ಲಂಡನ್: ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಸೋತು ಟೂರ್ನಿಯಿಂದ ಹೊರ ನಡೆದಿದೆ. ಪಂದ್ಯದಲ್ಲಿ 1 ರನ್ ಗಳಿಸಿ ಔಟಾದ ವಿರಾಟ್ ಕೊಹ್ಲಿ ಮೂರು ಸೆಮಿ ಫೈನಲ್‍ಗಳಲ್ಲಿ ಎಡಗೈ ವೇಗಿಗಳಿಗೆ ಬಲಿಯಾಗಿರುವುದು ವಿಶೇಷ.
ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ 6 ಎಸೆತ ಎದುರಿಸಿ 1 ರನ್ ಗಳಿಸಿದ್ದ ಕೊಹ್ಲಿ ಬೋಲ್ಟ್ ಬೌಲಿಂಗ್‍ನಲ್ಲಿ ಎಲ್‍ಬಿಡಬ್ಲೂ ಆಗಿ ಔಟಾದರು. ಪರಿಣಾಮ ಟೀಂ ಇಂಡಿಯಾ ಟಾಪ್ ಅರ್ಡರ್ ಬ್ಯಾಟ್ಸ್ ಮನ್‍ಗಳ ವೈಫಲ್ಯದಿಂದ ಗೆಲ್ಲಲು ಅವಕಾಶವಿದ್ದ ಪಂದ್ಯದಲ್ಲಿ ಸೋಲುಂಡಿತು.
Advertisement
WATCH!
Boult ????
Kohli ☝️
You can see how much this means to New Zealand! https://t.co/YPqWsIRMfe
— ICC Cricket World Cup (@cricketworldcup) July 10, 2019
Advertisement
ಕೊಹ್ಲಿ 2011 ವಿಶ್ವಕಪ್ ಸೆಮಿ ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಆಡಿದ್ದರು. ಪಂದ್ಯದಲ್ಲಿ 21 ಎಸೆತಗಳನ್ನು ಎದುರಿಸಿದ್ದ ಕೊಹ್ಲಿ 9 ರನ್ ಗಳಿಸಿ ಪಾಕ್ ಎಡಗೈ ವೇಗಿ ವಯಾಬ್ ರಿಯಾಜ್‍ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದ್ದರು. ಉಳಿದಂತೆ 2015ರ ವಿಶ್ವಕಪ್ ಸೆಮಿ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ್ದ ಕೊಹ್ಲಿ 31 ಎಸೆತಗಳಲ್ಲಿ 1 ರನ್ ಗಳಿಸಿ ಔಟಾದರು. ಈ ಪಂದ್ಯದಲ್ಲೂ ಆಸೀಸ್ ಎಡಗೈ ವೇಗಿ ಮಿಚೆಲ್ ಜಾನ್ಸನ್ ಅವರಿಗೆ ವಿಕೆಟ್ ಒಪ್ಪಿಸಿದ್ದರು. ಆ ಮೂಲಕ ಕೊಹ್ಲಿ 3 ವಿಶ್ವಕಪ್ ಸೆಮಿ ಫೈನಲ್ ಗಳಲ್ಲಿ ಕೇವಲ 11 ರನ್ ಮಾತ್ರ ಗಳಿಸಿದ್ದಾರೆ.
Advertisement
ವಿಶ್ವಕಪ್ ಟೂರ್ನಿಗೂ ಮುನ್ನ ಶತಕಗಳ ಮೂಲಕ ಮಿಂಚಿದ್ದ ಕೊಹ್ಲಿ ಟೂರ್ನಿಯಲ್ಲಿ ಶತಕ ಗಳಿಸದೆ ನಿರ್ಗಮಿಸಿದರು. 30 ವರ್ಷದ ಕೊಹ್ಲಿ 2019 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ 55.38 ಸರಾಸರಿಯಲ್ಲಿ 443 ರನ್ ಹೊಡೆದಿದ್ದಾರೆ.
Advertisement
https://twitter.com/robinjagal/status/1148901779704184833