ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸಿಲಿಗುರಿಯ ಮೈಕ್ರೋ ಆರ್ಟಿಸ್ಟ್ ರಮೇಶ್ ಶಾ, ಚಂದ್ರಯಾನ-2 ರ ಚಂದ್ರನ ಮೇಲೆ ಇಳಿಯುವ ಕಿರುಚಿತ್ರವನ್ನು ತಮ್ಮ ಉಗುರಿನ ಮೇಲೆ ಬರೆಯುವ ಮೂಲಕ ಪರಿಶ್ರಮ ಮತ್ತು ತಾಳ್ಮೆ ತೋರಿಸಿದ್ದಾರೆ.
ರಮೇಶ್ ಶಾ ಅವರು ಈ ರೀತಿಯ ಚಿತ್ರ ಬಿಡಿಸುವವರ ಪೈಕಿ ವಿಶ್ವದದ್ಯಾಂತ ಮುಂಚೂಣಿಯಲ್ಲಿದ್ದಾರೆ. ಅವರು ಈ ರೀತಿಯ ತಮ್ಮ ಸಣ್ಣ ಪ್ರಮಾಣದ ಕಲಾತ್ಮಕ ಚಿತ್ರಗಳಿಂದ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‍ನ ಅತ್ಯಂತ ಮಹತ್ವದ ಪ್ರಶಸ್ತಿಯನ್ನು ಪಡೆದಿದ್ದಾರೆ.
Advertisement
Advertisement
ಮೈಕ್ರೋ ಆರ್ಟಿಸ್ಟ್ ಆಗಿರುವ ರಮೇಶ್ ಶಾ, 15 ರಿಂದ 20 ಎಂಎಂ ಉಗುರಿನ ಜಾಗವನ್ನು ಬಳಸಿಕೊಂಡು ಚಂದ್ರಯಾನ್ -2 ರ ಲ್ಯಾಂಡಿಂಗ್ ಪೇಂಟಿಂಗ್ ಅನ್ನು ತಮ್ಮ ಬಲಗೈನ ಉಗುರಿನ ಮೇಲೆ ಚಿತ್ರಿಸಿದ್ದಾರೆ. ಈ ವರ್ಣಚಿತ್ರವನ್ನು ಪೂರ್ಣಗೊಳಿಸಲು ಅವರು ಮೂರು ದಿನಗಳ ಕಲವಾಕಾಶವನ್ನು ತೆಗೆದುಕೊಂಡಿದ್ದಾರೆ.
Advertisement
ಈ ವಿಚಾರದ ಬಗ್ಗೆ ಮಾತನಾಡಿದ ಅವರು, ಬಾಹ್ಯಾಕಾಶ ನೌಕೆ ಚಂದ್ರನ ಮೇಲೆ ಸೇಫ್ ಲ್ಯಾಂಡ್ ಆದರೆ ಅದು ಭಾರತಕ್ಕೆ ಒಂದು ಐತಿಹಾಸಿಕ ಕ್ಷಣವಾಗಲಿದೆ. ಶನಿವಾರ ಚಂದ್ರನ ಮೇಲ್ಮೈಯ ದಕ್ಷಿಣ ಧ್ರುವದ ಬಳಿ ಚಂದ್ರಯಾನ್-2ನ ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆಗಲಿದೆ. ಈ ಮೂಲಕ ಈ ಸಾಧನೆ ಮಾಡಿದ ಭಾರತವು ಚಂದ್ರನ ಮೇಲೆ ರಾಕೆಟ್ ಇಳಿಸಿದ ವಿಶ್ವದ ನಾಲ್ಕನೇ ಶಕ್ತಿಶಾಲಿ ದೇಶವಾಗಲಿದೆ ಎಂದು ಹೇಳಿದರು.
Advertisement
ನಾನು ಸೂಕ್ಷ್ಮ ಕಲೆಗಳನ್ನು ಚಿತ್ರಿಸುವ ಮೂಲಕ ಐದು ವಿಶ್ವ ದಾಖಲೆಗಳನ್ನು ಮಾಡಿದ್ದೇನೆ. ಚಾಲ್ತಿಯಲ್ಲಿರುವ ವಿಶ್ವ ಸಮಸ್ಯೆಗಳಿಗೆ ಸಂಬಂಧಿಸಿದ ವರ್ಣಚಿತ್ರಗಳನ್ನು ನಾನು ಬರೆಯುತ್ತೇನೆ. ಈ ರೀತಿಯ ಚಿತ್ರಗಳನ್ನು ಬರೆಯುವಾಗ ನನಗೆ ಒಳ್ಳೆಯ ಕೆಲಸ ಮಾಡಿದ ಅನುಭವವಾಗುತ್ತದೆ ಎಂದ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಬಾಹ್ಯಾಕಾಶ ವಿಜ್ಞಾನಿಗಳನ್ನು ಚಂದ್ರಯಾನ-2 ಇಳಿಯುವ ಮುನ್ನ ಅಭಿನಂದನೆಗಳು ಎಂದು ಹೇಳಿದ್ದಾರೆ.