ಕೋಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್‍ನಲ್ಲಿ ನಡೆಯುತ್ತಿರುವ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ಮತ್ತು ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ನಡುವಿನ ಐಪಿಎಲ್ (IPL) ಪಂದ್ಯದಲ್ಲಿ ಕೋಲ್ಕತ್ತಾ ತಂಡ 8 ವಿಕೆಟ್‍ಗಳ ಜಯಗಳಿಸಿದೆ.
ಲಕ್ನೋ ನೀಡಿದ 162 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ತಂಡ 15.4 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿ ಭರ್ಜರಿ ಜಯಗಳಿಸಿದೆ.
Advertisement
Advertisement
ಆರಂಭಿಕ ಆಟಗಾರ ಸುನಿಲ್ ನರೈನ್ ಅವರು 6 ಎಸೆತಗಳಲ್ಲಿ 6 ರನ್ ಗಳಿಸಿ ಔಟಾದರು. ಬಳಿಕ ಆರು ಎಸೆತಗಳಲ್ಲಿ ಏಳು 7 ಗಳಿಸಿ ರಘುವಂಶಿ ಔಟಾದರು. ಬಳಿಕ ಕಣಕ್ಕಿಳಿದ ಪಿಲ್ ಸಾಲ್ಟ್ 47 ಎಸೆತಗಳಿಗೆ 89 ಹಾಗೂ ಶ್ರೇಯಸ್ ಅಯ್ಯರ್ 38 ಎಸೆತಗಳಿಗೆ 38 ರನ್‍ಗಳನ್ನು ಕಲೆಹಾಕಿ ತಂಡವನ್ನು ಗೆಲುವಿನ ದಡ ತಲುಪಿಸಿದರು.
Advertisement
Advertisement
ಟಾಸ್ ಗೆದ್ದು ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್ ಬೀಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್‌ಗಳಲ್ಲಿ ಏಳು ವಿಕೆಟ್‍ಗೆ 161 ರನ್ ಕಲೆಹಾಕಿತ್ತು. ಲಕ್ನೋ ಪರ ನಿಕೋಲಸ್ ಪುರನ್ 32 ಎಸೆತಗಳಲ್ಲಿ ಎರಡು 4 ಹಾಗೂ ನಾಲ್ಕು 6 ನೆರವಿನಿಂದ ಗರಿಷ್ಠ 45 ರನ್ ಗಳಿಸಿದರೆ, ನಾಯಕ ಕೆಎಲ್ ರಾಹುಲ್ 27 ಎಸೆತಗಳಲ್ಲಿ 39 ರನ್ ಗಳಿಸಿದ್ದರು.
5 ಎಸೆತಗಳಲ್ಲಿ ಎರಡು ಬೌಂಡರಿಗಳ ನೆರವಿನಿಂದ 10 ರನ್ ಗಳಿಸಿ ಮಾರ್ಕಸ್ ಸ್ಟೊಯಿನಿಸ್ ಔಟಾದರು. ಬಳಿಕ ಕ್ರೀಸ್‍ಗೆ ಬಂದ ನಿಕೋಲಸ್ 45 ರನ್‍ಗಳ ಕಲೆಹಾಕಿ ತಂಡದ ಮೊತ್ತ ಹೆಚ್ಚಿಸಿದರು. ದೀಪಕ್ ಹೂಡಾ ಹತ್ತು ಎಸೆತಗಳಿಗೆ 8 ರನ್ ಗಳಿಸಿ ಪೆವಿಲಿಯನ್‍ಗೆ ಮರಳಿದರು. ಆಯುಷ್ ಬಡೋನಿ 27 ಎಸೆತಗಳಲ್ಲಿ ಎರಡು ಫೋರ್ ಹಾಗೂ ಒಂದು ಸಿಕ್ಸ್ ನೆರವಿನಿಂದ 29 ರನ್ ಗಳಿಸಿದರು. ಕ್ವಿಂಟನ್ ಡಿ ಕಾಕ್ ಎಂಟು ಎಸೆತಗಳಲ್ಲಿ 10ರನ್ ಗಳಿಸಿ ಔಟಾದರು. ಅರ್ಷದ್ ಖಾನ್ ನಾಲ್ಕು ಎಸೆತಗಳಲ್ಲಿ ಕೇವಲ 5ರನ್ ಮಾತ್ರ ಗಳಿಸಿದರು.