ಕೋಲಾರ: ಕೊರೊನಾ ಲಾಕ್‍ಡೌನ್ ಹಿನ್ನೆಲೆ ಕೋಲಾರ ವರದರಾಜ ಸ್ವಾಮಿ ದೇವಾಲಯದ ಅರ್ಚಕರು ಹಾಗೂ ಸಿಬ್ಬಂದಿ ಹಲವೆಡೆ ಬಡವರಿಗೆ ದಿನ ನಿತ್ಯದ ಸಾಮಗ್ರಿಗಳನ್ನು ವಿತರಣೆ ಮಾಡಿದರು.
ನಿತ್ಯ ಕೂಲಿ ಮಾಡಿ ಬದುಕುತ್ತಿದ್ದ ಜನರಿಗೆ ಲಾಕ್‍ಡೌನ್ ಹಿನ್ನೆಲೆ ನಿತ್ಯದ ಬದುಕು ಕಷ್ಟವಾಗಿದೆ. ಹೀಗಾಗಿ ಸುಮಾರು ನೂರು ಜನರಿಗೆ ಅರ್ಚಕರುಗಳು ಅಕ್ಕಿ, ಬೇಳೆ, ಎಣ್ಣೆ, ಉಪ್ಪು, ತರಕಾರಿ ಸೇರಿದಂತೆ ನಿತ್ಯದ ವಸ್ತುಗಳನ್ನ ಬ್ಯಾಗ್‍ನಲ್ಲಿ ಸಂಗ್ರಹಿಸಿ, ಕೋಲಾರ ನಗರದ ವಿನೋಭ ನಗರದ ದಲಿತ ಕಾಲೋನಿಗಳಲ್ಲಿ ಹಂಚಿಕೆ ಮಾಡಿದರು.
Advertisement
Advertisement
ಇದೇ ವೇಳೆ ಮುಂದಿನ ದಿನಗಳಲ್ಲಿ ಸರಿ ಸುಮಾರು 1,000 ಕುಟುಂಬಗಳಿಗೆ ಹೀಗೆ ದವಸ ದಾನ್ಯಗಳನ್ನು ವಿತರಣೆ ಮಾಡುವುದಾಗಿ ಹೇಳಿದರು. ಜಾತಿ-ಭೇದ ಮರೆತು ಹಸಿದವರಿಗೆ ಅನ್ನ ಕೊಡುವ ಕೆಲಸ ಮಾಡಲಾಗುತ್ತಿದೆ ಇದರಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟ ಪಡಿಸಿದರು.