ರಾಜ್ ಕೋಟ್: ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋಲು ಕಂಡಿದ್ದ ಭಾರತ ತಂಡ ಸೋಲಿನ ಸೇಡು ತೀರಿಸಿಕೊಳ್ಳಲು ರೆಡಿಯಾಗಿದೆ. ರಾಜ್ ಕೋಟ್ ನಲ್ಲಿ ಇಂದು ಎರಡನೇ ಏಕದಿನ ಪಂದ್ಯ ನಡೆಯಲಿದ್ದು, ಪಂದ್ಯ ಗೆದ್ದು ಸರಣಿ ಸಮ ಮಾಡಿಕೊಳ್ಳುವ ತವಕದಲ್ಲಿ ಟೀಂ ಇಂಡಿಯಾ ಇದೆ.
ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಯೋಗ ಮಾಡಲು ಹೋಗಿ ಕೈ ಸುಟ್ಟುಕೊಂಡಿರೋ ನಾಯಕ ಕೊಹ್ಲಿ, ಈ ಪಂದ್ಯದಲ್ಲಿ ಪ್ರಯೋಗಕ್ಕೆ ಕೈ ಹಾಕದೇ ಇರಲು ನಿರ್ಧಾರ ಮಾಡಿದ್ದಾರೆ. ಎಂದಿನಂತೆ 3 ನೇ ಕ್ರಮಾಂಕದಲ್ಲಿ ಕೊಹ್ಲಿ ಬ್ಯಾಟಿಂಗ್ ಆಡುವ ಸಾಧ್ಯತೆ ಇದ್ದು, ಕನ್ನಡಿಗ ಕೆ.ಎಲ್. ರಾಹುಲ್ 4 ನೇ ಕ್ರಮಾಂಕದಲ್ಲಿ ಆಡೋ ಸಾಧ್ಯತೆ ಇದೆ. ಭಾರತದ ಪರ ರೋಹಿತ್ ಮತ್ತು ಧವನ್ ಇನ್ನಿಂಗ್ಸ್ ಆರಂಭ ಮಾಡಲಿದ್ದಾರೆ. ಮೊದಲ ಪಂದ್ಯದಲ್ಲಿ ಮಿಂಚದ ರೋಹಿತ್ ಮೇಲೆ ಎಲ್ಲರ ನಿರೀಕ್ಷೆ ಹೆಚ್ಚಾಗಿದೆ. ಧವನ್ ಮತ್ತು ರಾಹುಲ್ ಉತ್ತಮ ಫಾರ್ಮ್ ನಲ್ಲಿದ್ದು ಟೀಂ ಇಂಡಿಯಾ ಬ್ಯಾಟಿಂಗ್ ಅಸ್ತ್ರವಾಗಿದ್ದಾರೆ. ಉಳಿದಂತೆ ಕೊಹ್ಲಿ, ಶ್ರೇಯಸ್ ಅಯ್ಯರ್, ಜಡೇಜಾ ಈ ಪಂದ್ಯದಲ್ಲಿ ಮಿಂಚಬೇಕಾಗಿದೆ.
Advertisement
Advertisement
ಮೊದಲ ಪಂದ್ಯದಲ್ಲಿ ಒಂದೇ ಒಂದು ವಿಕೆಟ್ ಪಡೆಯಲು ಆಗದ ಬೌಲರ್ ವಿಭಾಗದಲ್ಲಿ ಕೊಂಚ ಬದಲಾವಣೆ ಮಾಡುವ ಸಾಧ್ಯತೆ ಇದೆ. ಬೌಲರ್ ಗಳು ಉತ್ತಮ ಪ್ರದರ್ಶನ ನೀಡಿದ್ರೆ ಟೀಂ ಇಂಡಿಯಾ ಗೆಲುವು ಸಾಧ್ಯವಾಗಲಿದೆ. ಗಾಯಗೊಂಡರುವ ಕೀಪರ್ ರಿಷಬ್ ಪಂತ್ ಬದಲಿಗೆ ರಾಹುಲ್ ಕೀಪಿಂಗ್ ನಿರ್ವಹಣೆ ಮಾಡಲಿದ್ದು, ಕೇದರ್ ಜಾಧವ್ ಹನ್ನೊಂದರ ಬಳಗದಲ್ಲಿ ಚಾನ್ಸ್ ಗಿಟ್ಟಿಸೋ ಸಾಧ್ಯತೆ ಇದೆ.
Advertisement
ಮೊದಲ ಪಂದ್ಯ ಗೆದ್ದು ಆತ್ಮವಿಶ್ವಾದಲ್ಲಿರೋ ಆಸ್ಟ್ರೇಲಿಯಾ ತಂಡ ಎರಡನೇ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ. ಭರ್ಜರಿ ಫಾರ್ಮ್ ನಲ್ಲಿರುವ ಆಸ್ಟ್ರೇಲಿಯಾ ತಂಡದ ಆಟಗಾರರು ಈ ಪಂದ್ಯವನ್ನು ಗೆಲ್ಲಲು ತಂತ್ರ ರೂಪಿಸಿದ್ದಾರೆ. ಬಹುತೇಕ ಮೊದಲ ಪಂದ್ಯ ಆಡಿದ ತಂಡವನ್ನೇ ಆಸ್ಟ್ರೇಲಿಯಾ ಉಳಿಸಿಕೊಳ್ಳುವ ಸಾಧ್ಯತೆ ಇದೆ.
Advertisement
ಮಧ್ಯಾಹ್ನ 1.30ಕ್ಕೆ ಪಂದ್ಯ ಆರಂಭವಾಗಲಿದ್ದು, ರಾಜ್ ಕೋಟ್ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದೆ. ರಾಜ್ ಕೋಟ್ ಇಂಡಿಯಾ ತಂಡಕ್ಕೆ ಅಷ್ಟು ಅದೃಷ್ಟ ಪಿಚ್ ಅಲ್ಲ. ಈವರೆಗೆ ಆಡಿರುವ ಎರಡು ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದ ವಿರುದ್ದ ಆಡಿರುವ ಎರಡು ಪಂದ್ಯದಲ್ಲಿ ಸೋಲು ಕಂಡಿದ್ದು, ಈ ಪಂದ್ಯ ಗೆದ್ದು ಹೊಸ ಸಾಧನೆ ಮಾಡುವ ತವಕದಲ್ಲಿದೆ.
ಸಂಭವನೀಯ ತಂಡ:
ಭಾರತ: ವಿರಾಟ್ ಕೊಹ್ಲಿ(ನಾಯಕ) ರೋಹಿತ್, ಧವನ್, ರಾಹುಲ್, ಶ್ರೇಯಸ್ ಅಯ್ಯರ್, ಜಾಧವ್,ಜಡೇಜಾ,ಬೂಮ್ರಾ, ಮೊಹಮದ್ ಶಮಿ, ಕುಲ್ಡೀಪ್ ಯಾದವ್,ಠಾಕೂರ್
ಆಸ್ಟ್ರೇಲಿಯಾ ತಂಡ:
ಆರೋನ್ ಪಿಂಚ್(ನಾಯಕ), ವಾರ್ನರ್, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್,ಅಲೆಕ್ಸ್ ಕಾರಿ, ಆಸ್ಟನ್ ಅಗರ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ರಿಚರ್ಡ್ ಸನ್, ಆಡಂ ಜಂಪಾ.