ಕೋಲ್ಕತ್ತಾ: ಪತ್ನಿ ಕಪ್ಪಗಿದ್ದಾಳೆ ಹಾಗೂ ವರದಕ್ಷಿಣೆ ತರಲಿಲ್ಲವೆಂದು ಪತಿಯೇ ಆಕೆಗೆ ಬೆಂಕಿ ಇಟ್ಟು ಕೊಲೆಗೈದ ಅಮಾನವೀಯ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ನ್ಯೂ ಬ್ಯಾರಕ್‍ಪುರ್ ನ ಪುರ್ಬಾ ಕೊಡಲಿಯಾದಲ್ಲಿ ಘಟನೆ ನಡೆದಿದ್ದು, ರವೀಂದ್ರ ಭಾರತಿ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಸಂಗೀತಾ ಸೂತ್ರಧಾರ್ (28) ಅವರನ್ನು ಬ್ಯಾಂಕ್ ಉದ್ಯೋಗಿಯಾಗಿದ್ದ ಬನ್‍ಹಿದ್ವೀಪ್ ಕೊಲೆಗೈದಿದ್ದಾನೆ.
ಸಂಗೀತಾ ಕಪ್ಪಗಿದ್ದಾಳೆ ಎಂದು ಬನ್‍ಹಿದ್ವೀಪ್ ಪೀಡಿಸುತ್ತಿದ್ದ. ಜೊತೆಗೆ 2 ಲಕ್ಷ ರೂ. ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದ. ವರದಕ್ಷಿಣೆ ತರುವಂತೆ ಮಗಳಿಗೆ ಪೀಡಿಸುತ್ತಿದ್ದ. ನನಗೆ 2 ಲಕ್ಷ ರೂ. ಬೇಕು, ತವರು ಮನೆಯಿಂದ ತರಬೇಕು ಅಂತಾ ಇತ್ತೀಚೆಗೆ ಒತ್ತಾಯಿಸುತ್ತಿದ್ದ. ಜೊತೆಗೆ ಮದುವೆ ಬಳಿಕ ಪತ್ನಿ ಕಪ್ಪಗಿದ್ದಾಳೆಂದು ಕಾಡಿಸುತ್ತಿದ್ದ. ಹೀಗಾಗಿ ನಮ್ಮ ಮಗಳನ್ನು ಬೆಂಕಿ ಹಚ್ಚಿ ಕೊಲೆ ಮಾಡಿ ಬಳಿಕ ಆಡುಗೆ ಮಾಡುವಾಗ ಬೆಂಕಿ ಹೊತ್ತಿಕೊಂಡಿದೆ ಎಂದು ಸುಳ್ಳು ಹೇಳುತ್ತಿದ್ದಾನೆ ಎಂದು ಮೃತಳ ಸಂಬಂಧಿಕರು ದೂರು ನೀಡಿದ್ದಾರೆ.
ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಸಂಗೀತಾ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾಳೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv