ರಾಯ್ಫುರ: ಪ್ರಿಯಕರನ ಪತ್ನಿ ಫೋನ್ ರಿಸೀವ್ ಮಾಡಿದ್ದಕ್ಕೆ ಮಹಿಳೆಯೊಬ್ಬಳು ಕಟ್ಟಡದ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಛತ್ತೀಸಗಢ ರಾಜ್ಯದ ರಾಯ್ಪುರದಲ್ಲಿ ನಡೆದಿದೆ.
ಕೋಲ್ಕತ್ತಾ ಮೂಲದ 25 ವರ್ಷದ ಮಿಥಾಲಿ ಹೇಮಬ್ರೋಮ್ ಅಲಿಯಾಸ್ ಪೂಜಾ ಆತ್ಮಹತ್ಯೆಗೆ ಶರಣಾದ ಮಹಿಳೆ. ಕುಡಿದ ಮತ್ತಿನಲ್ಲಿ ಶುಕ್ರವಾರ ಬೆಳಗ್ಗೆ ರಾಯ್ಪುರದ ಹಿಮಾಲಯನ್ ಹೈಟ್ಸ್ ಅಪಾರ್ಟ್ ಮೆಂಟ್‍ನ 7 ಮಹಡಿಯಿಂದ ಜಿಗಿದು ಸಾವನ್ನಪ್ಪಿದ್ದಾರೆ. ಬೆಳಗ್ಗೆ ಸುಮಾರು 8 ಗಂಟೆಗೆ ಮಿಥಾಲಿ ಕಟ್ಟಡದಿಂದ ಜಿಗಿದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿದ್ದಾರೆ.
Advertisement
ಗುರುವಾರ ರಾತ್ರಿ 11.30ರವರೆಗೂ ಮಿಥಾಲಿ ಮಾತನಾಡಿದ್ದಾರೆ. ಮೊದಲು ಪ್ರಿಯಕರನ ಪತ್ನಿ ಫೋನ್ ರಿಸೀವ್ ಮಾಡಿದ್ದರಿಂದ ಇಬ್ಬರ ಮಧ್ಯೆ ಗಲಾಟೆಯಾಗಿದೆ. ಕೊನೆಗೆ ಮಿಥಾಲಿ ಗೆಳತಿಯರೊಂದಿಗೆ ಮದ್ಯ ಸೇವಿಸಿ ನಿದ್ರೆಗೆ ಜಾರಿದ್ದಾರೆ. ಆದ್ರೆ ಬೆಳಗ್ಗೆ 8 ಗಂಟೆಗೆ ಕಟ್ಟಡದಿಂದ ಜಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement
Advertisement
ಅಕ್ಟೋಬರ್ 22ರಂದು ಕೋಲ್ಕತ್ತಾದ ಮಿಥಾಲಿ ಮತ್ತು ಪೂಜಾ ದಾಸ್ ಇಬ್ಬರು ರಾಯ್ಪುರ ಪ್ರಿಯಾಂಕ್ ಅಗರ್ವಾಲ್ ಆಹ್ವಾನದ ಮೇರೆಗೆ ದೀಪಾವಳಿಗಾಗಿ ನಗರಕ್ಕೆ ಆಗಮಿಸಿದ್ದರು. ವಿವಾಹಿತೆಯಾಗಿರುವ ಪ್ರಿಯಾಂಕ ಪತಿಯಿಂದ ದೂರವಾಗಿ ಇಬ್ಬರು ಮಕ್ಕಳೊಂದಿಗೆ ಹಿಮಾಲಯನ್ ಹೈಟ್ಸ್ ಅಪಾರ್ಟ್ ಮೆಂಟ್‍ನಲ್ಲಿ ವಾಸವಾಗಿದ್ದರು.
Advertisement
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಫ್ಲ್ಯಾಟ್ ಒಳಗೆ ಹೋಗಲು ಪ್ರಯತ್ನಿಸಿದ್ದಾರೆ. ಈ ವೇಳೆ ಭಯಗೊಂಡ ಪ್ರಿಯಾಂಕ ಮತ್ತು ಪೂಜಾ ಇಬ್ಬರು ಬಾತ್ ರೂಮ್‍ನಲ್ಲಿ ಅವಿತುಕೊಂಡಿದ್ದರು. ಪ್ರಿಯಾಂಕ ತಿಂಗಳಿಗೆ 7 ಸಾವಿರ ರೂ. ಬಾಡಿಗೆ ನೀಡಿ ಫ್ಲ್ಯಾಟ್‍ನಲ್ಲಿ ವಾಸವಾಗಿದ್ದಳು. ಪ್ರಿಯಾಂಕ ಫ್ಲ್ಯಾಟ್ ಗೆ ಅನೇಕ ಬಿಹಾರ ಮೂಲದ ಯುವಕ, ಯುವತಿಯರು ಬರುತ್ತಿದರು ಎಂದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಘಟನೆ ವೇಳೆ ಫ್ಲ್ಯಾಟ್ ನಲ್ಲಿದ್ದ ಮೂವರು ಮಹಿಳೆಯರು ಕಳೆದ ಮೂರು ವರ್ಷಗಳಿಂದ ಸ್ನೇಹಿತೆಯರಾಗಿದ್ದರು. ಮಿಥಾಲಿ ನಿಜವಾಗಿಯೂ ಆತ್ಮಹತ್ಯೆ ಶರಣಾದ್ರಾ ಅಥವಾ ಅವರನ್ನು ಕಟ್ಟಡದಿಂದ ತಳ್ಳಿ ಕೊಲೆ ಮಾಡಲಾಗಿದೆಯಾ ಎಂಬುವುದು ಖಚಿತವಾಗಿಲ್ಲ. ಈ ಸಂಬಂಧ ಆಕೆ ಸ್ನೇಹಿತೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv