– ಮೃತ ವೈದ್ಯೆ ದೇಹದಲ್ಲಿ 25ಕ್ಕೂ ಹೆಚ್ಚು ಗಾಯಗಳು ಪತ್ತೆ
– ಕೊಲೆ ಮಾಡುವ ಮುನ್ನ ಕ್ರೂರವಾಗಿ ಹಿಂಸೆ
ಬೆಂಗಳೂರು: ಕೋಲ್ಕತ್ತಾ ಅತ್ಯಾಚಾರ ಪ್ರಕರಣಕ್ಕೆ (Kolkata Horror) ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿ ಸಂಜಯ್ ರಾಯ್‌ಗೆ ಮಾಡಿದ ಪಾಲಿಗ್ರಾಫ್ ಪರೀಕ್ಷೆಯ ವರದಿ ಹೊರಬಿದ್ದಿದೆ. ಕೃತ್ಯ ನಡೆದ ದಿನ ತಾನು ರೆಡ್‌ಲೈಟ್ ಏರಿಯಾಗೆ ಹೋಗಿದ್ದೆ. ಆಸ್ಪತ್ರೆಗೆ ಬರುವ ಹೊತ್ತಿಗೆ ಯುವ ವೈದ್ಯೆ ಸಾವನ್ನಪ್ಪಿದ್ರು ಎಂದು ಸಂಜಯ್ ರಾಯ್ (Sanjay Roy) ಹೇಳಿದ್ದಾನೆ ಎಂದು ವರದಿಯಾಗಿದೆ. ಇದರೊಂದಿಗೆ ಆರೋಪಿ ವಿಕೃತ ಮನಸ್ಥಿತಿಗೆ ಕನ್ನಡಿ ಹಿಡಿದಂತೆ ಇನ್ನಷ್ಟು ವಿಚಾರಗಳು ಬಯಲಾಗಿದೆ.
Advertisement
ಸುಳ್ಳು ಪತ್ತೆ ಪರೀಕ್ಷೆ ವೇಳೆ ಸಂಜಯ್ ರಾಯ್ ಸಿಬಿಐ (CBI) ಅಧಿಕಾರಿಗಳ ಮುಂದೆ ವೈದ್ಯೆಯ ಕೊಲೆಯ ಮುನ್ನ ನಗರದ ಎರಡು ವೇಶ್ಯಾಗೃಹಗಳಿಗೆ (Red light area) ಭೇಟಿ ನೀಡಿರುವುದಾಗಿ ತಿಳಿಸಿದ್ದಾನೆ. ಆದರೆ ಈ ವೇಳೆ ಲೈಂಗಿಕ ಕ್ರಿಯೆ ನಡೆಸಿಲ್ಲ ಎಂದು ಹೇಳಿದ್ದಾನೆ. ಇದೇ ವೇಳೆ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಗೆ ಕಿರುಕುಳ ನೀಡಿರುವುದನ್ನೂ ಒಪ್ಪಿಕೊಂಡಿದ್ದಾನೆ. ಜೊತೆಗೆ ತನ್ನ ಗೆಳತಿಗೆ ಕರೆ ಮಾಡಿ ಆಕೆಯ ಗ್ನ ಫೋಟೊ ಕಳಿಸುವಂತೆ ಕೇಳಿದ್ದ ಎಂದು ಒಪ್ಪಿಕೊಂಡಿರುವುದಾಗಿ ವರದಿಗಳಲ್ಲಿ ಉಲ್ಲೇಖವಾಗಿದೆ.
Advertisement
Advertisement
ಕರಾಳ ಮುಖ ಬಯಲು:
ಅತ್ಯಾಚಾರ ಘಟನೆ ನಡೆದ ರಾತ್ರಿ ಸಂಜಯ್ ರಾಯ್ ತನ್ನ ಸ್ನೇಹಿತನೊಂದಿಗೆ ಮದ್ಯಪಾನ ಮಾಡಿದ್ದ. ನಂತರ ವೇಶ್ಯಾಗೃಹಕ್ಕೆ ತೆರಳಿದ್ದ. ಅಲ್ಲಿಂದ ಹೊರಬಂದ ಆತ ದಕ್ಷಿಣ ಕೋಲ್ಕತ್ತಾದ ಮತ್ತೊಂದು ರೆಡ್‌ಲೈಟ್ ಏರಿಯಾ ಚೆಟ್ಲಾಕ್ಕೆ ಭೇಟಿ ನೀಡಿದ್ದ. ಚೆಟ್ಲಾಕ್ಕೆ ತೆರಳುವ ಮಾರ್ಗಮಧ್ಯೆ ಆತ ಬಾಲಕಿಯೊಬ್ಬಳಿಗೆ ಕಿರುಕುಳ ನೀಡಿದ್ದ. ಬಳಿಕ ಆರ್.ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಬಂದಿದ್ದ. ಮುಂಜಾನೆ 4 ಗಂಟೆ ಸುಮಾರಿಗೆ ಆತ ವೈದ್ಯೆ ಮೃತಪಟ್ಟ ಸೆಮಿನಾರ್ ಹಾಲ್‌ಗೆ ಪ್ರವೇಶಿಸುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ಮತ್ತೆ ರಷ್ಯಾ ವಾರ್ – 100 ಕ್ಷಿಪಣಿ, 100 ಅಟ್ಯಾಕಿಂಗ್ ಡ್ರೋನ್‌ಗಳಿಂದ ದಾಳಿ
Advertisement
ಟ್ರೈನಿ ವೈದ್ಯೆಯ ಹತ್ಯೆಯ ಬಳಿಕ ಆತ ತನ್ನ ಸ್ನೇಹಿತ ಅನುಪಮ್ ದತ್ತ ಎಂಬಾತನ ಮನೆಗೆ ತೆರಳಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅದಾಗ್ಯೂ ಸುಳ್ಳು ಪತ್ತೆ ಪರೀಕ್ಷೆ ವೇಳೆ ಸಂಜಯ್ ರಾಯ್ ಅಧಿಕಾರಿಗಳ ದಾರಿ ತಪ್ಪಿಸುವ ಹೇಳಿಕೆ ನೀಡಿದ್ದಾನೆ ಎಂದು ವರದಿಯೊಂದು ತಿಳಿಸಿದೆ.
ಇದೇ ವೇಳೆ ಸಿಬಿಐ ಅಧಿಕಾರಿಗಳು ಆತನ ಹಿನ್ನೆಲೆ ಪರೀಶೀಲಿಸಿದ್ದು ಈ ವೇಳೆ ಆತ ಅಶ್ಲೀಲ ಚಿತ್ರಗಳ ವೀಕ್ಷಿಸುವ ಚಟ ಹೊಂದಿದ್ದ ಎನ್ನುವುದನ್ನು ಕಂಡುಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಆತನ ಮೊಬೈಲ್ ಫೋನ್‌ನಲ್ಲಿ ಹಲವು ಅಶ್ಲೀಲ ಚಿತ್ರಗಳ ತುಣಕುಗಳು ಸಿಕ್ಕಿವೆ. ಮೃತ ತರಬೇತಿ ವೈದ್ಯೆಯ ದೇಹದಲ್ಲಿ 25ಕ್ಕೂ ಹೆಚ್ಚು ಗಾಯಗಳು ಪತ್ತೆಯಾಗಿದ್ದು, ಕೊಲೆ ಮಾಡುವ ಮುನ್ನ ಕ್ರೂರವಾಗಿ ಹಿಂಸಸಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ದರ್ಶನ್ ಜೊತೆ ಜೈಲಲ್ಲಿ ಪೋಸ್ ಕೊಟ್ಟ ರೌಡಿಶೀಟರ್ ನಾಗ ಧರಿಸಿದ್ದ ಟಿ-ಶರ್ಟ್ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಾ!
ಆಗಸ್ಟ್ 9ರಂದು ಮುಂಜಾನೆ 4 ಗಂಟೆ ಸುಮಾರಿಗೆ ಟ್ರೈನಿ ವೈದ್ಯೆಯ ಮೃತದೇಹ ಪತ್ತೆಯಾಗಿತ್ತು. ಅಂದು ಕರ್ತವ್ಯದಲ್ಲಿದ್ದ ವೈದ್ಯರು ಮತ್ತು ಇಂಟರ್ನ್‌ಗಳೊಂದಿಗೆ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರ ಉತ್ತರಗಳನ್ನು ಸಿಬಿಐ ಪರಿಶೀಲಿಸುತ್ತಿದೆ. ಸಂದೀಪ್ ಘೋಷ್ ಅವರನ್ನೂ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: J&K Election | ಇಂಡಿಯಾ ಒಕ್ಕೂಟದ ಸೀಟು ಹಂಚಿಕೆ ಒಪ್ಪಂದ ಸುಖಾಂತ್ಯ – ಎನ್‌ಸಿ 51, ಕಾಂಗ್ರೆಸ್ 32 ಸ್ಥಾನಗಳಲ್ಲಿ ಸ್ಪರ್ಧೆ