ಕೋಲಾರ: ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನದಿಂದ ಬರುವ ಉತ್ಪನ್ನಗಳ ಮೇಲೆ ಶೇಕಡಾ 200ರಷ್ಟು ಆಮದು ಸುಂಕ ಹೆಚ್ಚಿಸಿದೆ. ಇತ್ತ ಕರ್ನಾಟಕದ ರೈತರು ಕೂಡಾ ನೆರೆವೈರಿಗೆ ಅನಿವಾರ್ಯವಾಗಿರೋ ಟೊಮೆಟೋ ರಫ್ತು ಮಾಡದಿರಲು ತೀರ್ಮಾನಿಸಿದ್ದಾರೆ.
ಹಲವು ವರ್ಷಗಳಿಂದ ಕೋಲಾರದ ರೈತರು ತಾವು ಬೆಳೆದ ಸುಮಾರು 200 ಟನ್ ಟೊಮೆಟೊ ಪಾಕಿಸ್ತಾನಕ್ಕೆ ರಫ್ತು ಮಾಡುತ್ತಿದ್ದರು. ಆದ್ರೆ ಕಳೆದ ಕೆಲವು ದಿನಗಳಿಂದ ಪಾಕಿಸ್ತಾನಕ್ಕೆ ಕೋಲಾರದಿಂದ ಅದರಲ್ಲೂ ಭಾರತದ ಟೊಮೆಟೊ ರಫ್ತಾಗುತ್ತಿಲ್ಲ. ಪರಿಣಾಮ ಇಂದು ಪಾಕಿಸ್ತಾನದಲ್ಲಿ ಟೊಮೆಟೊ ಅಭಾವ ಹೆಚ್ಚಾಗಿದೆ. ಪಾಕಿಸ್ತಾನದಲ್ಲಿ ಭಾರತದ ಟೊಮೆಟೊ ಇಲ್ಲದೆ ಕೆ.ಜಿ ಟೊಮೆಟೊ 300 ರೂ. ಗಡಿ ದಾಟಿದೆ. ಇದಕ್ಕೆ ನೇರ ಕಾರಣ ಕೋಲಾರ ಅದರಲ್ಲೂ ಭಾರತದ ಟೊಮೆಟೊ ಪಾಕಿಸ್ತಾನಕ್ಕೆ ಸರಬರಾಜಾಗುತ್ತಿಲ್ಲ ಅನ್ನೋದೆ ವಿಶೇಷ.
Advertisement
Advertisement
ದಾಳಿ ಬಳಿಕ ಪಾಕಿಸ್ತಾನದಲ್ಲಿ ಭಾರತದ ಹಣ್ಣು-ತರಕಾರಿಗಳು ರಫ್ತಾಗದ ಹಿನ್ನೆಲೆಯಲ್ಲಿ ಭಾರತ ಎಲ್ಲವನ್ನೂ ಬಂದ್ ಮಾಡಿದೆ. ಅದರಲ್ಲೂ ಪ್ರಮುಖವಾಗಿ ಕೋಲಾರದ ಟೊಮೆಟೊ ಬಂದ್ ಆಗಿರುವುದು ಪಾಕ್‍ನಲ್ಲಿ ಅದರ ದರ ದುಬಾರಿಯಾಗಲು ಕಾರಣ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಆದ್ರೆ ನಷ್ಟವಾದ್ರೂ ಪರವಾಗಿಲ್ಲ ಭಾರತ ವಿರೋಧಿಗಳಿಗೆ ಯಾವುದೇ ಕಾರಣಕ್ಕೆ ಕೊಳೆತ ತರಕಾರಿಗಳನ್ನೂ ಕೂಡ ಕೊಡಲ್ಲ ಎಂದು ಮಾರುಕಟ್ಟೆ ವರ್ತಕ ಶ್ರೀನಿವಾಸ್ ಹೇಳುತ್ತಾರೆ. ಇದನ್ನೂ ಓದಿ: ಭಾರತದ ರೈತರು ಕೊಟ್ಟ ಶಾಕಿಗೆ ಪಾಕಿನಲ್ಲಿ ಗಗನಕ್ಕೇರಿತು ಟೊಮೆಟೊ ದರ!
Advertisement
Advertisement
ಹವಾಮಾನ ವೈಪರೀತ್ಯದಿಂದಾಗಿ ನಮ್ಮಲ್ಲೆ ಬೇಡಿಕೆ ಹೆಚ್ಚಾಗಿ ದೇಶದಲ್ಲೂ ತರಕಾರಿ ಬೆಲೆ ಗಗನಕ್ಕೇರಿದೆ. ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆ ಏಷ್ಯಾದಲ್ಲೇ ಅತಿ ದೊಡ್ಡ ಎರಡನೆ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೋಲಾರದ ಟೊಮೆಟೊ ದೇಶದ ಇತರೆ ರಾಜ್ಯಗಳು ಮಾತ್ರವಲ್ಲದೆ ಅಫ್ಘಾನಿಸ್ತಾನ, ಜಪಾನ್ ದೇಶಗಳಿಗೆ ಸರಬರಾಜಾಗುತ್ತೆ. ಆದ್ರೆ ಪುಲ್ವಾಮಾ ಕಹಿ ಘಟನೆ ನಂತರ ಭಾರತದೊಂದಿಗೆ ಪಾಕಿಸ್ತಾನ ಸಂಬಂಧ ಚೆನ್ನಾಗಿಲ್ಲ. ಹಾಗಾಗಿ ಟೊಮೆಟೊ ಕೆಜಿಗೆ 300 ರೂ ದಾಟಿದ್ದು, ಇದರಲ್ಲಿ ಬಹುಪಾಲು ಕೋಲಾರದ್ದೆ ಆಗಿದೆ ಎಂಬುದೆ ಮತ್ತೊಂದು ವಿಶೇಷವಾಗಿದೆ.
ಕೋಲಾರ ಜಿಲ್ಲೆಯೊಂದರಲ್ಲೇ ಸುಮಾರು 1,500 ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತದೆ. ಹಾಗಾಗಿನೆ ದೇಶದ ಎಲ್ಲಾ ರಾಜ್ಯಗಳು ಸೇರಿದಂತೆ ಪಾಕಿಸ್ತಾನ, ಬಾಂಗ್ಲಾದೇಶಗಳಿಗೆ ಹಾಗೂ ಉತ್ತರ ಭಾರತದ ರಾಜ್ಯಗಳಿಗೆ ನೂರಾರು ಟನ್ ಟೊಮೆಟೊ ರಫ್ತು ಮಾಡಲಾಗುತ್ತದೆ. ರೈತರು, ವರ್ತಕರು, ಮಂಡಿ ಮಾಲೀಕರು ಒಂದಾಗಿ ನಷ್ಟವಾದ್ರೂ ಸಹ ಪಾಕಿಸ್ತಾನಕ್ಕೆ ಟೊಮೆಟೊ ಕೊಡುವುದು ಬೇಡ ಎಂಬ ನಿರ್ಧಾರ ಮಾಡಿದ್ದಾರೆ.
ಒಟ್ಟಿನಲ್ಲಿ ದೇಶದ ಬೆನ್ನೆಲುಬು ರೈತ ಹಾಗೂ ದೇಶ ಕಾಯುವ ಸೈನಿಕರಿಗೆ ಒಂದಕ್ಕೊಂದು ಸಂಬಂಧವಿದ್ದು ಪುಲ್ವಾಮಾ ಎಫೆಕ್ಟ್ ಸಾಬೀತಾಗಿದೆ. ನೀರಿಲ್ಲ ಅಂದ್ರೂ ಕಷ್ಟಪಟ್ಟು ಬೆಳೆ ಮಾಡಿ ಹಣ್ಣು-ತರಕಾರಿ, ಹಾಲು, ರೇಷ್ಮೆ ಪೂರೈಕೆ ಮಾಡಿ ನೆರೆ ದೇಶಗಳ ಮೇಲೂ ರೈತರು ನೇರವಾದ ಹಿಡಿತ ಹೊಂದಿದ್ದರು ಅನ್ನೋದೆ ವಿಶೇಷ.
https://www.youtube.com/watch?v=siJzxye46c4
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv