ನವದೆಹಲಿ: ಕೋಲ್ಕತ್ತಾದಲ್ಲಿ (Kolkatta) ವರುಣನ ಅಬ್ಬರ ಜೋರಾಗಿದ್ದು, 40 ವರ್ಷಗಳಲ್ಲೇ ಅತ್ಯಂತ ದಾಖಲೆ ಮಟ್ಟದ ಮಳೆಯಾಗಿದೆ.
ಮನೆ, ರಸ್ತೆಗಳು ಜಲಾವೃತಗೊಂಡು ಜನರ ಜೀವನ ಅಸ್ತವ್ಯಸ್ತವಾಗಿದೆ. ಮಳೆಯಿಂದಾಗಿ ಹಲವು ಅವಾಂತರ ಸೃಷ್ಟಿಯಾಗಿದೆ. ಕೋಲ್ಕತ್ತಾದ ದಕ್ಷಿಣ ಮತ್ತು ಪೂರ್ವ ಭಾಗಗಳು ಹೆಚ್ಚು ಹಾನಿಯಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕೋಲ್ಕತ್ತಾದ ಹಲವು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ. ಸೊಂಟದ ಆಳದವರೆಗೂ ಹಲವು ಪ್ರದೇಶಗಳು ಮುಳಗಿವೆ. ರಸ್ತೆಗಳು ಕಾಣದಂತೆ ಮಾಯವಾಗಿವೆ ವಾಹನಗಳ ಸವಾರರು ಹೈರಾಣಾಗ್ತಿದ್ದಾರೆ. ಮಳೆಯಿಂದಾಗಿ ವಿಮಾನಗಳ ಪ್ರಯಾಣದ ಮೇಲೂ ಎಫೆಕ್ಟ್ ಉಂಟಾಗಿದೆ.ಇದನ್ನೂ ಓದಿ: ಬಿಗ್ ಬಾಸ್ ಸೀಸನ್ 12 ಭಾರೀ ಸ್ಪೆಷಲ್: ಬಿಗ್ ಅಪ್ ಡೇಟ್
ಇನ್ನೂ ರಾಜ್ಯದಲ್ಲಿ ಉತ್ತರ ಕರ್ನಾಟಕಕ್ಕೆ ಮಳೆ ಮತ್ತು ಮಹಾರಾಷ್ಟ್ರ ಪ್ರವಾಹ ಸಂಕಷ್ಟ ತಂದೊಡ್ಡಿದೆ. ವಿಜಯಪುರ ಜಿಲ್ಲೆಯ ಭೀಮಾನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಮಹಾರಾಷ್ಟ್ರದ ಉಜನಿ, ವೀರ್ ಜಲಾಶಯಗಳಿಂದ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಭೀಮಾನದಿ ತಟದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಚಡಚಣ, ಇಂಡಿ, ಆಲಮೇಲ ತಾಲೂಕಿನ ಭಾಗಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಸದ್ಯ ಭೀಮಾನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರೋ ಬ್ರಿಡ್ಜ್ ಕಂ ಬ್ಯಾರೇಜ್‌ಗಳು ಜಲಾವೃತವಾಗಿವೆ.
ಕಲಬುರಗಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗಾಣಗಾಪುರ ಸೇತುವೆ ಮುಳಗಡೆಯಾಗಿ ಜೇವರ್ಗಿ-ಅಫಜಲಪುರ ರಸ್ತೆ ಸಂರ್ಪಕ ಬಂದ್ ಆಗಿದೆ. ಕ್ಷಣದಿಂದ ಕ್ಷಣಕ್ಕೆ ಹೆಚ್ಚುತ್ತಿರೋ ಭೀಮಾನದಿ ಒಳಹರಿವು ಹಿನ್ನೆಲೆ ನದಿ ತೀರಕ್ಕೆ ಯಾರು ತೆರಳದಂತೆ ಎಚ್ಚರಿಸಲಾಗಿದೆ. ಇನ್ನು, ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ಭೀಕರ ಭೂಕುಸಿತವಾಗಿದೆ. ಪೈಪ್‌ಲೈನ್ ಕಾಮಗಾರಿ ವೇಳೆ ನಡುರಸ್ತೇಲಿ ಭೂಮಿ ಕುಸಿದಿದೆ. 30 ಮೀಟರ್ ಅಗಲ, 50 ಮೀಟರ್ ಆಳದ ಗುಂಡಿ ಸೃಷ್ಟಿಯಾಗಿದೆ. ಆಳದ ಗುಂಡಿಯೊಳಗೆ ಹಲವು ವಾಹನಗಳು ಬಿದ್ದಿವೆ. ಭೂಕುಸಿತದ ಬೆಚ್ಚಿ ಬೀಳಿಸುವ ಭಯಾನಕ ದೃಶ್ಯ ಸೆರೆಯಾಗಿದೆ.ಇದನ್ನೂ ಓದಿ: ಎಸ್.ಎಲ್.ಭೈರಪ್ಪಗೆ ಸಿನಿಮಾ ನಂಟು – ಕಾದಂಬರಿ ಆಧರಿತ ಸಿನಿಮಾಗಳಲ್ಲಿ ವಿಷ್ಣು ಸೇರಿ ಖ್ಯಾತ ನಟರ ಅಭಿನಯ