ಬೆಂಗಳೂರು: ಅರ್ಜಿ ಸಲ್ಲಿಸಿ, ಮುಂಗಡ ಹಣವನ್ನು ಪಾವತಿ ಮಾಡಿ ಒಂದು ವರ್ಷವಾದರೂ ಗೃಹಭಾಗ್ಯ ನೀಡದ ಸರ್ಕಾರ ಈಗ ಕೋಗಿಲು ಲೇಔಟ್‌ನಲ್ಲಿ (Kogilu Layout) ಅಕ್ರಮವಾಗಿ ಸರ್ಕಾರಿ ಜಾಗದಲ್ಲಿ ನೆಲೆಸಿದವರಿಗೆ ಗೃಹಭಾಗ್ಯ (House) ನೀಡಲು ಮುಂದಾಗಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಹೌದು. ಬೈಯಪ್ಪನಹಳ್ಳಿಯ ರಾಜೀವ್ ಗಾಂಧಿ ವಸತಿ ನಿಗಮದ(Rajiv Gandhi Housing Corporation Ltd) ಅಪಾರ್ಟ್‌ಮೆಂಟ್‌ನಲ್ಲಿರುವ ಮನೆಗಳಿಗೆ ಒಂದು ವರ್ಷದ ಹಿಂದೆಯೇ ಜನರು ಅರ್ಜಿ ಸಲ್ಲಿಕೆ ಮಾಡಿದ್ದರು. 1188 ಮನೆಗಳಿಗೆ 594 ಮಂದಿ ಅರ್ಜಿ ಸಲ್ಲಿಕೆ ಮಾಡಿ ಒಂದು ವರ್ಷವಾದರೂ ಮನೆ ಸಿಕ್ಕಿಲ್ಲ.
ಬಿಬಿಎಂಪಿಯಿಂದ ಐದು ಲಕ್ಷ ರೂ. ಹಣ ಬಿಡುಗಡೆಯಾಗದ್ದಕ್ಕೆ ಮನೆ ಹಂಚಿಕೆಯಾಗಿಲ್ಲ. ಇನ್ನು ಕೆಲವರು 50 ಸಾವಿರ ರೂ. ಮುಂಗಡ ಹಣವನ್ನು ಪಾವತಿಸಿದ್ದರೂ ಸಂಪೂರ್ಣ ಹಣವನ್ನು ಪಾವತಿ ಮಾಡಿಲ್ಲ ಎಂದು ಕಾರಣ ನೀಡಿ ಮನೆಯನ್ನು ವಿತರಿಸಿಲ್ಲ. ಇದನ್ನೂ ಓದಿ: ಶಾಸಕ ಭರತ್ ರೆಡ್ಡಿ ಮೇಲೆ ಗರಂ – ಫೋನಿನಲ್ಲಿ ಮಾತನಾಡಲ್ಲ ಎಂದ ಸಿಎಂ
ಯಾರಿಗೆ ಎಷ್ಟು ಮನೆ?
ಒಟ್ಟು 1,188 ಮನೆಗಳಿದ್ದು ಪರಿಶಿಷ್ಟ ಜಾತಿ, ಪಂಗಡದವರಿಗೆ 225, ಜನರಲ್ ಕಟಗರಿಯವರಿಗೆ 296, ಅಲ್ಪ ಸಂಖ್ಯಾತರಿಗೆ 61 ಮನೆಯನ್ನು ಹಂಚಿಕೆ ಮಾಡಲಾಗಿದೆ. ಈಗಅಪಾರ್ಟ್ಮೆಂಟ್ ನಲ್ಲಿ 593 ಮನೆಗಳನ್ನು ಹಂಚಿಕೆ ಮಾಡಲು ಬಾಕಿಯಿದೆ.
ಸದ್ಯ ಈಗ ಶಾಸಕರ ಕೋಟಾದಡಿ ಮಾತ್ರ ಮನೆ ನೀಡಲು ಸಾಧ್ಯವಿದೆ. ಹೀಗಾಗಿ ಶಾಸಕರ ಕೋಟಾದಡಿ ಕೋಗಿಲು ನಿರಾಶ್ರಿತರಿಗೆ ಮನೆ ನೀಡಲು ಸರ್ಕಾರ ಮುಂದಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ವಸತಿ ಇಲಾಖೆಯಿಂದ ಸಿಕ್ಕಿದೆ. ಇದನ್ನೂ ಓದಿ: ಜನಾರ್ದನ ರೆಡ್ಡಿ ನಿವಾಸದ ಕಡೆ ಗುಂಡಿನ ದಾಳಿ ನಡೆಸಿದ ಸತೀಶ್ ರೆಡ್ಡಿ ಗನ್ ಮ್ಯಾನ್ – ಕ್ಯಾಮೆರಾದಲ್ಲಿ ದೃಶ್ಯ ಸೆರೆ

