ಕೋಲಾರ| ಈದ್ ಮೆರವಣಿಗೆ ವೇಳೆ 2 ಗುಂಪಿನ ನಡುವೆ ಘರ್ಷಣೆ – 5ಕ್ಕೂ ಹೆಚ್ಚು ಮಂದಿಗೆ ಗಾಯ

Public TV
1 Min Read
kolar eid galate

ಕೋಲಾರ: ನಗರದಲ್ಲಿ ಈದ್ ಮಿಲಾದ್ (Eid Milad) ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯ ಹಮ್ಮಿಕೊಂಡಿದ್ದ ಮೆರವಣಿಗೆ ವೇಳೆ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ಮಧ್ಯೆ ಘರ್ಷಣೆ ಸಂಭವಿಸಿದ್ದು, 5ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ನಗರದ ಕ್ಲಾಕ್ ಟವರ್ ಬಳಿ ಮೆರವಣಿಗೆ ಸಾಗುವಾಗ ಮಾತಿಗೆ ಮಾತು ಬೆಳೆದು ಮುಸ್ಲಿಂ ಸಮುದಾಯದ ಎರಡು ಗುಂಪುಗಳ ನಡುವೆ ಜಗಳ ಆರಂಭವಾಗಿದೆ. ಈ ಸಂದರ್ಭದಲ್ಲಿ ಮಾರಕಾಸ್ತ್ರಗಳಿಂದ ಒಂದು ಗುಂಪು ಥಳಿಸಿದೆ. ಸೈಯದ್ ಸಲ್ಮಾನ್, ಸೈಫ್, ಹುಸೇನ್ ಕಾಷಿಪ್, ಕಲೀಲ್ ಅಹ್ಮದ್ ಎಂಬುವರಿಗೆ ಗಾಯವಾಗಿದ್ದು, ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಮಂಗಳೂರು, ನಾಗಮಂಗಲ ಎಲ್ಲಾ ಕಡೆ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದಾರೆ: ದಿನೇಶ್ ಗುಂಡೂರಾವ್

ಸಯ್ಯದ್ ವಸೀಂ ಪಾಷಾ, ಥಾಹೀರ್ ಗುಂಪಿನಿಂದ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದ್ದು ಅರೋಪಿಗಳು ಪರಾರಿಯಾಗಿದ್ದಾರೆ. ಅರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಸ್ಥಳಕ್ಕೆ ಧಾವಿಸಿದ್ದು, ಗುಂಪುಗೂಡಿದ್ದ ಜನರನ್ನು ಚದುರಿಸಿದ ಬಳಿಕ ಮೆರವಣಿಗೆ ಮುಂದೆ ಸಾಗಿದೆ. ಇದನ್ನೂ ಓದಿ: ಕಾಶ್ಮೀರ ಈಗ ಸುರಕ್ಷಿತವಾಗಿರುವುದರಿಂದ ರಾಹುಲ್‌ ಬಾಬಾ ಐಸ್‌ಕ್ರೀಂ ತಿಂದಿದ್ದಾರೆ, ಬೈಕ್‌ ರೈಡ್‌ ಮಾಡಿದ್ದಾರೆ: ಅಮಿತ್‌ ಶಾ

ಗಾಯಳುಗಳು ದಾಖಲಾಗಿದ್ದ ಕೋಲಾರ (Kolar) ಜಿಲ್ಲಾಸ್ಪತ್ರೆಯ ಬಳಿ 300 ಕ್ಕೂ ಹೆಚ್ಚು ಜನರು ಜಮಾವಣೆ ಆಗುತ್ತಿದಂತೆ ಮುನ್ನೆಚ್ಚರಿಕೆ ವಹಿಸಿದ ಪೊಲೀಸರು ಗುಂಪನ್ನು ಚದುರಿಸಿ ಕಳುಹಿಸಿದರು. ನಗರದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ರಾಜ್ಯದಲ್ಲಿ ನಿಫಾ ವೈರಸ್ ಭೀತಿ, ಕೇರಳಕ್ಕೆ ತೆರಳಿದ 25 ಜನರಿಗೆ ಟೆಸ್ಟ್: ದಿನೇಶ್ ಗುಂಡೂರಾವ್

Share This Article