ಕೋಲಾರ: ದೇಶದ ವಿವಿಧ ಗಡಿ ಭಾಗಗಳಲ್ಲಿ ಸುಮಾರು 22 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿ ತವರಿಗೆ ಮರಳಿದ ಇಬ್ಬರು ವೀರ ಯೋಧರಿಗೆ ಕೋಲಾರದ ಜನ ಅದ್ಧೂರಿ ಸ್ವಾಗತ ಕೋರಿದರು.
ಕೋಲಾರ ನಗರದ ಸರ್ವಜ್ಞ ಪಾರ್ಕ್ ಬಳಿ ಯೋಧರಿಗೆ ಸಾರ್ವಜನಿಕರು ಹೂಮಾಲೆಯನ್ನು ಹಾಕಿ ಸನ್ಮಾನಿಸಿ ಮೆರವಣಿಗೆ ಮಾಡಿದರು. ಸೇನೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಹಾಗೂ ಗಡಿಯಾಚೆಗೂ ತೆರಳಿ ಸೇವೆ ಸಲ್ಲಿಸಿ ವಾಪಸ್ ಆದ ಇಬ್ಬರು ಯೋಧರಿಗೆ ಆರತಿ ಎತ್ತಿ ಸ್ವಾಗತ ಮಾಡಿದಲ್ಲದೆ, ಹೆಗಲ ಮೇಲೆ ಹೊತ್ತು ಖುಷಿಪಟ್ಟರು.
Advertisement
Advertisement
ಕೋಲಾರ ತಾಲೂಕಿನ ತೊಂಡಾಲ ಗ್ರಾಮದ ಕೃಷ್ಣೇಗೌಡ ಹಾಗೂ ಮಿಟ್ಟೂರು ಗ್ರಾಮದ ಆಂಜಿನಪ್ಪ ಅವರು 22 ವರ್ಷ ಸೇವೆ ಸಲ್ಲಿಸಿ ಇಂದು ವಾಪಸ್ ಆದರು. ಈ ಹಿನ್ನೆಲೆಯಲ್ಲಿ ಕೋಲಾರದ ಟೀಂ ಯೋಧ ನಮನ ಹಾಗೂ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದರು. ಇದೇ ವೇಳೆ ಅವರನ್ನು ಸನ್ಮಾನಿಸಿ ಆತ್ಮೀಯವಾಗಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡುವ ಮೂಲಕ ಅದ್ಧೂರಿ ಸ್ವಾಗತ ಕೋರಿದರು.
Advertisement
Advertisement
ಬಳಿಕ ಮಾತನಾಡಿದ ನಿವೃತ್ತ ಯೋಧರು ಜಮ್ಮು-ಕಾಶ್ಮೀರ, ಕಾಂಗೋ, ವಿಶ್ವ ಶಾಂತಿ ಸೇನಾ ಪಡೆ, ಛತ್ತೀಸ್ ಗಡ್ ನಕ್ಸಲ್ ಪ್ರದೇಶ ಸೇರಿದಂತೆ ವಿವಿಧ ಭಾಗಗಳಲ್ಲಿ ಭಾರತಾಂಭೆ ಸೇವೆ ಸಲ್ಲಿಸಿದ್ದು, ಭಾರತ ಸೇನೆಗೆ ಅವಶ್ಯಕತೆ ಬಿದ್ದಲ್ಲಿ ಮತ್ತೆ ದೇಶ ಸೇವೆಗಾಗಿ ಕರೆ ಬಂದಲ್ಲಿ ನಾವು ಯಾವಾಗಲೂ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.