ಕೋಲಾರ: ಎಸ್‍ಎನ್‍ಆರ್ ಜಿಲ್ಲಾಸ್ಪತ್ರೆಗೆ ರಾಷ್ಟ್ರೀಯ ಗುಣಮಟ್ಟದ ಖಾತ್ರಿ ಯೋಜನೆಯ ಮಾನ್ಯತೆ ಸಿಕ್ಕಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸಂತೋಷ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಸ್ಪತ್ರೆಯ 7 ಇಲಾಖೆಗಳಿಗೆ ಗುಣಮಟ್ಟ ಹಾಗೂ ಸುಧಾರಣೆಯಲ್ಲಿ ರಾಷ್ಟ್ರೀಯ ಮಾನ್ಯತೆ ಪಡೆದಿರುವುದು ಎಸ್‍ಎನ್‍ಆರ್ ಗೆ ಸಿಕ್ಕ ಮತ್ತೊಂದು ಹಿರಿಮೆಯಾಗಿದೆ. ಆದ್ದರಿಂದಾಗಿ ಜಿಲ್ಲಾಸ್ಪತ್ರೆ ಈ ಮಾನ್ಯತೆ ಪಡೆಯಲು ಶ್ರಮವಹಿಸಿದ ಎಲ್ಲರಿಗೂ ಡಿ.ಸಿ ಅವರು ಅಭಿನಂದನೆ ಸಲ್ಲಿಸಿದರು. ಕೋಲಾರ, ಹಾಸನ, ಧಾರವಾಡ, ತುಮಕೂರು ಸೇರಿ ರಾಜ್ಯದ ನಾಲ್ಕು ಜಿಲ್ಲಾಸ್ಪತ್ರೆಗಳಿಗೆ ಈ ಮಾನ್ಯತೆ ಸಿಕ್ಕಿದೆ.
Advertisement
Advertisement
ಉತ್ತರ ಪ್ರದೇಶ ಹಾಗೂ ಜಮ್ಮು ಕಾಶ್ಮೀರದ ನುರಿತ ವೈದ್ಯರ ತಂಡ ಗುಪ್ತವಾಗಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಗುಣಮಟ್ಟ ಪರಿಶೀಲನೆ ನಡೆಸಿದ್ದರು. ಈ ವೇಳೆ ಆಸ್ಪತ್ರೆಯ ಹೆರಿಗೆ ವಿಭಾಗ, ಪ್ರಧಾನ ಶಸ್ತ್ರಚಿಕಿತ್ಸಾ ವಿಭಾಗ, ಪ್ರಸವ ಪೂರ್ವ-ನಂತರ, ನವಜಾತ ಶಿಶು ಘಟಕ, ಮಕ್ಕಳ ವಿಭಾಗ, ರಕ್ತ ನಿಧಿ ಕೇಂದ್ರ ಸೇರಿದಂತೆ ಜಿಲ್ಲಾಸ್ಪತ್ರೆಯ 7 ಇಲಾಖೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಗಮನಿಸಿದ್ದಾರೆ. ಆದ್ದರಿಂದ ಆಸ್ಪತ್ರೆಯ 7 ಇಲಾಖೆಗಳು ರಾಷ್ಟ್ರೀಯ ಗುಣಮಟ್ಟ ಖಾತ್ರಿ ಯೋಜನೆಗೆ ಒಳಪಟ್ಟಿದೆ.
Advertisement
ವೈದ್ಯಾಧಿಕಾರಿಗಳು ಭೇಟಿ ನೀಡಿ ಆಸ್ಪತ್ರೆಯ 7 ಇಲಾಖೆಗಳಿಗೂ 86 ರಷ್ಟು ಅಂಕಗಳನ್ನ ಗುಣಮಟ್ಟಕ್ಕೆ ನೀಡಿರುವುದು ಸಂತಸದ ವಿಷಯವಾಗಿದೆ. ಈ ಯೋಜನೆಯಡಿಯಲ್ಲಿ ಆಸ್ಪತ್ರೆಯ ಪ್ರತಿ ಬೆಡ್‍ಗೆ 10 ಸಾವಿರ ಹಣ ದೊರೆಯಲಿದ್ದು, ಜಿಲ್ಲಾಸ್ಪತ್ರೆ ಮತ್ತಷ್ಟು ಅಭಿವೃದ್ಧಿಯಾಗಲಿದೆ. ಇದಕ್ಕೆ ಶ್ರಮವಹಿಸಿದ ಜಿಲ್ಲಾಸ್ಪತ್ರೆ ಎಲ್ಲಾ ಸಿಬ್ಬಂದಿ, ಅಧಿಕಾರಿಗಳು, ವೈದ್ಯರಿಗೆ ಅಭಿನಂದನೆ ಸಲ್ಲಿಸಿ, ಸಿಎಸ್‍ಆರ್ ಫಂಡ್ ಮೂಲಕ ಮತ್ತಷ್ಟು ಆಸ್ಪತ್ರೆಗೆ ಬೇಕಾದ ಸಲಕರಣೆಗಳನ್ನ ಒದಗಿಸುವುದಾಗಿ ಡಿಸಿ ಭರವಸೆ ನಿಡಿದರು.