– 2 ತಿಂಗಳ ಹಿಂದೆ ಮನೆ ವಾಲಿದ್ದು, ನಿರ್ಲಕ್ಷ್ಯಸಿದ್ದ ಮಾಲೀಕ
ಕೋಲಾರ: ಏಕಾಏಕಿ ಮೂರಂತಸ್ತಿನ ಕಟ್ಟಡ ಕುಸಿದು ಮುಂಭಾಗದ ಖಾಸಗಿ ಶಾಲೆಗೆ ಕಾಂಪೌಂಡ್‌ಗೆ ಹಾನಿಯಾಗಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ (Bangarapete) ಪಟ್ಟಣದ ಮುದಲಿಯಾರ್ ಬಡವಾಣೆಯಲ್ಲಿ ನಡೆದಿದೆ.
Advertisement
ಬೂದಿಕೋಟೆ ರಾಜ್‌ಕುಮಾರ್ ಎಂಬುವವರಿಗೆ ಸೇರಿದ ಕಟ್ಟಡ ಕುಸಿದಿದೆ. ಕಟ್ಟಡ ವಾಲುತ್ತಿದ್ದಂತೆ ಮನೆಯಲ್ಲಿದ್ದ ನಿವಾಸಿಗಳು ಹೊರಗೆ ಓಡಿ ಬಂದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕುಸಿದ ಪರಿಣಾಮ ಮನೆಯ ಎದುರಿಗಿದ್ದ ಶಾಲೆಯ ಗೋಡೆಗೆ ಹಾನಿಯಾಗಿದೆ.ಇದನ್ನೂ ಓದಿ:7.89 ಲಕ್ಷಕ್ಕೆ ಸ್ಕೋಡಾ ಕೈಲಾಕ್ ಕಾರು ಬಿಡುಗಡೆ
Advertisement
Advertisement
ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ಜೆಸಿಬಿಗಳ ಮುಖಾಂತರ ರಸ್ತೆಯಲ್ಲಿರುವ ಗೋಡೆಯ ಅವಶೇಷಗಳ ತೆರವು ಕಾರ್ಯ ನಡೆದಿದೆ. ನೆಲಮಹಡಿಯ ಮನೆಯ ನವೀಕರಣ ವೇಳೆ ಗೋಡೆ ಕುಸಿದಿದೆ. ಕಟ್ಟಡ ಕುಸಿತದ ಮಾಹಿತಿ ಹಿನ್ನೆಲೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕೆಲವೇ ಕ್ಷಣದಲ್ಲಿ ಮನೆಯಲ್ಲಿದ್ದ ಮೂರು ಕುಟುಂಬ ಖಾಲಿ ಮಾಡಿಸಿದ್ದಾರೆ. ಜೊತೆಗೆ ಇದರಿಂದ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
Advertisement
ಕಳೆದ ಎರಡು ತಿಂಗಳ ಹಿಂದೆಯೇ ಮನೆ ವಾಲಿದೆ. ಈ ಕುರಿತು ಮಾಲೀಕನಿಗೆ ಸಗೊತ್ತಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡದೆ ನಿರ್ಲಕ್ಷ್ಯಸಿದ್ದರು. ಇದೀಗ ಕಟ್ಟಡ ಮಾಲೀಕನ ಮೇಲೆ ಕ್ರಮ ತೆಗೆದುಕೊಳ್ಳವ ಸಾಧ್ಯತೆಯಿದ್ದು, ಬಂಗಾರಪೇಟೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಪುರಸಭೆ ಅಧಿಕಾರಿಗಳೊಂದಿಗೆ ಶಾಸಕ ನಾರಾಯಣಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ: ಹೊಸ ಮಾರುತಿ ಡಿಸೈರ್‌ಗೆ ಸಿಕ್ಕಿತು 5 ಸ್ಟಾರ್ ಸೇಫ್ಟಿ ರೇಟಿಂಗ್