-8 ನಾಡಬಂದೂಕು, 80 ಸಾವಿರ ರೂ. ನಗದು ವಶ
ಕೋಲಾರ: ಅಕ್ರಮವಾಗಿ ನಾಡಬಂದೂಕು (Gun) ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಕೋಲಾರದ ಬೂದಿಕೋಟೆ ಪೊಲೀಸರು (Budikote police) ಪತ್ತೆಹಚ್ಚಿದ್ದು, ಮೂವರನ್ನು ಬಂಧಿಸಿದ್ದಾರೆ.
Advertisement
ಬಂಧಿತರನ್ನು ಬಂಗಾರಪೇಟೆ (Bangarapet) ತಾಲ್ಲೂಕಿನ ಪಲಮಡಗು ಗ್ರಾಮದ ಮಾರಪ್ಪ, ರಾಮಪ್ಪ ಹಾಗೂ ಧರ್ಮನ್ ಎಂದು ಗುರುತಿಸಲಾಗಿದೆ. ಕೆಜಿಎಫ್ (KGF) ಎಸ್‍ಪಿ ಶಾಂತರಾಜು ನೇತೃತ್ವದಲ್ಲಿ ಬೂದಿಕೋಟೆ ಪೊಲೀಸರು ಆರೋಪಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ 8 ನಾಡ ಬಂದೂಕುಗಳು ಹಾಗೂ 80 ಸಾವಿರ ರೂ. ನಗದು ಪತ್ತೆಯಾಗಿದೆ. ಪೊಲೀಸರು ಹಣ ಹಾಗೂ ನಾಡಬಂದೂಕುಗಳನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಹಾಸನ ಸಂಸದರು ವಿದೇಶದಿಂದ ವಾಪಸ್ ಬಂದು SIT ತನಿಖೆ ಎದುರಿಸಬೇಕು – ನಿಖಿಲ್ ಕುಮಾರಸ್ವಾಮಿ
Advertisement
Advertisement
ಆರೋಪಿಗಳು ನಾಡ ಬಂದೂಕಗಳನ್ನು ತಯಾರಿಸಿ ಆಂದ್ರಪ್ರದೇಶ, ತಮಿಳುನಾಡು ಸೇರಿದಂತೆ ಹಲವೆಡೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಸಂಬಂಧ ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದರೆ. ಇದನ್ನೂ ಓದಿ: ಸರ್ಕಾರದ ವಿರುದ್ದ ಆರೋಪ ಮಾಡುವ ವಿಪಕ್ಷಗಳ ವಿರುದ್ದ ಅಗ್ರೆಸಿವ್ ಅಟ್ಯಾಕ್ ಮಾಡಲು ಸಿಎಂ ಸೂಚನೆ
Advertisement