– ಪಾಕ್ ಭಯೋತ್ಪಾದಕರು ಇಲ್ಲಿನ ಮಾಹಿತಿ ತಮ್ಮ ದೇಶಕ್ಕೆ ಕೊಡ್ತಿದ್ದಾರೆ
– ಕರ್ನಾಟಕ ಮಿನಿ ಬಾಂಗ್ಲಾದೇಶ ಹಬ್ ಆಗಿದೆ ಅಂತ ಅಶೋಕ್ ಕಿಡಿ
ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿ ಅಕ್ರಮ ಶೆಡ್, ಮನೆ ತೆರವು ಪ್ರಕರಣದಲ್ಲಿ (Kogilu layout Demolition Case) ಅಲ್ಲಿನ ನಿವಾಸಿಗಳ ಪೌರತ್ವದ ಬಗ್ಗೆ NIA ತನಿಖೆ ಆಗಬೇಕು ಅಂತ ರಾಜ್ಯ ಸರ್ಕಾರಕ್ಕೆ ಬಿಜೆಪಿ ಆಗ್ರಹಿಸಿದೆ.
ವಿಪಕ್ಷ ನಾಯಕ ಅಶೋಕ್ (R Ashok), ಛಲವಾದಿ ನಾರಾಯಣಸ್ವಾಮಿ ನೇತೃತ್ವದ ನಿಯೋಗ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ರು. ನಿವಾಸಿಗಳ ದಾಖಲಾತಿ ಪರಿಶೀಲನೆ ಮಾಡಿದ್ರು. ನಿವಾಸಿಗಳು ಜೊತೆ ಮಾತಾಡಿ ಮಾಹಿತಿ ಕಲೆ ಹಾಕಿದ್ರು.
ಬಳಿಕ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯ (Siddaramaiah) ನೇತೃತ್ವದ ಟೋಪಿ ಸರ್ಕಾರ. ಕನ್ನಡಿಗರಿಗೆ ಟೋಪಿ ಹಾಕಿ ಮಿನಿ ಬಾಂಗ್ಲಾದೇಶ ಮಾಡಿದೆ. ಕರ್ನಾಟಕ ಮಿನಿ ಬಾಂಗ್ಲಾದೇಶ ಹಬ್ ಆಗಿದೆ. ಬೇರೆ ಬೇರೆ ರಾಜ್ಯದಿಂದ ಜನರು ಇಲ್ಲಿಗೆ ಬಂದಿದ್ದಾರೆ. 25 ವರ್ಷಗಳಿಂದ ಇದ್ದೀವಿ ಅಂತಾರೆ. ಇದು ಸಾಧ್ಯನಾ? ನಾವು ಇವತ್ತು ಬರುತ್ತೇವೆ ಅಂತ ಇಲ್ಲಿ ಇದ್ದವರನ್ನ ಹೊರಗೆ ಕಳಿಸಿದ್ದಾರೆ. ಟ್ಯಾನಿ ರೋಡ್ ಆ ಕಡೆ ಈ ಕಡೆಯಿಂದ ಕರೆದುಕೊಂಡು ಬಂದು ನಿಲ್ಲಿಸಿದ್ದಾರೆ ಅಂತ ಆರೋಪ ಮಾಡಿದ್ರು. ಇದನ್ನೂ ಓದಿ: ಕೈಯಲ್ಲಿ ಎಣ್ಣೆ, ಸಿಗರೇಟ್.. ಇಸ್ಪೀಟ್ ಆಟ; ಕಲಬುರಗಿ ಜೈಲಲ್ಲಿ ಕೈದಿಗಳ ಮೋಜು-ಮಸ್ತಿ
ಇವರು ಯಾವಾಗ ಬಂದರು? ಎಲ್ಲಿಂದ ಬಂದರು ಅಂತ ಮಾಹಿತಿ ಇದೆ. ಒಂದು ವರ್ಷದ ಹಿಂದೆ ಯಾರು ಇರಲಿಲ್ಲ. ಈಗ ಇಲ್ಲಿ ಮನೆಗಳು ಇವೆ. ಡಿಕೆ ಶಿವಕುಮಾರ್ (DK Shivakumar) ಅವರು ಅಕ್ರಮ ಮನೆ ಒಡೆದು ಹಾಕ್ತೀವಿ ಅಂದರು. ಕರ್ನಾಟಕದಲ್ಲಿನ ಕನ್ನಡದ ಜನರಿಗೆ ಇವರು ಕರೆಂಟ್ ಕೊಡೋಕೆ ಆಗಿಲ್ಲ ಇವರಿಂದ. ಇವರಿಗೆ ಕರೆಂಟ್ ಕೊಟ್ಟಿದ್ದಾರೆ. ಇವೆರೇನು ಸಿದ್ದರಾಮಯ್ಯ ಮನೆಯವರ. ಇದನ್ನ ಮಿನಿ ಬಾಂಗ್ಲಾದೇಶ ಮಾಡಿದ್ದಾರೆ. ಡ್ರಗ್ಸ್ ರಾಜ್ಯ ಆಗ್ತಿದೆ ಕರ್ನಾಟಕ. ಪೊಲೀಸರು ಡ್ರಗ್ಸ್ ಕೇಸ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ದಿನಾ ಒದೊಂದು ಕಾಲೋನಿಯಲ್ಲಿ ಬಾಂಗ್ಲಾದೇಶ ಹುಟ್ಟುತ್ತಿದೆ ಅಂತ ಆರೋಪ ಮಾಡಿದ್ರು. ಇದನ್ನೂ ಓದಿ: ಕುಡಿದ ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗಿ ಬಿಡಲ್ಲ, ಡ್ರಿಂಕ್ & ಡ್ರೈವ್ ಕೇಸ್ ಇರುತ್ತೆ: ಪರಮೇಶ್ವರ್ ಸ್ಪಷ್ಟನೆ
ಬೆಂಗಳೂರು ವಿಚಾರದಲ್ಲಿ ಮೂಗು ತೂರಿಸಿದ ಪಾಕ್
ಈ ವಿಚಾರಕ್ಕೆ ಪಾಕಿಸ್ತಾನದವರು ಟ್ವೀಟ್ ಮಾಡಿದ್ದಾರೆ. ಇಲ್ಲಿ ಡೆಮಾಲೀಷನ್ ಮಾಡೋದು ಪಾಕಿಸ್ತಾನಕ್ಕೆ ಹೇಗೆ ಹೋಯ್ತು? ಇಲ್ಲಿ ಭಯೋತ್ಪಾದಕರು ಇದ್ದಾರೆ. ಅವರು ಪಾಕಿಸ್ತಾನಕ್ಕೆ ಮಾಹಿತಿ ಕೊಡ್ತಾ ಇದ್ದಾರೆ. ಕೇರಳ ಸಂಸದ ಒಬ್ಬ ಇಲ್ಲಿಗೆ ಬಂದಿದ್ದ ಅವನನ್ನ ಬಂಧನ ಮಾಡಬೇಕಿತ್ತು. ಕೇರಳದಲ್ಲಿ ಇವತ್ತು ಸಿಎಂ ವೇದಿಕೆ ಹಂಚಿಕೆ ಕೊಂಡಿದ್ದಾರೆ. ಸಿಎಂಗೆ ನಾಚಿಕೆ ಆಗಬೇಕು. ಇಲ್ಲಿನ ಜನರಿಗೆ ವಿದ್ಯುತ್ ಇಲಾಖೆ ಅವರು ಕರೆಂಟ್ ಕೊಟ್ಟಿದ್ದಾರೆ. ನಾಚಿಕೆ ಆಗೊಲ್ಲವಾ? ಬೆಸ್ಕಾಂ ಅವರು ಮೀಟರ್ ಹಾಕಿದ್ದೀರಾ? ನಾಚಿಕೆ ಆಗಬೇಕು ಅಂತ ಕಿಡಿಕಾರಿದರು.
ಕರ್ನಾಟಕದಲ್ಲಿ ಇನ್ ಮೇಲೆ ಡೆಮಾಲಿಷನ್ ಮಾಡಿ ನೋಡೋಣ. ಹೀಗೆ ಯಾವ ಮುಖ ಇಟ್ಟು ಇನ್ನು ಮುಂದೆ ಡೆಮಾಲಿಷನ್ ಮಾಡ್ತೀರಾ? ಈಗ ಡೆಮಾಲಿಷನ್ ಮಾಡಿರೋರಿಗೆ ಮನೆ ಕಟ್ಟಿಕೊಡ್ತೀರಾ? ನಮ್ಮ ಜನರಿಗೆ ಪರಿಹಾರ ಇಲ್ಲ. ಇಲ್ಲಿ ಇರೋರಿಗೆ ಮನೆ ಕೊಡೋಕೆ ಹೋಗ್ತಾ ಇದ್ದಾರೆ. ಸಿದ್ದರಾಮಯ್ಯ ಅಂಡ್ ಸರ್ಕಾರ ಬಾಂಗ್ಲಾದೇಶದ ಹಬ್ ಮಾಡ್ತಾ ಇದ್ದಾರೆ. ಬೇರೆ ಕಡೆ ಡೆಮಾಲಿಷನ್ ಆದಾಗ ಡಿಕೆ ಶಿವಕುಮಾರ್ ಹೋಗಿದ್ರಾ? ಹೋಗಿಲ್ಲ. ಇಲ್ಲಿ ಕುಕ್ಕರ್ ಬ್ರದರ್ ಸಿಸ್ಟರ್ ಇದ್ದಾರೆ. ಹಸು ಹತ್ರ ಕರು ಓಡಿ ಬರೋ ಹಾಗೆ ಓಡಿ ಬಂದರು. ವೋಟಿಗೋಸ್ಕರ ದೇಶ ಮಾರುತ್ತಿದ್ದಾರೆ ಇವರು. ಇವರು ʻವೋಟ್ ಚೋರಿʼ ಮಾಡ್ತಿದ್ದಾರೆ. ಇಲ್ಲಿನ ಜನರ ಪೌರತ್ವದ ಬಗ್ಗೆ ತನಿಖೆ ಮಾಡಲು NIA ಕೊಡಬೇಕು. ಅಲ್ಲಿವರೆಗೂ ಯಾರಿಗೂ ಮನೆ ಕೊಡಬಾರದು ಅಂತ ಸರ್ಕಾರಕ್ಕೆ ಆಗ್ರಹ ಮಾಡಿದ್ರು. ಇದನ್ನೂ ಓದಿ: ಹೊಸ ವರ್ಷಕ್ಕೆ ಕ್ಷಣಗಣನೆ – ವಿಜಯಪುರದ ಗೋಲಗುಂಬಜ್‌ನಲ್ಲಿ ತುಂಬಿ ತುಳುಕುತ್ತಿರುವ ಜನ
ಕೋಗಿಲು ಗ್ರಾಮದ ಬಳಿಯ ಸರ್ಕಾರಿ ಜಾಗದಲ್ಲಿನ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಿರುವ ಸ್ಥಳಕ್ಕೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾದ ಶ್ರೀ @NswamyChalavadi, ಶಾಸಕರಾದ ಶ್ರೀ @drashwathcn, ರಾಜ್ಯ ಕಾರ್ಯದರ್ಶಿಗಳಾದ ಶ್ರೀ ತಮ್ಮೇಶ್ ಗೌಡ,… pic.twitter.com/Ei0he3uEPf
— R. Ashoka (@RAshokaBJP) December 31, 2025
ಮನೆಗಾಗಿ ಕಾಯ್ತಿರೋರನ್ನ ನಾವೇ ನುಗ್ಗಿಸುತ್ತೇವೆ
ಕೋಗಿಲು ಲೇಔಟ್ ನಲ್ಲಿ ಒಂದು ವರ್ಷದ ಒಳಗೆ ತಲೆ ಎತಿದ್ದ ಅಕ್ರಮ ಮನೆಗಳನ್ನ ಸರ್ಕಾರ ಡೆಮಾಲಿಷನ್ ಮಾಡ್ತು. ಹಾಗಾದ್ರೆ ಸರ್ಕಾರ ಸರಿ ಮಾಡ್ತಾ? ತಪ್ಪು ಮಾಡ್ತಾ? ಡಿಕೆ ಶಿವಕುಮಾರ್ ಅಕ್ರಮ ಮನೆ ಅಂತ ಹೇಳಿದ್ರು. ವೇಣುಗೋಪಾಲ್ ಟ್ವೀಟ್, ಪಾಕಿಸ್ತಾನ ಟ್ವೀಟ್, ಕೇರಳ ಸಿಎಂ ಅವರ ಪ್ರತಿನಿಧಿ ಕಳಿಸಿದಾಗ ಇವರು ವರಸೆ ಬದಲಾವಣೆ ಮಾಡಿದ್ದಾರೆ. ಮೂಲ ದಾಖಲೆಗಳನ್ನು ಪರಿಶೀಲನೆ ಮಾಡಬೇಕು. ದಾಖಲಾತಿ ಪರಿಶೀಲನೆಗೆ NIA ಗೆ ವಹಿಸಿಬೇಕು. ಕರ್ನಾಟಕದಲ್ಲಿ 38 ಲಕ್ಷ ಜನ ಮನೆಗಾಗಿ ಕಾಯ್ತಾ ಇದ್ದಾರೆ. ಅವರಿಗೆ ಕೊಡದೇ ಇವರಿಗೆ ಯಾಕೆ ಕೊಡ್ತೀರಾ? ದಾಖಲಾತಿ ಪರಿಶೀಲನೆ ಆಗದೇ ಮನೆ ಕೊಡಬಾರದು. ಒಂದು ವೇಳೆ ಬೇರೆ ಅವರಿಗೆ ಕೊಡೋ ಮನೆ ಇವರಿಗೆ ಕೊಟ್ಟರೆ ಮನೆಗಾಗಿ ಕಾಯ್ತಿರೋರನ್ನ ನಾವೇ ಆ ಮನೆಗಳಿಗೆ ನುಗ್ಗಿಸುತ್ತೇವೆ ಅಂತ ಎಚ್ಚರಿಕೆ ಕೊಟ್ಟರು.
ಮಾಜಿ ಡಿಸಿಎಂ ಅಶ್ವಥ್ ನಾರಾಯಣ ಮಾತಾಡಿ, ಈ ಸ್ಥಳ ನೋಡಿದ್ರೆ ಇಲ್ಲಿ ಇರೋರು ಬಾಂಗ್ಲಾದೇಶದವರು. ನಮ್ಮ ಸರ್ಕಾರದಲ್ಲಿ ಮಹದೇವಪುರಲ್ಲಿ ಬಾಂಗ್ಲಾದೇಶದರನ್ನ ತೆರವು ಮಾಡಿದ್ವಿ. ಇವರಿಂದ ಕರ್ನಾಟಕ, ದೇಶದ ಭದ್ರತೆಗೆ ಧಕ್ಕೆ ಇದೆ. ಬಾಂಗ್ಲಾದೇಶದವರನ್ನ ಪತ್ತೆ ಹಚ್ಚಿ ಅವರನ್ನ ದೇಶದಿಂದ ಹೊರಗೆ ಹಾಕಬೇಕು. ಯಾವ ಒಬ್ಬ ಮಲೆಯಾಳಿಗಳು ಇಲ್ಲ. ಬಾಂಗ್ಲಾದೇಶದಿಂದ ಬಂಗಾಳಕ್ಕೆ ಬಂದು ಇಲ್ಲಿಗೆ ಬಂದಿದ್ದಾರೆ. ವಾಸೀಂ, ಫಕೀರ್ ನಗರ ಅಂತೆ. ವಾಸೀಂ ಯಾರು ಸ್ವಾತಂತ್ರ್ಯ ಹೋರಾಟಗಾರನಾ? ಗೃಹ ಇಲಾಖೆ ಏನ್ ಮಾಡ್ತಿದೆ? ಕಾನೂನುಬಾಹಿರವಾಗಿ ಇವರು ಬಂದಿದ್ದಾರೆ. ಹಾಗಾಗಿ ಈ ಸಮಗ್ರ ಬೆಳವಣಿಗೆಯ ಬಗ್ಗೆ NIA ತನಿಖೆ ಆಗಬೇಕು ಅಂತ ಆಗ್ರಹ ಮಾಡಿದ್ರು.



