ಮಂಗಳೂರು: ಶ್ರೀ ಕ್ಷೇತ್ರ ಮಂದಾರಬೈಲು (Mandarbailu) ರಕ್ತೇಶ್ವರಿ, ಮಂತ್ರದೇವತೆ, ರಾಹು ಗುಳಿಗ ಸನ್ನಿಧಿಯಲ್ಲಿ ವರ್ಷಾವಧಿ ಕೋಲ ಬಲಿ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದೆ.
ಸೋಮವಾರ ರಾತ್ರಿ 7:30ರಿಂದ ರಂಗಪೂಜೆ, ಬೆಳ್ಳಿ ರಥೋತ್ಸವ, ಮಂಗಳವಾರ ಬೆಳಗ್ಗೆ 8:00ರಿಂದ ನಾಗದೇವರಿಗೆ ತಂಬಿಲಸೇವೆ, ಆಶ್ಲೇಷಾ ಬಲಿ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ತಾಯಿಗೆ ಪಂಚಾಮೃತಾಭಿಷೇಕ, ಮಂದಾರಬೈಲ್ ಶ್ರೀ ದುರ್ಗಾಪರಮೇಶ್ವರೀ ವೆಂಕಟರಮಣ ದೇವರಿಗೆ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
Advertisement
Advertisement
ಬುಧವಾರ ಬೆಳಗ್ಗೆ 8:00ಕ್ಕೆ ತಾಯಿಗೆ ಪಂಚಾಮೃತಾಭಿಷೇಕ, ಸರ್ವಾಲಂಕಾರ ಪೂಜೆ, ತಾಯಿಗೆ ವಿಶೇಷ ಅಷ್ಟನಾದದೊಂದಿಗೆ ಉಯ್ಯಾಲೆ ಸೇವೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ. ಗುರುವಾರ ಬೆಳಗ್ಗೆ 6:30ರಿಂದ 108 ಕಾಯಿ ಗಣಪತಿ ಹೋಮ, ಪಂಚಾಮೃತಾಭಿಷೇಕ, ಸರ್ವಾಲಂಕಾರ ಪೂಜೆ, ಅನ್ನಸಂತರ್ಪಣೆ ನಡೆಯಲಿದ್ದು, ಶುಕ್ರವಾರ ಬೆಳಗ್ಗೆ 6:30ರಿಂದ ಶ್ರೀ ಸೂಕ್ತ ಹೋಮ, ಧನ್ವಂತಲ ಹೋಮ, ತಾಯಿಗೆ ಹರಕೆ ರೂಪದಲ್ಲಿ ಬರುವ ಬೆಳ್ಳಿ ಬಂಗಾರವನ್ನು ಸಮರ್ಪಿಸುವುದು. ಸಂಜೆ ಗಂಟೆ 4:30ರಿಂದ ವಿವಿಧ ಭಜನಾ ತಂಡದವರಿಂದ ‘ಭಜನಾ ಸತ್ಸಂಗ ಕಾರ್ಯಕ್ರಮ’ ಜರುಗಲಿದೆ. ಇದನ್ನೂ ಓದಿ: ಶ್ರೀಕೃಷ್ಣ, ಹನುಮಂತ ಇಬ್ಬರೂ ಶ್ರೇಷ್ಠ ರಾಜತಾಂತ್ರಿಕರು: ಜೈಶಂಕರ್
Advertisement
ಶನಿವಾರ ಬೆಳಗ್ಗೆ 7:30ರಿಂದ ಶ್ರೀ ಸತ್ಯನಾರಾಯಣ ಪೂಜೆ 10:40ರ ಶುಭಲಗ್ನದಲ್ಲಿ ಭಂಡಾರ ಏರುವುದು, ಪಲ್ಲಪೂಜೆ, ಅನ್ನಸಂತರ್ಪಣೆ ಹಾಗೂ ಸಂಜೆ 7:30ರಿಂದ ರಕ್ತೇಶ್ವರೀ ದೈವದ ನೇಮ, ನಂತರ ಶ್ರೀ ಮಂತ್ರದೇವತೆ ದೈವದ ಕೋಲ ಬಲಿ ಸೇವೆ, ದರ್ಶನ ಬಲಿ, ಪಲ್ಲಕ್ಕಿ ಬಲಿ, ಬೆಳ್ಳಿರಥೋತ್ಸವ, ತುಲಾಭಾರ ಸೇವೆ, ಅಭಯಪ್ರದಾನ, ಪ್ರಸಾದ ವಿತರಣೆ ನಡೆಯಲಿದೆ.
Advertisement
ಭಾನುವಾರ ರಾತ್ರಿ ಗಂಟೆ 8:05ರಿಂದ ಶ್ರೀ ಗುಳಿಗ ದೈವದ ಕೋಲಬಲಿ ಸೇವೆ, ಅಭಯ ಪ್ರದಾನ, ಪ್ರಸಾದ ವಿತರಣೆ ಜರುಗಲಿದೆ. ಭಾನುವಾರ ಕ್ಷೇತ್ರದಲ್ಲಿ ವರ್ಷಾವಧಿ ಅಗೇಲು ಸೇವೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಭಾರತದ ಮಹಿಳೆಯರಿಗೆ ಚೊಚ್ಚಲ ಅಂಡರ್ 19 ವಿಶ್ವಕಪ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k