ಕೋಲಾರ: ಜಿಲ್ಲೆಯ ಬೇತಮಂಗಲ ಪಿಎಸ್‍ಐ ಹೊನ್ನೇಗೌಡ ದುರ್ವತನೆ ಖಂಡಿಸಿ, ಅವರನ್ನು ಅಮಾನತು ಮಾಡಬೇಕು ಎಂದು ಭೋವಿ ಸಮುದಾಯದ ಮುಖಂಡರು ಠಾಣೆಯ ಎದುರು ಪ್ರತಿಭಟನೆ ನಡೆಸಿ, ಒತ್ತಾಯಿಸಿದ್ದಾರೆ.
ಕೆಜಿಎಫ್ ತಾಲೂಕಿನ ಬೇತಮಂಗಲ ಪೊಲೀಸ್ ಠಾಣೆಗೆ ಪೆಟ್ರೋಲ್ ಕ್ಯಾನ್ ಹಿಡಿದು ಬಂದ ಪ್ರತಿಭಟನಾಕಾರರು, ಹೊನ್ನೇಗೌಡ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ತನಿಖೆ ನೆಪದಲ್ಲಿ ಪ್ರಕರಣ ಕೈಬಿಡದೆ, ಪಿಎಸ್‍ಐ ಹೊನ್ನೇಗೌಡ ಅವರನ್ನು ಅಮಾನತು ಮಾಡಬೇಕು. ಒಂದು ವೇಳೆ ನಮಗೆ ಸೂಕ್ತ ನ್ಯಾಯ ಸಿಗದಿದ್ದರೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಧಿಕಾರಿಗಳಿ ಎಚ್ಚರಿಕೆ ನೀಡಿದ್ದಾರೆ.
Advertisement
ಬಂಗಾರಪೇಟೆ ತಾಲೂಕಿನ ಮಹದೇವಪುರ ಗ್ರಾಮದ ನಿವಾಸಿ ವೆಂಕಟೇಶ್ ಹಾಗೂ ಮುಖಂಡ ಬೇಟಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಪ್ರತಿಭಟನಾಕಾರರು ಪೆಟ್ರೋಲ್ ಕ್ಯಾನ್ ಹಿಡಿದು ಠಾಣೆಗೆ ಬಂದಿದ್ದರಿಂದ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.
Advertisement
Advertisement
ಬೇತಮಂಗಲ ಠಾಣೆಯ ವ್ಯಾಪ್ತಿಯಲ್ಲಿ ಭೋವಿ ಜನರನ್ನು ಇಲ್ಲದಂತೆ ಮಾಡುತ್ತೇನೆಂದು ಹೊನ್ನೇಗೌಡ ಹೇಳಿಕೆ ನೀಡಿದ್ದಾರೆ. ಹೀಗಾಗಿ ಪ್ರಕರಣವೊಂದರ ಸಂಬಂಧ ಆರೋಪಿಗಳನ್ನು ಠಾಣೆಗೆ ಕರೆಸಿಕೊಂಡು ಮನಬಂದಂತೆ ಹಲ್ಲೆ ಮಾಡಿ, ಅವರಿಂದ ಡ್ಯಾನ್ಸ್ ಮಾಡಿಸಿದ್ದಾರೆ ಎಂದು ಭೋವಿ ಸಮುದಾಯದ ಮುಖಂಡ ವೆಂಕಟೇಶ್ ಆರೋಪಿಸಿದ್ದಾರೆ.
Advertisement
ಏನಿದು ಪ್ರಕರಣ?:
ಕೆಜಿಎಫ್ ತಾಲೂಕಿನ ರಾಮಸಾಗರದಲ್ಲಿ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿತ್ತು. ಇದೇ ವಿಚಾರವಾಗಿ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು. ಈ ವೇಳೆ ಠಾಣೆಯ ಪಿಎಸ್‍ಐ ಹೊನ್ನೇಗೌಡ ತೆಲುಗಿನ ಗಬ್ಬರ್ ಸಿಂಗ್ ಸಿನಿಮಾದ ರೀತಿಯಲ್ಲಿ ಸಾಂಗ್ ಪ್ಲೇ ಮಾಡಿ ಡಾನ್ಸ್ ಮಾಡುವಂತೆ ಸೂಚಿಸಿದ್ದರು.
ಪಿಎಸ್‍ಐ ಹಾಡಿಗೆ ಡಾನ್ಸ್ ಮಾಡುತ್ತಾ ಇರುವ ವಿಡಿಯೋ ವೈರಲ್ ಆಗಿತ್ತು. ಇಬ್ಬರು ವ್ಯಕ್ತಿಗಳಿಗೆ ಥಳಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ದೃಶ್ಯಗಳನ್ನು ವಿಡಿಯೋ ಸೆರೆಯಾಗಿತ್ತು. ಹಾಡಿಗೆ ತಕ್ಕಂತೆ ಡಾನ್ಸ್ ಮಾಡಿದರೆ ಮಾತ್ರ ನೀನು ಮನೆಗೆ ಹೋಗಲು ಸಾಧ್ಯ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews