ನವದೆಹಲಿ: ಬಾಂಗ್ಲಾದೇಶದ ಯುವ ಕ್ರಿಕೆಟರ್ ಸೈಫ್ ಹಸನ್ ದಂಡ ತೆತ್ತಿದ್ದಾರೆ.
ಭಾರತದ ಪ್ರವಾಸ ಕೈಗೊಂಡಿದ್ದ ಬಾಂಗ್ಲಾ ತಂಡವು ಟಿ-20 ಹಾಗೂ ಟೆಸ್ಟ್ ಪಂದ್ಯದಲ್ಲಿ ಸೋತು ಸೋಮವಾರ ತವರಿಗೆ ತೆರಳಿತ್ತು. ಆದರೆ ಸೈಫ್ ಹಸನ್ ಸೇರಿದಂತೆ ಕೆಲ ಆಟಗಾರರು ಭಾರತದಲ್ಲಿ ಉಳಿದು, ಬುಧವಾರ ತಾಯ್ನಾಡಿಗೆ ತೆರಳುತ್ತಿದ್ದರು. ಈ ವೇಳೆ ಅವರ ವೀಸಾ ಪರಿಶೀಲನೆ ಮಾಡಿದಾಗ ಸೈಫ್ ಹಸನ್ ಅವರಿಗೆ ನೀಡಿದ್ದ 6 ತಿಂಗಳ ಅವಧಿಯ ವೀಸಾ ಎರಡು ದಿನಗಳ ಹಿಂದೆಯೇ ಮುಗಿದಿತ್ತು. ಹೀಗಾಗಿ 21,600 ರೂ. ದಂಡ ಪಾವತಿಸಿದ್ದಾರೆ.
Advertisement
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಾಂಗ್ಲಾದೇಶದ ಡೆಪ್ಯೂಟಿ ಹೈ ಕಮಿಷನರ್ ತೌಫೀಕ್ ಹಸನ್, ಸೈಫ್ ಹಸನ್ ಅವರ ವೀಸಾ ಎರಡು ದಿನಗಳ ಹಿಂದೆ ಮುಗಿದಿದೆ. ವಿಮಾನ ನಿಲ್ದಾಣಕ್ಕೆ ಬಂದಾಗ ಇದರ ಅರಿವು ಅವರಿಗಾಗಿದೆ. ಈಗಾಗಲೇ ಟಿಕೆಟ್ ಕಾಯ್ದಿರಿಸಿದ್ದ ವಿಮಾನದಲ್ಲಿ ತಾಯ್ನಾಡಿಗೆ ಹಿಂದಿರುಗಲು ಅವರಿಗೆ ಸಾಧ್ಯವಾಗಲಿಲ್ಲ. ವೀಸಾ ಅವಧಿಗಿಂತಲೂ ಹೆಚ್ಚು ದಿನ ಭಾರತದಲ್ಲಿ ಉಳಿದುಕೊಂಡ ಪರಿಣಾಮ ತಂಡ ತೆತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
Advertisement
ಈ ಸಮಸ್ಯೆಯನ್ನು ಬಗೆಹರಿಸಿ ಸೈಫ್ ಹಸನ್ ಅವರನ್ನು ತಾಯ್ನಾಡಿಗೆ ಹಿಂದಿರುಗಲು ಭಾರತವು ನೆರವಾಗಿದೆ. ಹೀಗಾಗಿ ಭಾರತೀಯ ಹೈ ಕಮಿಷನ್‍ಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
Advertisement
ಭಾರತ ಪ್ರವಾಸದಲ್ಲಿದ್ದ ಬಾಂಗ್ಲಾ ತಂಡವು ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 2-1 ಅಂತರದಿಂದ ಹಾಗೂ ಪಿಂಕ್ ಬಾಲ್ ಟೆಸ್ಟ್ ಸೇರಿದಂತೆ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದಿಂದ ಸೋತಿದೆ. ಬಾಂಗ್ಲಾ ತಂಡದಲ್ಲಿ ಹೆಚ್ಚುವರಿ ಆರಂಭಿಕ ಬ್ಯಾಟ್ಸ್‌ಮನ್ ಸೈಫ್ ಹಸನ್ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಕೈ ಬೆರಳು ಗಾಯಕ್ಕೆ ತುತ್ತಾಗಿದ್ದರು.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಪಿಂಕ್-ಬಾಲ್ ಟೆಸ್ಟ್ ಭಾನುವಾರ ಮುಕ್ತಾಯವಾಗಿತ್ತು. ಈ ಮೂಲಕ ಭಾರತವು ಮೊದಲ ಪಿಂಕ್ ಬಾಲ್ ಟೆಸ್ಟ್ ಅನ್ನು ಒಂದು ಇನ್ನಿಂಗ್ಸ್ ಹಾಗೂ 46 ರನ್‍ಗಳಿಂದ ಗೆದ್ದಿತ್ತು. ಬಾಂಗ್ಲಾ ತಂಡದ ಕೆಲ ಆಟಗಾರರು ಸೋಮವಾರ ತರವಿಗೆ ತೆರಳಿದ್ದರು.