ತಿರುವನಂತಪುರಂ: ಮೂರನೇ ಏಕದಿನ ಪಂದ್ಯವನ್ನು 317 ರನ್‌ಗಳಿಂದ ಗೆಲ್ಲುವ ಮೂಲಕ ಭಾರತ (India) ವಿಶ್ವದಾಖಲೆ (World Record) ನಿರ್ಮಿಸಿದೆ. ಏಕದಿನ ಕ್ರಿಕೆಟ್‌ನಲ್ಲಿ (One Day Cricket) ತಂಡವೊಂದರ ಅತ್ಯಧಿಕ ಅಂತರದ ಗೆಲುವು ಎಂಬ ಹೆಗ್ಗಳಿಕೆಗೆ ಈಗ ಭಾರತ ಪಾತ್ರವಾಗಿದೆ.
ವಿರಾಟ್ ಕೊಹ್ಲಿ (Virat Kohli), ಶುಭಮನ್ ಗಿಲ್ (Shubman Gill) ಶತಕದಾಟ ನಂತರ ಸಿರಾಜ್ ಅವರ ಮಾರಕ ಬೌಲಿಂಗ್‌ಗೆ ತತ್ತರಿಸಿದ ಶ್ರೀಲಂಕಾ (Sri Lanka) ಕೇವಲ 73 ರನ್‌ಗಳಿಗೆ ಪತನವಾಯಿತು. ಪಂದ್ಯವನ್ನು 317 ರನ್‌ಗಳಿಂದ ಗೆಲ್ಲುವ ಮೂಲಕ ಟೀಂ ಇಂಡಿಯಾ (Team India) 3 ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.
Advertisement
Advertisement
ಗೆಲ್ಲಲು 391 ರನ್‌ಗಳ ಕಠಿಣ ಗುರಿಯನ್ನು ಪಡೆದ ಲಂಕಾ ಆರಂಭಿದಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಅಂತಿಮವಾಗಿ 22 ಓವರ್‌ಗಳಲ್ಲಿ 73 ರನ್‌ಗಳಿಗೆ ಪತನವಾಗಿ ಸೋಲನ್ನು ಒಪ್ಪಿಕೊಂಡಿತು.
Advertisement
Captain @ImRo45 collects the trophy as #TeamIndia seal the @mastercardindia #INDvSL ODI series 3️⃣-0️⃣????????
Scorecard ▶️ https://t.co/q4nA9Ff9Q2 pic.twitter.com/KmCAFDfpUe
— BCCI (@BCCI) January 15, 2023
Advertisement
ಜೆಫ್ರಿ ವಾಂಡರ್ಸೆ ಮತ್ತು ಅಶೆನ್ ಬಂಡಾರ ಬೌಂಡರಿ ಬಳಿ ಬಾಲ್ ತಡೆಯಲು ಹೋಗಿ ಪರಸ್ಪರ ಡಿಕ್ಕಿ ಹೊಡೆದು ಕ್ರೀಡಾಂಗಣದಿಂದ ಸ್ಟ್ರೆಚ್ಚರ್ ಸಹಾಯದಿಂದ ಹೊರನಡೆದ್ದರು. ಜೆಫ್ರಿ ವಾಂಡರ್ಸೆ ಜಾಗದಲ್ಲಿ ದುನಿತ್ ವೆಲ್ಲಲಾಗೆ ಕ್ರೀಸ್‌ಗೆ ಆಗಮಿಸಿದ್ದರು. ಕ್ರಿಕೆಟ್ ನಿಯಮದ ಪ್ರಕಾರ ಓರ್ವ ಬದಲಿ ಆಟಗಾರ ಮಾತ್ರ ಬ್ಯಾಟ್ ಮಾಡಲು ಅವಕಾಶ ಇರುವ 9ನೇ ವಿಕೆಟ್ ಪತನಗೊಂಡ ಕೂಡಲೇ ಆಟ ಕೊನೆಯಾಯಿತು.
???? Mighty Maximum – a 97m SIX from Virat Kohli ????????
Live – https://t.co/q4nA9Ff9Q2 #INDvSL @mastercardindia pic.twitter.com/R3CzXTWBT5
— BCCI (@BCCI) January 15, 2023
ಮೊಹಮ್ಮದ್ ಸಿರಾಜ್ 32 ರನ್ ನೀಡಿ 4 ವಿಕಟ್ ಪಡೆದರೆ ಮೊಹಮ್ಮದ್ ಶಮಿ ಮತ್ತು ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 390 ರನ್ ಹೊಡೆದರು. ನಾಯಕ ರೋಹಿತ್ ಶರ್ಮಾ 42 ರನ್( 49 ಎಸೆತ, 2 ಬೌಂಡರಿ, 3 ಸಿಕ್ಸರ್), ಶುಭಮನ್ ಗಿಲ್ 116 ರನ್(97 ಎಸೆತ, 14 ಬೌಂಡರಿ, 2 ಸಿಕ್ಸರ್), ವಿರಾಟ್ ಕೊಹ್ಲಿ ಔಟಾಗದೇ 166 ರನ್(110 ಎಸೆತ, 13 ಬೌಂಡರಿ, 8 ಸಿಕ್ಸರ್), ಶ್ರೇಯಸ್ ಅಯ್ಯರ್ 38 ರನ್(32 ರನ್, 2 ಬೌಂಡರಿ, 1 ಸಿಕ್ಸರ್) ಹೊಡೆದರು. ಇದನ್ನೂ ಓದಿ: ಸಿಕ್ಸರ್, ಬೌಂಡರಿಗಳ ಸುರಿಮಳೆ – ಕಿಂಗ್ ಕೊಹ್ಲಿಯಿಂದ ಸಚಿನ್ ದಾಖಲೆ ಉಡೀಸ್
ಈ ಪಂದ್ಯ ಸೇರಿದಂತೆ ಸರಣಿಯಲ್ಲಿ ಎರಡು ಶತಕ ಸಿಡಿಸಿ ವಿರಾಟ ಆಟ ಪ್ರದರ್ಶಿಸಿದ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.
Another one bites the dust! ????@mdsirajofficial gets his FOURTH wicket with a beauty of a delivery!
Follow the match ▶️ https://t.co/q4nA9Ff9Q2… #TeamIndia | #INDvSL | @mastercardindia pic.twitter.com/VmLaxzxa99
— BCCI (@BCCI) January 15, 2023
ಏಕದಿನ ಕ್ರಿಕೆಟ್‌ನಲ್ಲಿ ದೊಡ್ಡ ಅಂತರದ ಗೆಲವು
317 – ಭಾರತ Vs ಶ್ರೀಲಂಕಾ, 2023
290 – ನ್ಯೂಜಿಲೆಂಡ್ Vs ಐರ್ಲೆಂಡ್, 2008
275 – ಆಸ್ಟ್ರೇಲಿಯಾ Vs ಅಫ್ಘಾನಿಸ್ತಾನ, 2015
272 – ದಕ್ಷಿಣ ಆಫ್ರಿಕಾ Vs ಜಿಂಬಾಬ್ವೆ, 2010
257 – ಭಾರತ Vs ಬರ್ಮುಡಾ, 2007
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k