ಮ್ಯಾಂಚೆಸ್ಟರ್: ವಿಶ್ವಕಪ್ ಟೂರ್ನಿಯಲ್ಲಿ ಗುರುವಾರ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅತಿ ವೇಗವಾಗಿ 20 ಸಾವಿರ ರನ್ ಗಳಿಸಿದ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಈ ಮೂಲಕ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ವೆಸ್ಟ್ ಇಂಡೀಸ್‍ನ ಬ್ರಿಯನ್ ಲಾರಾ 453 ಇನ್ನಿಂಗ್ಸ್ ನಲ್ಲಿ ಈ ಸಾಧನೆ ನಿರ್ಮಿಸಿದರೆ ಕೊಹ್ಲಿ 417 ಇನ್ನಿಂಗ್ಸ್ ನಲ್ಲಿ ಈ ಸಾಧನೆ ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕ್ಕಿ ಪಾಟಿಂಗ್ 468 ಇನ್ನಿಂಗ್ಸ್ ಗಳಿಂದ ಈ ಸಾಧನೆ ಮಾಡಿದ್ದರು. ಇದನ್ನೂ ಓದಿ: 3ನೇ ಅಂಪೈರ್ ಬೇಡ, 4ನೇ ಅಂಪೈರ್ ಬೇಕು – ಐಸಿಸಿ ವಿರುದ್ಧ ನೆಟ್ಟಿಗರು ಕಿಡಿ
Advertisement
Mt. 20k scaled! @imVkohli becomes the quickest batsman to make 20,000 international runs. He is the third Indian after @sachin_rt and Rahul Dravid to achieve this feat.???????????? #TeamIndia #CWC19 #KingKohli pic.twitter.com/s8mn9sgaap
— BCCI (@BCCI) June 27, 2019
Advertisement
ವಿರಾಟ್ ಕೊಹ್ಲಿ 417 ಇನ್ನಿಂಗ್ಸ್ ಅಂದರೆ 131 ಟೆಸ್ಟ್, 222 ಏಕದಿನ ಪಂದ್ಯ ಹಾಗೂ 62 ಟಿ20 ಪಂದ್ಯಗಳಿಂದ ಈ ದಾಖಲೆ ನಿರ್ಮಿಸಿದ್ದಾರೆ. 37 ರನ್ ಗಳಿಸಿದಾಗ ಕೊಹ್ಲಿ ಈ ಸಾಧನೆ ಮಾಡಿದ್ದು ಈ ಪಂದ್ಯದಲ್ಲಿ 72 ರನ್(82 ಎಸೆತ, 8 ಬೌಂಡರಿ) ಹೊಡೆದು ಔಟಾದರು.
Advertisement
ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿ, ದಕ್ಷಿಣ ಆಫ್ರಿಕಾ ವಿರುದ್ಧ 18 ರನ್, ಆಸ್ಟ್ರೇಲಿಯಾ ವಿರುದ್ಧ 82 ರನ್, ಪಾಕಿಸ್ತಾನದ ವಿರುದ್ಧ 77 ರನ್, ಅಫ್ಘಾನಿಸ್ತಾನ ವಿರುದ್ಧ 67 ರನ್ ಹೊಡೆದಿದ್ದಾರೆ.
Advertisement
82 v ????????
77 v ????????
67 v ????????
50* v ???? – TODAY!
Fourth consecutive #CWC19 half-century for #ViratKohli – he has also gone past 20000 international runs ???? pic.twitter.com/vIhBfIhk89
— ICC Cricket World Cup (@cricketworldcup) June 27, 2019