ಕೋಲ್ಕತ್ತಾ: ದೀಪಾವಳಿ ಹಬ್ಬದ ಪ್ರಯುಕ್ತ ಫೋನ್ ಆರ್ಡರ್ ಮಾಡಿದ ಸಂಸದರೊಬ್ಬರಿಗೆ ಆನ್‍ಲೈನ್ ಸಂಸ್ಥೆ ಎರಡು ಕಲ್ಲನ್ನು ಕಳುಹಿಸಿದೆ.
ಪಶ್ಚಿಮ ಬಂಗಾಳದ ಮಾಲ್ಡಾ ಕ್ಷೇತ್ರದ ಬಿಜೆಪಿ ಸಂಸದ ಖಾಗನ್ ಮುರ್ಮು ಅವರು ದೀಪಾವಳಿ ಹಬ್ಬಕ್ಕೆಂದು ಇ-ಕಾಮರ್ಸ್ ಎಂಬ ಆನ್‍ಲೈನ್ ಕಂಪನಿಯ ಮೂಲಕ ಸ್ಯಾಮ್ಸಂಗ್ ಕಂಪನಿಯ ಮೊಬೈಲ್ ಫೋನ್ ಅನ್ನು ಆರ್ಡರ್ ಮಾಡಿದ್ದಾರೆ. ಆದರೆ ಫೋನಿನ ಬದಲು ಅವರಿಗೆ ಎರಡು ಕಲ್ಲನ್ನು ಪಾರ್ಸೆಲ್ ಮಾಡಲಾಗಿದೆ.
Advertisement
Advertisement
ಈ ವಿಚಾರದ ಬಗ್ಗೆ ಮಾತನಾಡಿರುವ ಮುರ್ಮು ಅವರು ಸೋಮವಾರ ಬೆಳಗ್ಗೆ ಪಾರ್ಸೆಲ್ ಬಂದಿದೆ. ಆಗ ನಾನು ಮನೆಯಲ್ಲಿ ಇರಲಿಲ್ಲ. ನನ್ನ ಹೆಂಡತಿ ಪಾರ್ಸೆಲ್ ಪಡೆದು 11,999 ರೂ ಕ್ಯಾಶ್ ನೀಡಿದ್ದಾಳೆ. ನಂತರ ನಾನು ಮನೆಗೆ ಬಂದು ಬಾಕ್ಸ್ ತರೆದು ನೋಡಿದಾಗ ಅಲ್ಲಿ ಎರಡು ಕಲ್ಲುಗಳು ಮಾತ್ರ ಇದ್ದವು. ವಿಶೇಷವೆಂದರೆ ನಾವು ಸ್ಯಾಮ್ಸಂಗ್ ಮೊಬೈಲ್ ಬುಕ್ ಮಾಡಿದರೆ ಅವರು ರೆಡ್‍ಮಿ ಮೊಬೈಲ್ ಬಾಕ್ಸ್ ನಲ್ಲಿ ಕಲ್ಲನ್ನು ಪಾರ್ಸೆಲ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
Advertisement
ನಾನು ಯಾವತ್ತು ಆನ್‍ಲೈನ್ ಅಲ್ಲಿ ವ್ಯಾಪಾರ ಮಾಡಿದ ವ್ಯಕ್ತಿ ಅಲ್ಲ. ಆದರೆ ಇದನ್ನು ನನ್ನ ಮಗ ನನಗಾಗಿ ಬುಕ್ ಮಾಡಿದ್ದ. ಆದರೆ ನಾವು ತೆಗೆಯುವ ಮುಂಚೆಯೇ ಯಾರೋ ಬಾಕ್ಸ್ ಓಪನ್ ಮಾಡಿದ್ದಾರೆ. ಬೇಕೆಂದೆ ಎರಡು ಕಲ್ಲು ಇಟ್ಟುಕೊಟ್ಟಿದ್ದಾರೆ. ಈ ಸಂಬಂಧ ನಾನು ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ವಿಷಯವನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವರಿಗೆ ವರದಿ ಮಾಡುತ್ತೇನೆ ಎಂದು ಹೇಳಿದ್ದಾರೆ.
Advertisement
ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಮಾಲ್ಡಾ ಠಾಣೆಯ ಪೊಲೀಸ್ ಅಧಿಕಾರಿ ಅಲೋಕ್ ರಾಜೋರಿಯಾ, ಇದು ಸಂಸ್ಥೆಯಿಂದ ಆಗಿರುವ ಸಮಸ್ಯೆ ಅಲ್ಲ. ಇದರ ಮಧ್ಯೆ ಯಾರೋ ಬೇಕಂತಲೇ ಹೀಗೆ ಮಾಡಿದ್ದಾರೆ. ನಾವು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.