ಕೋಲ್ಕತ್ತಾ: ಇಲ್ಲಿನ ಆರ್.ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಟ್ರೈನಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯವು (CFSL) ಕೇಂದ್ರೀಯ ತನಿಖಾ ದಳಕ್ಕೆ (CBI) ವರದಿ ಅಂಶಗಳು ಬಹಿರಂಗಗೊಂಡಿದೆ. ಆದ್ರೆ ವರದಿಯ ಅಂಶಗಳು ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ.
ಟ್ರೈನಿ ವೈದ್ಯೆ ಮೃತದೇಹ ಪತ್ತೆಯಾದ ಸೆಮಿನಾರ್ ಹಾಲ್‌ನಲ್ಲಿ ಘರ್ಷಣೆ ಪ್ರತಿರೋಧ ನಡೆದಿರುವ ಬಗ್ಗೆ ಸ್ಪಷ್ಟ ಚಿತ್ರಣಗಳಿಲ್ಲ ಎಂದು ತನ್ನ ವರದಿಯಲ್ಲಿ ಸಿಎಫ್‌ಎಸ್‌ಎಲ್‌ನಲ್ಲಿ ಉಲ್ಲೇಖಿಸಿರಿವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: Kolkata Horror | ಕ್ರಿಮಿನಲ್ ಮನಸ್ಥಿತಿ ಬರೋದು ಏಕೆ? ಮನೋವಿಜ್ಞಾನಿಗಳು ಏನ್ ಹೇಳ್ತಾರೆ?
Advertisement
Advertisement
ಸಿಬಿಐಗೆ ಸಲ್ಲಿಸಿದ ವರದಿಯಲ್ಲಿ ಸಾಕ್ಷ್ಯಗಳಿಲ್ಲದಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೌದು. ದೆಹಲಿಯ ಸಿಎಫ್‌ಎಸ್‌ಎಲ್‌ನ ತಜ್ಞರು ಕಳೆದ ಆಗಸ್ಟ್ 14ರಂದು ಆರ್.ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಅಪರಾಧ ನಡೆದ ಸ್ಥಳದಲ್ಲಿ ಪರಿಶೀಲಿಸಿದ್ದರು. ಈ ವೇಳೆ ಅತ್ಯಾಚಾರಿ ಎದುರು ಸಂತ್ರಸ್ತೆ ತೋರಿಸಿದ ಸಂಭಾವ್ಯ ಹೋರಾಟ ಅಥವಾ ಅವರ ನಡುವಿನ ಪ್ರತಿರೋಧದ ಸಾಕ್ಷ್ಯವು ಸ್ಥಳದಲ್ಲಿ ಕಾಣೆಯಾಗಿದೆ. ಕೆಲವು ಪ್ರಮುಖ ಸಾಕ್ಷ್ಯಗಳು ಸ್ಥಳದಲ್ಲಿ ಕಂಡುಬಂದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದೆ ಎಂದು ಸಿಬಿಐ ಮೂಲಗಳು ಕೋರ್ಟ್‌ಗೆ ತಿಳಿಸಿವೆ.
Advertisement
ಕಳೆದ ಆಗಸ್ಟ್‌ನಲ್ಲಿ ಪ್ರಕರಣ ನಡೆದ ಬಳಿಕ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯ ಪ್ರಗತಿ ವರದಿಯನ್ನ ಸಲ್ಲಿಸಲು ಕೋಲ್ಕತ್ತಾ ಹೈಕೋರ್ಟ್ ಸಿಬಿಐಗೆ ಗಡುವು ನೀಡಿತ್ತು. ಮತ್ತೆ ಗಡುವು ನೀಡಿದ್ದ ಅವಧಿಯನ್ನು ವಿಸ್ತರಣೆ ಮಾಡಿತ್ತು. ಇದನ್ನೂ ಓದಿ: ಕ್ರಿಸ್‌ಮಸ್ ಸಂಭ್ರಮ – ನೀವೂ ವಿಶ್ ಮಾಡ್ಬೇಕಾ? ವಾಟ್ಸಪ್ ಸ್ಟೇಟಸ್‌ಗೆ ಇಲ್ಲಿದೆ ಸಿಂಪಲ್ ಟಿಪ್ಸ್
Advertisement
ಮೊದಲು ತನಿಖೆ ನಡೆಸಿದ್ದ ಕೋಲ್ಕತ್ತಾ ಪೊಲೀಸರು, ಆಗಸ್ಟ್ 9 ರಂದು ಸಂತ್ರಸ್ತೆಯ ದೇಹವನ್ನು ಗುರುತಿಸಿದ ಸೆಮಿನಾರ್ ಹಾಲ್‌ನಿಂದ 40 ವಸ್ತುಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿತ್ತು. ನಂತರ ಪ್ರಕರಣವನ್ನ ಸಿಬಿಐ ತನಿಖೆಗೆ ವರ್ಗಾಯಿಸಲಾಗಿತ್ತು. ಅದಾದ ಬಳಿಕ ವಶಕ್ಕೆ ಪಡೆದಿದ್ದ ವಸ್ತುಗಳನ್ನು ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು.
ಇದಕ್ಕೂ ಮೊದಲು ಆಗಸ್ಟ್ 14 ರಂದು, CFSL ತಜ್ಞರ ತಂಡವು ಅಪರಾಧ ನಡೆದ ಸೆಮಿನಾರ್ ಹಾಲ್ ಅನ್ನು ಭೌತಿಕವಾಗಿ ಪರೀಕ್ಷಿಸಿತ್ತು. ಆಗ ವಶಪಡಿಸಿಕೊಂಡ ವಸ್ತುಗಳ ವಿಧಿವಿಜ್ಞಾನ ವರದಿಗಳ ಆಧಾರದ ಮೇಲೆ ಸಿಬಿಐಗೆ ವರದಿ ಸಲ್ಲಿಸಿತು. ಇದನ್ನೂ ಓದಿ: 4 ಮಕ್ಕಳೊಂದಿಗೆ ಪಾಕ್‌ನಿಂದ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಸೀಮಾ ಗರ್ಭಿಣಿ