ಕೋಲಾರ: ಕೇರಳದ ಶಬರಿಮಲೆಗೆ (Sabarimala) ತೆರಳಿದ್ದ ಕೋಲಾರದ (Kolar) ಅಯ್ಯಪ್ಪ ಮಾಲಾಧಾರಿಯೊಬ್ಬರು (Ayyappa Devotee) ನಾಪತ್ತೆಯಾಗಿದ್ದಾರೆ.
ಅಮರೇಶ ನಾಪತ್ತೆಯಾದ ಮಾಲಾಧಾರಿ. ಕೋಲಾರ ಜಿಲ್ಲೆಯ ಮಾಲೂರು ತಾಲೂಕು ನೂಟುವೆ ಗ್ರಾಮದ ಅಮರೇಶ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಹೋದ ಸಂದರ್ಭದಲ್ಲಿ ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: ಡಿಕೆಶಿ ಸಿಎಂ ಆಗಲೆಂದು ನನ್ನ ಹೃದಯ ಬಯಸುತ್ತಿದೆ: ಗಣಿಗ ರವಿಕುಮಾರ್
ಈ ಅಯ್ಯಪ್ಪ ಮಾಲಾಧಾರಿಗೆ ಮಾತು ಬರಲ್ಲ, ಕಾಣಿಸಿದಲ್ಲಿ ತಿಳಿಸುವಂತೆ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ. ಅಯ್ಯಪ್ಪ ಸ್ವಾಮಿ ದೇವಾಲಯದ ಪ್ರವೇಶ ದ್ವಾರದಲ್ಲಿ ಪ್ರವೇಶ ಪಡೆದ ಮೇಲೆ ಕಾಣೆಯಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ದರೋಡೆ ಕೇಸಲ್ಲಿ 5.76 ಕೋಟಿ ಹಣ ಸೀಜ್ ಮಾಡಲಾಗಿದೆ: ಪೊಲೀಸ್ ಆಯುಕ್ತ ಸೀಮಂತ್ ಕುಮಾರ್
