ಕೋಲ್ಕತ್ತಾ: ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ (Kolkata Doctor Case) ಸಂಬಂಧ ಸುಪ್ರೀಂ ಕೋರ್ಟ್ (Supreme Court) ವಿಚಾರಣೆ ಮುಂದುವರಿಸಿದೆ. ಘಟನೆ ಖಂಡಿಸಿ ಕಳೆದ ಕೆಲ ದಿನಗಳಿಂದ ನಡೆಸ್ತಿರುವ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಮರಳುವಂತೆ ವೈದ್ಯರಿಗೆ ಸೂಚನೆ ನೀಡಿದೆ.
ಬಿಜೆಪಿ, ಟಿಎಂಸಿಗೆ ಬುದ್ಧಿವಾದ
ವಿಚಾರಣೆ ವೇಳೆ ಘಟನೆಗೆ ಸಂಬಂಧಿಸಿದಂತೆ ಟಿಎಂಸಿ (TMC) ಮತ್ತು ಬಿಜೆಪಿಗೆ (BJP( ಬುದ್ಧಿವಾದ ಹೇಳಿದ ನ್ಯಾಯಾಲಯ ಇತ್ತ ಸಿಬಿಐ ಮತ್ತು ಪಶ್ಚಿಮ ಬಂಗಾಳ ಸರ್ಕಾರ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿರುವುದನ್ನು ಟೀಕಿಸಿದೆ. ʻಮಮತಾ ಬ್ಯಾನರ್ಜಿ ಕಡೆಗೆ ಕೈತೋರುವವರ ಬೆರಳು ಕತ್ತರಿಸಲಾಗುವುದುʼ ಎಂಬ ಬಂಗಾಳ ಸಚಿವರೊಬ್ಬರ ಹೇಳಿಕೆಯನ್ನು ಸಿಬಿಐ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ (SG) ತುಷಾರ್ ಮೆಹ್ತಾ ಪ್ರಸ್ತಾಪಿಸಿದರು.
ಆಗ ಪಶ್ಚಿಮ ಬಂಗಾಳ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ಗುಂಡು ಹಾರಿಸಲಾಗುವುದು ಅಂತ ಹೇಳಿರುವುದಾಗಿ ಕೋರ್ಟ್ ಗಮನಕ್ಕೆ ತಂದರು. ಆ ಸಂದರ್ಭದಲ್ಲಿ ನ್ಯಾಯಾಲಯ ಪರಿಸ್ಥಿತಿಯನ್ನು ರಾಜಕೀಯಗೊಳಿಸಬೇಡಿ ಕಾನೂನು ತನ್ನ ಹಾದಿಯನ್ನು ಕಂಡುಕೊಳ್ಳಲಿದೆ ಎಂಬುದಾಗಿ ತಿಳಿಸಿತು.
ಕರ್ತವ್ಯ ಮಾಡುತ್ತಲೇ ಮುಷ್ಕರ ನಡೆಸ್ತಿರೋದಾಗಿ ವೈದ್ಯರ ಸಂಘ ತಿಳಿಸಿದೆ. ಇದೇ ವೇಳೆ ಯುವವೈದ್ಯೆಯ ಅತ್ಯಾಚಾರ ಪ್ರಕರಣದ ತನಿಖಾ ಪ್ರಗತಿಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಸಿಬಿಐ (CBI) ಸಲ್ಲಿಸಿದೆ. ಅತ್ಯಾಚಾರ & ಹತ್ಯೆ ಮುಚ್ಚಿಹಾಕುವ ಪ್ರಯತ್ನ ನಡೆದಿತ್ತು. ಅಪ್ಪ-ಅಪ್ಪನಿಗೂ ಸರಿಯಾದ ಮಾಹಿತಿ ನೀಡದೇ ದಾರಿ ತಪ್ಪಿಸುವ ಪ್ರಯತ್ನವೂ ಆಗಿತ್ತು. ಶವ ದಹನದ ಬಳಿಕವೇ ಎಫ್‌ಐಆರ್ (FIR) ನಮೂದಿಸಿದ್ರು. ಘಟನಾ ಸ್ಥಳದಲ್ಲಿ ಸಾಕ್ಷ್ಯಾಧಾರಗಳನ್ನ ಧ್ವಂಸ ಮಾಡುವ ಪ್ರಯತ್ನಗಳು ನಡೆದಿವೆ ಎಂದು ಸಿಬಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಟ್ರೈನಿ ವೈದ್ಯೆ ಮೇಲೆ ನಡೆದಿರೋದು ಗ್ಯಾಂಗ್ ರೇಪ್ ಅಲ್ಲ – ಪ್ರಾಥಮಿಕ ತನಿಖೆ ಬಳಿಕ CBI ಮೂಲಗಳಿಂದ ಮಾಹಿತಿ
ಘಟನೆ ನಡೆದ 5ನೇ ದಿನ ತಮ್ಮ ಕೈಗೆ ತನಿಖಾ ವರದಿಯನ್ನು ಪೊಲೀಸರು ಸಲ್ಲಿಸಿದ್ರು. ಅಷ್ಟರೊಳಗೆ ಸಾಕಷ್ಟು ವರದಿಗಳನ್ನು ಬದಲಾಯಿಸಿದ್ರು ಎಂದು ಸಾಲಿಸಿಟರ್ ಜನರೆಲ್ ಆರೋಪಿಸಿದರು. ಆದ್ರೆ ಪ್ರತಿಯೊಂದರ ವಿಡಿಯೋ ಚಿತ್ರೀಕರಣ ನಡೆದಿದೆ ಎಂದು ಬಂಗಾಳ ಸರ್ಕಾರದ ಪರ ವಕೀಲ ಕಪಿಲ್ ಸಿಬಲ್ ಸ್ಪಷ್ಟಪಡಿಸಿದ್ರು. ವೈದ್ಯರು ಒತ್ತಡ ತಂದಿದ್ದಕ್ಕೆ ವೀಡಿಯೋ ಚಿತ್ರೀಕರಣ ನಡೆದಿದೆ ಎಂದು ತುಷಾರ್ ಮೆಹ್ತಾ ಟಾಂಗ್ ಕೊಟ್ರು. ಈ ಮಧ್ಯೆಯೇ, ಯುವವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ. ಒಬ್ಬನೇ ವ್ಯಕ್ತಿ ಕೃತ್ಯ ಎಸಗಿದ್ದಾನೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಧರ್ಮಗುರುಗಳ ಮೂಲಕ ಮುಸ್ಲಿಮರ ವಿವಾಹ ನೋಂದಣಿಗೆ ತಡೆ – ಹೊಸ ಮಸೂದೆಗೆ ಅಸ್ಸಾಂ ಕ್ಯಾಬಿನೆಟ್ ಅನುಮೋದನೆ
ಕೋಲ್ಕತ್ತಾ ಪ್ರಕರಣ ಏನು?
ಇದೇ ತಿಂಗಳ ಆ.9ರಂದು ಬೆಳಗ್ಗೆ ಸ್ನಾತಕೋತ್ತರ ತರಬೇತಿ ನಿರತ ವೈದ್ಯೆಯ ಶವ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಕೃತ್ಯ ನಡೆಸಿದ್ದ ಆರೋಪಿ ಸಂಜಯ್‌ನನ್ನು ಪೊಲೀಸರು ಬಂಧಿಸಿದ್ದರು. ಅಶ್ಲೀಲ ವೀಡಿಯೋಗಳಿಗೆ ವ್ಯಸನಿಯಾಗಿದ್ದ ಸಂಜಯ್ ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು ರಕ್ತಸಿಕ್ತ ಬಟ್ಟೆಯನ್ನು ತೊಳೆದಿದ್ದ ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಈ ಹಿಂದೆ ಪೊಲೀಸ್ ಸ್ವಯಂ ಸೇವಕನಾಗಿದ್ದ ಈತ 4 ಬಾರಿ ಮದುವೆಯಾಗಿದ್ದು, ಪತ್ನಿಯರಿಗೆ ಆಗಾಗ ಕಿರುಕುಳ ನೀಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿತ್ತು. ಸದ್ಯ ಈ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (CBI) ತನಿಖೆ ನಡೆಸುತ್ತಿದೆ. ಈ ಬೆನ್ನಲ್ಲೇ ಸ್ವಯಂಪ್ರೇರಿತವಾಗಿ ದೂರು ದಾಖಳಿಸಿಕೊಂಡ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಇದನ್ನೂ ಓದಿ: J&K Assembly Polls | ಎನ್‌ಸಿ-ಕಾಂಗ್ರೆಸ್ ಮೈತ್ರಿ ಬಹುತೇಕ ಖಚಿತ; ಮುಂದುವರಿದ ಸೀಟು ಹಂಚಿಕೆ ಮಾತುಕತೆ