ದಾಲ್ ತಡ್ಕಾ ಎಂದ್ರೆ ಯಾರದೇ ಬಾಯಲ್ಲಿ ನೀರು ಬರದೇ ಇರಲು ಸಾಧ್ಯವೇ ಇಲ್ಲ. ಅದರ ರುಚಿಯೇ ಅಂಥಾದ್ದು. ಇದಕ್ಕೆ ಮೊಟ್ಟೆಯನ್ನು ಸೇರಿಸಿ ಸ್ವಲ್ಪ ಡಿಫರೆಂಟ್ ಆಗಿ ಅಡುಗೆ ಮಾಡಿದ್ರೆ ಹೇಗಿರುತ್ತೆ? ಕೋಲ್ಕತ್ತಾದ ಈ ಒಂದು ಫೇಮಸ್ ಸ್ಟ್ರೀಟ್ ಫುಡ್ ಅನ್ನು ನೀವು ಒಮ್ಮೆ ಟ್ರೈ ಮಾಡ್ಲೇಬೇಕು. ಸ್ಥಳೀಯವಾಗಿ ಇದನ್ನು ಡಿಮ್ ತೊರ್ಕಾ (Dim Torka) ಎಂದು ಕರೆಯಲಾಗುತ್ತದೆ. ಹಾಗಿದ್ರೇ ಈ ಕೂಡಲೇ ರುಚಿಕರವಾದ ಎಗ್ ದಾಲ್ ತಡ್ಕಾ (Egg Dal Tadka) ಮಾಡೋದು ಹೇಗೆಂದು ನೋಡೋಣ.
Advertisement
ಬೇಕಾಗುವ ಪದಾರ್ಥಗಳು:
ಬೇಯಿಸಿದ ಮೊಟ್ಟೆ – 4
ಹೆಸರು ಬೇಳೆ – 1 ಕಪ್
ಎಣ್ಣೆ/ತುಪ್ಪ – 2 ಟೀಸ್ಪೂನ್
ಜೀರಿಗೆ – 1 ಟೀಸ್ಪೂನ್
ತುರಿದ ಶುಂಠಿ – 1 ಟೀಸ್ಪೂನ್
ತುರಿದ ಬೆಳ್ಳುಳ್ಳಿ – 1 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಈರುಳ್ಳಿ – 1
ಸಣ್ಣಗೆ ಹೆಚ್ಚಿದ ಟೊಮೆಟೊ – 1
ಅರಿಶಿನ – 1 ಟೀಸ್ಪೂನ್
ಕೆಂಪು ಮೆಣಸಿನಪುಡಿ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಇದನ್ನೂ ಓದಿ: 7 ಲೇಯರ್ ಚಿಕನ್ ಟಾಕೋ – ತರಕಾರಿ ಇದ್ರೂ ಮಕ್ಕಳು ಇಷ್ಟಪಟ್ಟು ಸವೀತಾರೆ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಮೊಟ್ಟೆಗಳನ್ನು ಬೇಯಿಸಿ ತಣ್ಣಗಾಗಲು ಬಿಡಿ.
* ಹೆಸರು ಬೇಳೆಯನ್ನು ತೊಳೆದು, 20 ನಿಮಿಷ ನೆನೆಸಿಡಿ.
* ಈಗ ಕುಕ್ಕರ್‌ನಲ್ಲಿ 3 ಕಪ್ ನೀರಿನೊಂದಿಗೆ ಹೆಸರು ಬೇಳೆಯನ್ನು 10-15 ನಿಮಿಷಗಳ ವರೆಗೆ ಬೇಯಿಸಿಕೊಳ್ಳಿ.
* ಈಗ ಒಂದು ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ, ಜೀರಿಗೆ ಸೇರಿಸಿ ಸಿಡಿಸಿ.
* ಬಳಿಕ ಶುಂಠಿ, ಬೆಳ್ಳುಳ್ಳಿ ಸೇರಿಸಿ 1 ನಿಮಿಷ ಹುರಿಯಿರಿ. ನಂತರ ಈರುಳ್ಳಿ ಸೇರಿಸಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ.
* ಟೊಮೆಟೊ ಸೇರಿಸಿ ಮತ್ತು ಅದು ಮೃದುವಾಗುವವರೆಗೆ ಬೇಯಿಸಿ.
* ಈಗ ಬೇಯಿಸಿದ ಹೆಸರು ಬೇಳೆ, ಅರಿಶಿನ, ಕೆಂಪು ಮೆಣಸಿನ ಪುಡಿ ಮತ್ತು ಉಪ್ಪು ಹಾಕಿ ಮಿಶ್ರಣ ಮಾಡಿ.
* ಉರಿಯನ್ನು ಕಡಿಮೆ ಮಾಡಿ ಕೆಲ ನಿಮಿಷಗಳ ಕಾಲ ಕುದಿಸಿಕೊಳ್ಳಿ.
* ಈಗ ಬೇಯಿಸಿದ ಮೊಟ್ಟೆಗಳ ಸಿಪ್ಪೆ ತೆಗೆದು ಅರ್ಧಕ್ಕೆ ಕತ್ತರಿಸಿ. ಅವುಗಳನ್ನು ಕುದಿಯುತ್ತಿರುವ ಮಿಶ್ರಣಕ್ಕೆ ಸೇರಿಸಿ ಸ್ವಲ್ಪ ಹೊತ್ತು ಬೇಯಲು ಬಿಡಿ.
* ಇದೀಗ ಉರಿಯನ್ನು ಆಫ್ ಮಾಡಿ, ಕೊತ್ತಂಬರಿ ಸೊಪ್ಪನ್ನು ಸೇರಿಸಿ.
* ರುಚಿ ರುಚಿಯಾದ ಎಗ್ ದಾಲ್ ತಡ್ಕಾ ತಯಾರಾಗಿದ್ದು, ಇದನ್ನು ಚಪಾತಿ ಅಥವಾ ಅನ್ನದೊಂದಿಗೆ ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಸಖತ್ ರುಚಿಯಾದ ಚೀಸ್ ಕುಲ್ಚಾ ನೀವೂ ಮಾಡಿ