– ಪತ್ನಿಗೆ ಹೇಳದೆ ಕೇಳದೆ ಪರಾರಿಯಾದ ಪತಿರಾಯ
– ಗಂಡನ ಮನೆ ಮುಂದೆ ಸಂತ್ರಸ್ತ ಗರ್ಭಿಣಿ ಪ್ರತಿಭಟನೆ
ಕೋಲಾರ: ಪೋಷಕರ ವಿರೋಧದ ನಡುವೆ ಪ್ರೀತಿಸಿ ಮದುವೆಯಾದ ಪತಿಗಾಗಿ ಮಹಿಳೆಯೊಬ್ಬಳು ಬೀದಿಯಲ್ಲಿ ಹೋರಾಟ ನಡೆಸುತ್ತಿರುವ ಘಟನೆ ಕೋಲಾರ ತಾಲೂಕಿನ ಕೋಡಿಕಣ್ಣೂರು ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಕೋಡಿಕಣ್ಣೂರು ಗ್ರಾಮದ ಸಲೀಂ ಪತ್ನಿ ಸುಮಯಾ ವಂಚಿಸಿ ಪರಾರಿಯಾದ ಪತಿ. ಸುಮಯಾ ಅವರು 9 ತಿಂಗಳ ಗರ್ಭೀಣಿಯಾಗಿದ್ದು, ಇಬ್ಬರು ಮಕ್ಕಳೊಂದಿಗೆ ಬಿಸಿಲಿನಲ್ಲಿ ಪತಿಯ ಮನೆ ಮುಂದೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.
Advertisement
Advertisement
ಸುಮಯಾ ಜಾತಿ-ಧರ್ಮವನ್ನು ಲೆಕ್ಕಿಸದೇ ಸಲೀಂನನ್ನು ಐದು ವರ್ಷಗಳ ಕಾಲ ಪ್ರೀತಿಸಿದ್ದಳು. ಬಳಿಕ ಪೋಷಕರು, ಧರ್ಮವನ್ನು ಬಿಟ್ಟು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಸಲೀಂನನ್ನು ಮದುವೆಯಾಗಿದ್ದಾಳೆ. ಸಮಯಾ ದಂಪತಿ 11 ವರ್ಷಗಳಿಂದ ಜೊತೆಯಾಗಿ ಸಂಸಾರ ಮಾಡುತ್ತಿದ್ದಾರೆ. ಆದರೆ ಕಳೆದ ಒಂದು ವರ್ಷದ ಹಿಂದೆ ಪರಿಚಯವಾದ ಮಹಿಳೆಯ ಜೊತೆಗೆ ಮದುವೆಯಾಗಿ ಸಲೀಂ ಮದುವೆಯಾಗಿದ್ದಾನೆ. ಅಷ್ಟೇ ಅಲ್ಲದೆ ಆಕೆಯನ್ನು ಕರೆದುಕೊಂಡು ಪರಾರಿಯಾಗಿದ್ದಾರೆ.
Advertisement
ಸಲೀಂಗೆ ಫೋನ್ ಮಾಡಿದರೆ ಸ್ವಿಚ್ ಆಫ್ ಬರುತ್ತಿದೆ. ಅತ್ತೆ ಮಾವನ ಮನೆಯ ಬಾಗಿಲು ತಟ್ಟಿದರೂ ಪ್ರಯೋಜನವಾಗಿಲ್ಲ. ಪೊಲೀಸ್ ಠಾಣೆಗೆ ಹೋದರೂ ನ್ಯಾಯ ಸಿಗದ ಹಿನ್ನೆಲೆ ಸುಮಯಾ ತನ್ನ ಎರಡು ಮಕ್ಕಳೊಂದಿಗೆ ಪ್ರತಿಭಟನೆಗೆ ಇಳಿದಿದ್ದಾರೆ. ಸುಮಯಾ ಅವರು 9 ತಿಂಗಳ ತುಂಬು ಗರ್ಭಿಣಿಯಾಗಿರುವ ಆಗೋ ಇಗೋ ಹೆರಿಗೆ ಆಗುವ ಭೀತಿಯಲ್ಲಿದ್ದಾರೆ.
Advertisement
ಕೋಡಿ ಕಣ್ಣೂರು ಗ್ರಾಮದಲ್ಲಿರುವ ಅತ್ತೆ ಸಾಹಿನ್ ಹಾಗೂ ಮಾವ ಅಲ್ಲಾಭಕ್ಷ್ ಮನೆಯ ಬಾಗಿಲು ಎಷ್ಟೇ ತಟ್ಟಿದರೂ ಪಾಪಿಗಳು ತಮ್ಮ ಮನಸು ಬದಲಾಯಿಸದೆ ಸುಮಯಾ ಅವರನ್ನು ಮನೆಗೆ ಸೇರಿಸಿಕೊಳ್ಳುತ್ತಿಲ್ಲ. ವೃತ್ತಿಯಲ್ಲಿ ಮರದ ಕೆಲಸ ಮಾಡುತ್ತಿರುವ ಸಲೀಂ 11 ವರ್ಷಗಳಿಂದ ತನ್ನ ಮನೆಯವರಿಗೂ ತಿಳಿಸದೆ ಸುಮಯಾ ಅವರನ್ನು ಕೋಲಾರದ ಮಾಲೂರಿನಲ್ಲಿ ಇರಿಸಿ ಸಂಸಾರ ನಡೆಸುತ್ತಿದ್ದ. ಸುಮಯಾ ಅವರನ್ನು ಒಮ್ಮೆಯೂ ತನ್ನ ಮನೆಗೆ ಕರೆದುಕೊಂಡು ಬಂದಿರಲಿಲ್ಲವಂತೆ.