ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಶತಕದ ಕುರಿತು ಪ್ರತಿಕ್ರಿಯೆ ನೀಡಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ವಿಶ್ವ ಕ್ರಿಕೆಟ್‍ನಲ್ಲಿ ಬ್ರಾಡ್ಮನ್, ಗವಾಸ್ಕರ್ ಲಾರಾ ಅವರಗಿಂತ ಕೊಹ್ಲಿ ಶ್ರೇಷ್ಠ ಆಟಗಾರ ಎಂದಿದ್ದಾರೆ.
ವಿಶ್ವ ಕ್ರಿಕೆಟ್ ಆಟದಲ್ಲಿ ಕೊಹ್ಲಿ, ದಿ ಗೋಟ್ (ಗ್ರೇಟೆಸ್ಟ್ ಅಫ್ ಅಲ್ ಟೈಮ್) ಅಟ್ ಅಗೈನ್ ಎಂದು ವಾನ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ್ದ ಅಭಿಮಾನಿಯೊಬ್ಬರು ಬ್ರಾಡ್‍ಮನ್, ಸಚಿನ್, ಲಾರಾ ಅವರಿಗಿಂತ ಕೊಹ್ಲಿ ಶ್ರೇಷ್ಠರೇ ಎಂದು ಪ್ರಶ್ನಿಸಿದ್ದಾರೆ. ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ ವಾನ್ ಏಕದಿನ ಕ್ರಿಕೆಟಿನಲ್ಲಿ ಹೌದು ಎಂದಿದ್ದಾರೆ.
Advertisement
The ???? is at it again … #Virat
— Michael Vaughan (@MichaelVaughan) March 8, 2019
Advertisement
ಆಸೀಸ್ ಏಕದಿನ ಸರಣಿಯಲ್ಲಿ ಕೊಹ್ಲಿ ಸತತವಾಗಿ 2 ಶತಕ ಗಳಿಸಿ ಮಿಂಚಿದ್ದಾರೆ. ಆದರೆ 3ನೇ ಏಕದಿನ ಪಂದ್ಯದಲ್ಲಿ ತಂಡ ಸೋಲುಂಡಿತ್ತು. ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ್ದರು. ಆದರೆ ಕೊಹ್ಲಿ ನಿರ್ಧಾರ ತಪ್ಪು ಎಂದು ಆಸೀಸ್ ಆಟಗಾರರು ಸಾಬೀತು ಪಡಿಸಿದ್ದರು. ಕೊಹ್ಲಿಗೆ ಟೀಂ ಇಂಡಿಯಾ ಯಾವೊಬ್ಬ ಆಟಗಾರರು ಸಾಥ್ ನೀಡದ್ದು ಸೋಲಿಗೆ ಪ್ರಮುಖವಾಗಿತ್ತು.
Advertisement
ಕೇವಲ 85 ಎಸೆತಗಳಲ್ಲಿ ಕೊಹ್ಲಿ ಶತಕ ಸಿಡಿಸಿ ಏಕದಿನ ಕ್ರಿಕೆಟ್‍ನಲ್ಲಿ 41ನೇ ಶತಕ ಸಿಡಿಸಿದ್ದರು. ಅಲ್ಲದೇ ನಾಯಕರಾಗಿ 4 ಸಾವಿರ ರನ್ ಗಳನ್ನು ವೇಗವಾಗಿ ಪೂರೈಸಿದ ಸಾಧನೆಯನ್ನು ಮಾಡಿದ್ದರು.
Advertisement
In One day cricket … YES … https://t.co/vwjmKJYlgT
— Michael Vaughan (@MichaelVaughan) March 8, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv