ಕೋಲಾರ: ಚಿಟ್ ಫಂಡ್ ಫೈನಾನ್ಸ್ ಮೂಲಕ ಜನರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದ ಮೂವರನ್ನು ಬೆಂಗಳೂರಿನ ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.
ಕೋಲಾರದ ಆರ್ ಕೆಎನ್ ರೈಸ್ ಮಿಲ್ ಮಾಲೀಕ ಷಣ್ಮುಗಂ ಹಾಗೂ ಮಗ ದಿಲೀಪ್, ಫೈನಾನ್ಸ್ ಮ್ಯಾನೇಜರ್ ನಾಗರಾಜ್ ಬಂಧಿತ ಆರೋಪಿಗಳು. ವಂಚನೆಗೆ ಒಳಗಾಗಿದ್ದ ಸತ್ಯನಾರಾಯಣ ಎಂಬವರು ದೂರು ನೀಡಿದ್ದರಿಂದ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ನವೆಂಬರ್ 13ರವೆರಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಬೆಂಗಳೂರಿನ 61ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
Advertisement
ಏನಿದು ಪ್ರಕರಣ?:
ನಗರದ ಬಂಗಾರಪೇಯಲ್ಲಿ ಆರ್.ಕೆ.ಎನ್ ಚಿಟ್ಸ್ ಅಂಡ್ ಇನ್ವೆಸ್ಟ್ ಮೆಂಟ್ ಹೆಸರಿನಲ್ಲಿ ಷಣ್ಮುಗಂ ಲೇವಾದೇವಿ ವ್ಯವಹಾರ ಆರಂಭಿಸಿದ್ದನು. ಸುಮಾರು ಇಪ್ಪತ್ತು ವರ್ಷಗಳಿಂದ ಕಂಪನಿ ವ್ಯವಹಾರ ನೋಡಿದ್ದ ರೈತರು, ರಾಜಕಾರಣಿಗಳು, ವ್ಯಾಪಾರಸ್ಥರು, ನಿವೃತ್ತ ಹಾಗೂ ವೃತ್ತಿನಿರತ ಅಧಿಕಾರಿಗಳು ತೆರಿಗೆ ವಂಚನೆಗಾಗಿ ಹಾಗೂ ಬಡ್ಡಿಯಾಸೆಗೆ ಕೋಟ್ಯಂತರ ರೂ. ಹೂಡಿಕೆ ಮಾಡಿದ್ದರು.
Advertisement
Advertisement
ಸುಮಾರು 6 ಸಾವಿರ ಕೋಟಿ ರೂ. ಠೇವಣಿ ಪಡೆದು ಯಾವುದೇ ಲೆಕ್ಕ ತೋರಿಸದೆ ಇತರರಿಗೆ ಸಾಲ, ಎಲ್‍ಐಸಿ ಬಾಂಡ್, ಜಮೀನು ಖರೀದಿ, ಹಣ ಲೇವಾದೇವಿ ವ್ಯವಹಾರಗಳಲ್ಲಿ ಕಂಪನಿ ತೊಡಗಿಸಿಕೊಂಡಿತ್ತು. ಕೇಂದ್ರ ಸರ್ಕಾರವು ನವೆಂಬರ್ 2016ರಲ್ಲಿ ನೋಟ್ ಬ್ಯಾನ್ ಮಾಡಿದಾಗ, ಹಣ ವರ್ಗಾವಣೆ ಹಾಗೂ ಬಡ್ಡಿ ಪಾವತಿಸಲು ಕಷ್ಟ ಎದುರಿಸಿದ್ದರು. ಇದರಿಂದಾಗಿ ಕಂಪನಿಯ ನಿಜವಾದ ವಂಚನೆ ಬಯಲಿಗೆ ಬಂದಿತ್ತು. ಅಷ್ಟೇ ಅಲ್ಲದೆ ಗ್ರಾಹಕರ ನಂಬಿಕೆ ಗಿಟ್ಟಿಸಿಕೊಳ್ಳಲು ಚೆಕ್‍ಗಳನ್ನು ನೀಡಿದ್ದ. ಆದರೆ ಅವುಗಳಲ್ಲಿ 20ಕ್ಕೂ ಹೆಚ್ಚು ಗ್ರಾಹಕರ ಚೆಕ್ ಬೌನ್ಸ್ ಆಗಿವೆ.
Advertisement
ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದರೆ ತಮ್ಮ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಾರೆ ಎಂಬ ಭಯ ಹಲವರಲ್ಲಿ ಉಂಟಾಗಿದೆ. ಹೀಗಾಗಿ ಅವರು ಏನನ್ನು ಹೇಳಿಕೊಳ್ಳದೆ ಸಂಕಷ್ಟ ಎದುರಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews