನಗದು ಹಾಗೂ ಚಿನ್ನಾಭರಣ, ಚಂಡಿಕಾ ಹೋಮ ಸೇರಿ ವಿವಿಧ ಪೂಜೆಗಳಿಂದ ಬರುವ ಆದಾಯ, ನಿತ್ಯ ಪೂಜೆ, ಆನ್‌ಲೈನ್ ಪೂಜೆಗಳ ಆದಾಯವನ್ನು ಇದು ಒಳಗೊಂಡಿದೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನು ಹೊರತುಪಡಿಸಿದರೆ ಕೊಲ್ಲೂರು ರಾಜ್ಯದಲ್ಲೇ ಅತಿ ಹೆಚ್ಚು ಆದಾಯವಿರುವ ಕ್ಷೇತ್ರ.