– ನಾಳೆಯಿಂದ ಕರ್ತವ್ಯಕ್ಕೆ ಹಾಜರು
ನವದೆಹಲಿ: ಕೋಲ್ಕತ್ತಾ (Kolkata) ಆಸ್ಪತ್ರೆಯಲ್ಲಿ ಸಹೋದ್ಯೋಗಿಯೊಬ್ಬಳ ಅತ್ಯಾಚಾರ, ಕೊಲೆ ಖಂಡಿಸಿ ಬೀದಿಗಿಳಿದಿದ್ದ ಬಂಗಾಳದ ವೈದ್ಯರು 41 ದಿನಗಳ ಬಳಿಕ ಮುಷ್ಕರವನ್ನು ವಾಪಸ್ ತೆಗೆದುಕೊಂಡಿದ್ದಾರೆ. ಶನಿವಾರದಿಂದ ಕರ್ತವ್ಯಕ್ಕೆ ಹಾಜರಾಗುವುದಾಗಿ ತಿಳಿಸಿದ್ದಾರೆ.
Advertisement
ಇಂದು ಮಧ್ಯಾಹ್ನ 3 ಗಂಟೆಗೆ ಸಿಬಿಐ ಕಚೇರಿವರೆಗೆ ರ‍್ಯಾಲಿ ಮಾಡಲಿದ್ದಾರೆ. ತನಿಖೆಯನ್ನು ತ್ವರಿತಗೊಳಿಸಲು ಆಗ್ರಹಿಸಿ ರ‍್ಯಾಲಿ ಹಮ್ಮಿಕೊಂಡಿದ್ದಾರೆ. ನಾಳೆಯಿಂದ ಕರ್ತವ್ಯಕ್ಕೆ ಮರಳಲು ವೈದ್ಯರು ನಿರ್ಧಾರಿಸಿದ್ದಾರೆ. ಇದನ್ನೂ ಓದಿ: ಚಿಕಿತ್ಸೆ ಪಡೆಯುತ್ತಿದ್ದ 27ರ ಒಡಿಶಾ ಗಾಯಕಿ ರುಕ್ಸಾನಾ ಬಾನೊ ಆಸ್ಪತ್ರೆಯಲ್ಲೇ ಸಾವು!
Advertisement
Advertisement
ಪ್ರಕರಣ ಸಂಬಂಧ ಮೂವರು ಹಿರಿಯ ಅಧಿಕಾರಿಗಳನ್ನು ಈಗಾಗಲೇ ಸರ್ಕಾರ ವಜಾಗೊಳಿಸಿದೆ. ಇತರೆ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪಿದ ಬಳಿಕ ಮುಷ್ಕರ ನಿಲ್ಲಿಸಲು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ.
Advertisement
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿನ್ನೆಯಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಬುಧವಾರ ನಡೆದ ವೈದ್ಯರೊಂದಿಗಿನ ಕೊನೆಯ ಸಭೆಗೆ ಹಾಜರಾದ ಮುಖ್ಯ ಕಾರ್ಯದರ್ಶಿಗಳೇ ಭದ್ರತೆಗೆ ಸಂಬಂಧಿಸಿದಂತೆ ಅವರ ಬೇಡಿಕೆಗಳು ಮತ್ತು ಸಲಹೆಗಳನ್ನು ಸ್ವೀಕರಿಸಿದ್ದರು. ಇದನ್ನೂ ಓದಿ: ಬಿಹಾರದಲ್ಲಿ 80 ಕ್ಕೂ ಅಧಿಕ ದಲಿತರ ಮನೆಗಳಿಗೆ ಬೆಂಕಿ: ಎನ್‌ಡಿಎ ಆಡಳಿತದ ರಾಜ್ಯದಲ್ಲಿ ಜಂಗಲ್ ರಾಜ್ ಎಂದ ಕಾಂಗ್ರೆಸ್
ಇಂದು ಮುಂಜಾನೆ ಅವರು ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಕರ್ತವ್ಯದ ಕೊಠಡಿಗಳು, ವಾಶ್‌ರೂಮ್‌ಗಳು, ಸಿಸಿಟಿವಿಗಳು, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯ ನಿಯೋಜನೆ, ರಾತ್ರಿಯಲ್ಲಿ ಕಣ್ಗಾವಲುಗಾಗಿ ಮಹಿಳಾ, ಮೊಬೈಲ್ ಪೊಲೀಸ್ ತಂಡಗಳು, ಕೇಂದ್ರ ಸಹಾಯವಾಣಿ ಮತ್ತು ಕೇಂದ್ರೀಯ ಸಹಾಯವಾಣಿಗಳ ಸಮರ್ಪಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ವಿವರವಾದ ಸೂಚನೆಗಳನ್ನು ನೀಡಿದರು.