ಕೋಲಾರ: ವಿಚಿತ್ರ ಕಾಯಿಲೆಯಿಂದ ನರಳುತ್ತಿದ್ದ ಪಶ್ಚಿಮ ಬಂಗಾಳದ ಬಾಲಕಿಗೆ ಉತ್ತಮ ಚಿಕಿತ್ಸೆ ನೀಡಿ ರಾಜ್ಯದ ಗೌರವವನ್ನು ಎತ್ತಿ ಹಿಡಿದ ಕೀರ್ತಿ ಕೋಲಾರದ ವೈದ್ಯರೊಬ್ಬರಿಗೆ ಸಿಕ್ಕಿದೆ.
ಜಿಲ್ಲೆಯ ಮಾಲೂರು ಪಟ್ಟಣದ ಮಕ್ಕಳ ತಜ್ಞ ಡಾ.ಅಂಜಲಿ ಕಿರಣ್ ಎಂಬವರು ಪಶ್ಚಿಮ ಬಂಗಾಳದ 15 ವರ್ಷದ ಬಾಲಕಿಯೊಬ್ಬಳು ಸಿಕೆಲ್ ಸಿಜ್ (ರಕ್ತ ಕಣಗಳು ಆಕೃತಿ ಬದಲಾವಣೆ) ರೋಗದಿಂದ ನರಳುತ್ತಿದ್ದಳು. ಹೀಗಾಗಿ ಕಳೆದ ಮೂರು ದಿನಗಳ ಹಿಂದೆ ಮಾಲೂರು ಪಟ್ಟಣಕ್ಕೆ ಆಗಮಿಸಿ ಡಾ. ಕಿರಣ್ ಸೋಮಣ್ಣ ಬಳಿ ಬಂದು ಚಿಕಿತ್ಸೆ ಪಡೆದುಕೊಂಡು ವಾಪಸ್ಸಾಗಿದ್ದಾರೆ.
Advertisement
Advertisement
ಇದು ಸಾವಿರ ಜನರಲ್ಲಿ ಒಬ್ಬರಿಗೆ ಮಾತ್ರ ಕಂಡು ಬರುವ ಕಾಯಿಲೆಯಾಗಿದ್ದು, ಪೋಷಕರು ಮಾಲೂರಿಗೆ ಮೂರು ದಿನಗಳ ಹಿಂದೆ ಹುಡುಕಿಕೊಂಡು ಬಂದು ಚಿಕಿತ್ಸೆ ಪಡೆದಿರುವ ಎಲ್ಲಾ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ರೋಗ ಕಂಡು ಬಂದಲ್ಲಿ ಅದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡಿ ಹಲವು ರೋಗಳಿಗೆ ಎಡೆ ಮಾಡಿಕೊಡಲಿದೆ.
Advertisement
ಈ ರೋಗಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗಬೇಕಾದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಪೋಷಕರು ತಮ್ಮ ಮಗಳನ್ನು ಕರೆದುಕೊಂಡು ಬಂದು ಡಾ. ಕಿರಣ್ ಅವರಿಂದ ಚಿಕಿತ್ಸೆ ಕೊಡಿಸಿದ್ದಾರೆ. ಡಾ. ಕಿರಣ್ ಅವರು ಮಕ್ಕಳ ತಜ್ಞ ಮತ್ತು ಪ್ರಾಧ್ಯಾಪಕರಾಗಿ ಇದರ ಬಗ್ಗೆ ಅಧ್ಯಯನ ಮಾಡಿದ್ದರ ಹಿನ್ನೆಲೆಯಲ್ಲಿ ಇವರ ವಿಳಾಸವನ್ನು ಪಡೆದು ಮಾಲೂರಿಗೆ ಬಂದು ಚಿಕಿತ್ಸೆ ಪಡೆದುಕೊಂಡು ಹೋಗಿರುವುದು ಕೋಲಾರ ಜಿಲ್ಲೆಯ ವೈದ್ಯ ಲೋಕಕ್ಕೆ ಗರಿ ತಂದಿದೆ.
Advertisement
ಒಟ್ಟಿನಲ್ಲಿ ಸದ್ಯ ವೈದ್ಯರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv