ಬೆಂಗಳೂರು: ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರ ಕಾಂಗ್ರೆಸ್‌ಗೆ ಕಗ್ಗಂಟಾಗಿದೆ. ಸಚಿವ ಕೆ.ಹೆಚ್.ಮುನಿಯಪ್ಪ (K.H.Muniyappa) ಅವರ ಅಳಿಯನಿಗೆ ಕೋಲಾರ (Kolar) ಟಿಕೆಟ್ ಕೊಟ್ಟರೆ ರಾಜೀನಾಮೆ ನೀಡುವುದಾಗಿ ಹಾಲಿ ಶಾಸಕರು ಮತ್ತು ಪರಿಷತ್ ಸದಸ್ಯರು ಪಕ್ಷಕ್ಕೆ ಬೆದರಿಕೆ ಒಡ್ಡಿದ್ದಾರೆ.
ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಕೋಲಾರ ಟಿಕೆಟ್ ಖಚಿತವಾದರೆ ರಾಜೀನಾಮೆ ನೀಡುವುದಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಬಣ ಬೆದರಿಕೆ ಒಡ್ಡಿದೆ. ಆದರೆ ಎಲ್ಲೂ ಬಹಿರಂಗ ಹೇಳಕೆ ಕೊಟ್ಟಿಲ್ಲ.
Advertisement
Advertisement
ತಮ್ಮ ಡಿಮ್ಯಾಂಡ್‌ಗೆ ಹೈಕಮಾಂಡ್ ಮಣಿಯದಿದ್ದರೆ ರಾಜೀನಾಮೆ ಕೊಡ್ತೀವಿ ಎಂದು ಕೋಲಾರ ಶಾಸಕರು ಹೇಳುತ್ತಿದ್ದಾರೆ. ಎಂಎಲ್ಸಿ ಅನಿಲ್ ಕುಮಾರ್, ಶಾಸಕ ನಂಜೇಗೌಡ, ಕೊತ್ತೂರು ಮಂಜುನಾಥ್, ಬಂಗಾರಪೇಟೆ ನಾರಾಯಣಸ್ವಾಮಿ ಸೇರಿ ಪ್ರಮುಖ ಶಾಸಕರಿಂದ ಪಕ್ಷಕ್ಕೆ ಎಚ್ಚರಿಕೆ ಸಂದೇಶ ರವಾನೆಯಾಗಿದೆ.
Advertisement
ಕೆಲ ಕಾಂಗ್ರೆಸ್ ನಾಯಕರಿಗೆ ಕರೆ ಮಾಡಿ ರಾಜೀನಾಮೆ ಕೊಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಆದರೂ ಎಲ್ಲೂ ಬಹಿರಂಗವಾಗಿ ರಾಜೀನಾಮೆ ಕೊಡುವ ಬಗ್ಗೆ ಮಾತನಾಡಿಲ್ಲ. ರಾಜೀನಾಮೆ ಬೆದರಿಕೆ ಮೂಲಕ ಒತ್ತಡ ತಂತ್ರಕ್ಕೆ ರಮೇಶ್ ಕುಮಾರ್ ಬಣ ಮುಂದಾಗಿದೆ.
Advertisement
ಮಾಜಿ ಸಚಿವ ರಮೇಶ್ ಕುಮಾರ್, ಸಚಿವ ಎಂ.ಸಿ.ಸುಧಾಕರ್, ಶಾಸಕರಾದ ಕೊತ್ತೂರು ಮಂಜು ಹಾಗೂ ಮಾಲೂರು ನಂಜೇಗೌಡ, ಪರಿಷತ್ ಸದಸ್ಯರಾದ ನಜೀರ್ ಅಹಮ್ಮದ್ ಹಾಗೂ ಅನಿಲ್ ಕುಮಾರ್ ರಹಸ್ಯ ಸಭೆ ನಡೆಸಿದ್ದಾರೆ. ಸಭೆಯ ಮಾಹಿತಿ ತಿಳಿದು ಸಿಎಂ ಸೂಚನೆ ಮೇರೆಗೆ ಸಭೆಗೆ ತೆರಳಲು ಸಚಿವ ಬೈರತಿ ಸುರೇಶ್ ಮುಂದಾಗಿದ್ದರು. ಕೋಲಾರ ನಾಯಕರಿಗೆ ಕರೆ ಮಾಡಿ ಬೈರತಿ ಸುರೇಶ್ ಮಾತನಾಡಿದ್ದಾರೆ.