1,205 ದಿನಗಳ ಬಳಿಕ ಶತಕ ಸಿಡಿಸಿ ಮೆರೆದಾಡಿದ ಕೊಹ್ಲಿ

Public TV
1 Min Read
Virat Kohli 01

ಅಹಮದಾಬಾದ್: ಬಾರ್ಡರ್ ಗಾವಾಸ್ಕರ್ ಟ್ರೋಫಿ (Border Gavaskar Trophy) ಸರಣಿಯ 4ನೇ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಶತಕ ಸಿಡಿಸುವ ಮೂಲಕ ಬಹುದಿನಗಳ ಶತಕದ ಬರ ನೀಗಿಸಿಕೊಂಡಿದ್ದಾರೆ.

2019ರಲ್ಲಿ ಬಾಂಗ್ಲಾದೇಶ (Bangladesh) ವಿರುದ್ಧ ನಡೆದ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದ ಕೊಹ್ಲಿ, ಬರೋಬ್ಬರಿ 1,205 ದಿನಗಳ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ 28ನೇ ಶತಕ ಸಿಡಿಸಿದ್ದು, 75 ಶತಕಗಳನ್ನ ಪೂರೈಸಿದ್ದಾರೆ. ಇದನ್ನೂ ಓದಿ: 10 ಬೌಂಡರಿ, 5 ಸಿಕ್ಸರ್‌ – ಶಫಾಲಿ ವರ್ಮ ಸ್ಫೋಟಕ ಫಿಫ್ಟಿ; ಡೆಲ್ಲಿ ಕ್ಯಾಪಿಟಲ್ಸ್‌ಗೆ 10 ವಿಕೆಟ್‌ಗಳ ಭರ್ಜರಿ ಜಯ

Virat Kohli 0 2q

ಬಾರ್ಡರ್ ಗಾವಾಸ್ಕರ್ ಟ್ರೋಫಿ ಸರಣಿಯ ಅಂತಿಮ ಟೆಸ್ಟ್‌ನ 4ನೇ ದಿನದಾಟದಲ್ಲಿ ವಿರಾಟ್ ಕೊಹ್ಲಿ 241 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ ಶತಕ ಸಿಡಿಸಿದ್ದಾರೆ. ಇದು ಕೊಹ್ಲಿ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ 28ನೇ ಶತಕ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದ 75ನೇ ಶತಕವಾಗಿದೆ. ಜೊತೆಗೆ ಇದು ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಸಿಡಿಸಿದ 16ನೇ ಶತಕವಾಗಿದೆ. ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ವಿರುದ್ಧ 20 ಶತಕಗಳನ್ನು ಸಿಡಿಸಿದ್ದರು.

Virat Kohli

ಸಚಿನ್ ತೆಂಡೂಲ್ಕರ್ 566 ಇನ್ನಿಂಗ್ಸ್‌ಗಳಲ್ಲಿ 75 ಶತಕಗಳನ್ನ ಸಿಡಿಸಿದ್ದರು. ಆದರೆ ಕೊಹ್ಲಿ 552 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿರುವುದು ವಿಶೇಷ. ಇದನ್ನೂ ಓದಿ: ಸೋಲಿನ ಹೊಣೆ ನಾನೇ ಹೊರುತ್ತೇನೆ – ತನ್ನನ್ನು ತಾನೇ ಟೀಕಿಸಿಕೊಂಡ ಸ್ಮೃತಿ ಮಂದಾನ

Virat Kohli 2

ಆಸ್ಟ್ರೇಲಿಯಾ (Australia) ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 480 ರನ್‌ಗಳಿಗೆ ಆಲೌಟ್ ಆಗಿದೆ. ತನ್ನ ಸರದಿ ಆರಂಭಿಸಿರುವ ಟೀಂ ಇಂಡಿಯಾ 169.3 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 530 ರನ್ ಗಳಿಸಿ ಆಟ ಮುಂದುವರಿಸಿದೆ.

Share This Article
Leave a Comment

Leave a Reply

Your email address will not be published. Required fields are marked *