– ಸಿಕ್ಸರ್, ಬೌಂಡರಿ ಸುರಿಮಳೆ – ಪಂತ್ ಸ್ಪೋಟಕ ಅರ್ಧಶತಕ ವ್ಯರ್ಥ
ವಿಶಾಖಪಟ್ಟಣಂ: ಸುನೀಲ್ ನರೇನ್, ರಘುವಂಶಿ, ರಿಂಕು, ರಸೆಲ್ ಸ್ಫೋಟಕ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ದಾಳಿ ನೆರವಿನಿಂದ ಕೋಲ್ಕತ್ತಾ ನೈಟ್‌ರೈಡರ್ಸ್ (Kolkata Knight Riders) ತಂಡವು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ 106 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಅಲ್ಲದೇ ಅಧಿಕ ರನ್‌ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಇಲ್ಲಿನ ಡಾ.ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಬರೋಬ್ಬರಿ 272 ರನ್ ಸಿಡಿಸಿತ್ತು. ಈ ಗುರಿ ಡೆಲ್ಲಿ ಕ್ಯಾಪಿಟಲ್ಸ್ 17.2 ಓವರ್‌ಗಳಲ್ಲೇ 166 ರನ್‌ಗಳಿಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿತು.
Advertisement
Advertisement
273 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ಸ್ಫೋಟಕ ಪ್ರದರ್ಶನ ನೀಡಲು ಮುಂದಾಯಿತು. ಆದ್ರೆ ರನ್ ಕಲೆಹಾಕುವ ಅವಸರದಲ್ಲಿ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಮಧ್ಯಮ ಕ್ರಮಾಂಕದಲ್ಲಿ ನಾಯಕ ರಿಷಭ್ ಪಂತ್, ಟ್ರಿಸ್ಟಾನ್ ಸ್ಟಬ್ಸ್ ಸ್ಫೋಟಕ ಅರ್ಧಶತಕಗಳ ಹೋರಾಟವೂ ವ್ಯರ್ಥವಾಯಿತು.
Advertisement
ಡೆಲ್ಲಿ ಪರ 220 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ರಿಷಭ್ ಪಂತ್ (Rishabh Pant) 55 ರನ್ (25 ಎಸೆತ, 5 ಸಿಕ್ಸರ್, 4 ಬೌಂಡರಿ), ಸ್ಟಬ್ಸ್ 54 ರನ್ (32 ಎಸೆತ, 4 ಸಿಕ್ಸರ್, 4 ಬೌಂಡರಿ), ಡೇವಿಡ್ ವಾರ್ನರ್ (David Warner) 18 ರನ್, ಪೃಥ್ವಿ ಶಾ 10 ರನ್ ಗಳಿಸಿದರೆ, ಮಿಚೆಲ್ ಮಾರ್ಷ್ ಹಾಗೂ ಅಭಿಷೇಕ್ ಪೋರೆಲ್ ಶೂನ್ಯ ಸುತ್ತಿದರು. ಉಳಿದ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ನೆಲೆಯೂರದೇ ಪೆವಿಲಿಯನ್ ಪರೇಡ್ ನಡೆಸಿದರು. ಅಂತಿಮವಾಗಿ ಡೆಲ್ಲಿ 166 ರನ್‌ಗಳಿಗೆ ಆಲೌಟ್ ಆಯಿತು.
Advertisement
ಡೆಲ್ಲಿ ಕ್ಯಾಪಿಟಲ್ಸ್ ಪರ ವೈಭವ್ ಅರೋರ ಮತ್ತು ವರುಣ್ ಚಕ್ರವರ್ತಿ ತಲಾ 3 ವಿಕೆಟ್ ಕಿತ್ತರೆ, ದುಬಾರಿ ಆಟಗಾರ ಮಿಚೆಲ್ ಸ್ಟಾರ್ಕ್ 2 ವಿಕೆಟ್ ಹಾಗೂ ಆಂಡ್ರೆ ರಸೆಲ್, ಸುನೀಲ್ ನರೇನ್ ತಲಾ ಒಂದೊಂದು ವಿಕೆಟ್ ಕಿತ್ತರು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕೆಕೆಆರ್ 7 ವಿಕೆಟ್ ನಷ್ಟಕ್ಕೆ 20 ಓವರ್‌ಗಳಲ್ಲಿ 272 ರನ್ ಬಾರಿಸಿತ್ತು. ಪಿಲ್ ಸಾಲ್ಟ್ 18 ರನ್, ಸುನೀಲ್ ನರೇನ್ 85 ರನ್ (39 ಎಸೆತ, 7 ಸಿಕ್ಸರ್, 7 ಬೌಂಡರಿ), ರಘು ವಂಶಿ 54 ರನ್ (27 ಎಸೆತ, 3 ಸಿಕ್ಸರ್, 5 ಬೌಂಡರಿ), ರಸೆಲ್ 41 ರನ್ (19 ಎಸೆತ, 3 ಸಿಕ್ಸರ್, 4 ಬೌಂಡರಿ), ರಿಂಕು ಸಿಂಗ್ 26 ರನ್ (8 ಎಸೆತ, 3 ಸಿಕ್ಸರ್, 1 ಬೌಂಡರಿ), ಶ್ರೇಯಸ್ ಅಯ್ಯರ್ 18 ರನ್, ವೆಂಕಟೇಶ್ ಅಯ್ಯರ್ 5 ರನ್, ರಮಣದೀಪ್ ಸಿಂಗ್ 2 ರನ್, ಮಿಚೆಲ್ ಸ್ಟಾರ್ಕ್ 1 ರನ್ ಗಳಿಸಿದರು. ಅಲ್ಲದೇ ತಂಡಕ್ಕೆ ಹೆಚ್ಚುವರಿ 22 ರನ್‌ಗಳು ತಂಡಕ್ಕೆ ಸೇರ್ಪಡೆಯಾಯಿತು.
ಬಲ ನೀಡಿದ ಶತಕ, ಅರ್ಧಶತಕಗಳ ಜೊತೆಯಾಟ:
ಆರಂಭದಿಂದಲೇ ಡೆಲ್ಲಿ ಬೌಲರ್‌ಗಳನ್ನು ಬೆಂಡೆತ್ತಲು ಶುರು ಮಾಡಿದ ಕೆಕೆಆರ್ ಬ್ಯಾಟರ್‌ಗಳು ಕೊನೇವರೆಗೂ ಕ್ರೀಸ್‌ನಲ್ಲಿ ಅಬ್ಬರಿಸಿದರು. ಮೊದಲ ವಿಕೆಟ್‌ಗೆ ಪಿಲ್ ಸಾಲ್ಟ್ – ಸುನೀಲ್ ನರೇನ್ ಜೋಡಿ 27 ಎಸೆತಗಳಲ್ಲಿ 60 ರನ್ ಬಾರಿಸಿದರೆ, 2ನೇ ವಿಕೆಟ್‌ಗೆ ರಘುವಂಶಿ ಮತ್ತು ಸುನೀಲ್ ನರೇನ್ ಜೋಡಿ 48 ಎಸೆತಗಳಲ್ಲಿ ಬರೋಬ್ಬರಿ 104 ರನ್ ಕಲೆಹಾಕಿತು. ಈ ಬೆನ್ನಲ್ಲೇ ರಸೆಲ್-ಅಯ್ಯರ್ ಜೋಡಿ ಕೇವಲ 24 ಎಸೆತಗಳಲ್ಲಿ ಸ್ಫೋಟಕ 56 ರನ್ ಬಾರಿಸಿದರೆ, ರಿಂಕು-ರಸೆಲ್ ಜೋಡಿ ಕೇವಲ 11 ಎಸೆತಗಳಲ್ಲಿ 32 ರನ್ ಚಚ್ಚಿತು. ಪರಿಣಾಮ ತಂಡದ ಮೊತ್ತ 270 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಡೆಲ್ಲಿ ಪರ ಅನ್ರಿಚ್ ನಾರ್ಟ್ಜೆ 3 ವಿಕೆಟ್ ಕಿತ್ತರೆ, ಇಶಾಂತ್ ಶರ್ಮಾ 2 ವಿಕೆಟ್ ಹಾಗೂ ಖಲೀಲ್ ಅಹ್ಮದ್ ಮತ್ತು ಮಿಚೆಲ್ ಮಾರ್ಷ್ ತಲಾ ಒಂದೊಂದು ವಿಕೆಟ್ ಪಡೆದರು.
ಕೆಕೆಆರ್ ರನ್ ಏರಿದ್ದು ಹೇಗೆ?
50 ರನ್ 23 ಎಸೆತ
100 ರನ್ 45 ಎಸೆತ
150 ರನ್ 66 ಎಸೆತ
200 ರನ್ 92 ಎಸೆತ
250 ರನ್ 111 ಎಸೆತ
272 ರನ್ 120 ಎಸೆತ