ಕೋಲಾರ: ಕೊಲೆ ಮಾಡಿ ತಲೆಯೊಂದಿಗೆ ನಾಪತ್ತೆಯಾಗಿದ್ದ ಆರೋಪಿ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ರತ್ನಪ್ಪ ಆರೋಪಿಯಾಗಿದ್ದಾನೆ. ಯಶೋದಮ್ಮ ಮೃತಳಾಗಿದ್ದಾಳೆ. ಕಳೆದ ಮೇ ತಿಂಗಳಲ್ಲಿ ತಲೆ ಇಲ್ಲದೆ ಪತ್ತೆಯಾಗಿದ್ದ ಮಹಿಳೆ ಕೊಲೆ ಆರೋಪಿಯನ್ನ ಬಂಧಿಸುವಲ್ಲಿ ಬೇತಮಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ. ಕೋಲಾರದ ಕೆಜಿಎಫ್ ತಾಲೂಕಿನ ಪಾಪೇನಹಳ್ಳಿ ಗ್ರಾಮದಲ್ಲಿ ಮೇ 4ರಂದು ಭೀಕರವಾಗಿ ತಲೆ ಕಡಿದು ಕೊಲೆ ಮಾಡಲಾಗಿತ್ತು. ಇದೆ ಗ್ರಾಮದ ಮಹೇಶ್ ಎಂಬುವವರ ಜಮೀನಿನಲ್ಲಿ ತಲೆಯೇ ಇಲ್ಲದ ಮಹಿಳೆಯ ಶವವೊಂದು ಕೈ ಮಾತ್ರ ಮಣ್ಣಿನಿಂದ ಹೊರಕ್ಕೆ ಕಾಣುವಂತೆ ಮುಚ್ಚಲಾಗಿತ್ತು. ಇದನ್ನೂ ಓದಿ: ಕೋಗಿಲೆ ಕಂಠದ ರಾನು ಮಂಡಲ್ ಜೀವನ ಆಧರಿಸಿ ಬರಲಿದೆ ಬಯೋಪಿಕ್
Advertisement
Advertisement
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಪಾಪೇನಹಳ್ಳಿ ಗ್ರಾಮದ ಯಶೋದಮ್ಮ ಎಂಬಾಕೆಯೆ ಕೊಲೆಯಾದ ಮಹಿಳೆ ಹಾಗೂ ಗ್ರಾಮದ ರತ್ನಪ್ಪ ಕೊಲೆ ಮಾಡಿದವನು ಎಂದು ಪತ್ತೆ ಹಚ್ಚಿದ್ದಾರೆ. ಕೊಲೆ ಮಾಡಿದ ರತ್ನಪ್ಪ ಜಮೀನು ಮಾಲೀಕ ಮಹೇಶ್‍ರಿಗೆ ಮೊಬೈಲ್ ಕರೆ ಮಾಡಿ ಜಮೀನಿನಲ್ಲಿ ಒಂದು ಶವ ಇದೆ ಎಂದು ಹೇಳಿದ್ದ, ಅಂದಿನಿಂದ ಆತನ ಹಿಂದೆ ಬಿದ್ದ ಪೊಲೀಸರಿಗೆ ರತ್ನಪ್ಪ ಮಾಡಿದ ಕೃತ್ಯ ಬಯಲಾಗಿದೆ. ಈ ಹಿಂದೆ ಇಬ್ಬರು ಮಹಿಳೆಯರ ಕೊಲೆ ಕೃತ್ಯದಲ್ಲಿಯೂ ಭಾಗಿಯಾಗಿದ್ದ ರತ್ನಪ್ಪ ಒಂದು ರೀತಿಯ ಕಿರಾತಕನಾಗಿದ್ದಾನೆ.ಇದನ್ನೂ ಓದಿ: ಹೆದ್ದಾರಿ ಯೋಜನೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕಟೀಲ್ ಸೂಚನೆ
Advertisement
Advertisement
ಮಹಿಳೆಯರನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲುವುದು ಇವನ ಸೈಕೋತನವಾಗಿದ್ದು, ಕೊಲೆ ಮಾಡಿ ತನ್ನ ತಮ್ಮ ಮಹೇಶ್ ಮೇಲೆಯೇ ಆರೋಪ ಬಂದರೆ ನಾನು ಜಮೀನು ಅನುಭವಿಸಿಕೊಂಡು ಇರಬಹುದು ಎಂಬ ಲೆಕ್ಕಾಚಾರ ಹಾಕಿದ್ದ. ಆದರೆ ಈಗ ಮೂರನೆ ಕೊಲೆಯ ಆರೋಪದಲ್ಲಿ ಜೈಲುಪಾಲಾಗಿದ್ದಾನೆ.