– ಬೈಯಪ್ಪನಹಳ್ಳಿಯಲ್ಲಿರುವ 1,187 ಮನೆಗಳಲ್ಲಿ ಪರ್ಯಾಯ ವ್ಯವಸ್ಥೆ
ಬೆಂಗಳೂರು: ಕೋಗಿಲು ಬಡಾವಣೆಯಲ್ಲಿ (Kogilu layout) ತೆರವುಗೊಳಿಸಲಾದ ಅಕ್ರಮ ಶೆಡ್‌ನಲ್ಲಿ ಯಾರ‍್ಯಾರು ಇದ್ದರು ಅನ್ನೋದರ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರಿಗೆ ಮಾಹಿತಿ ಕೇಳಿದ್ದೇನೆ. ಇನ್ನೆರಡು ದಿನಗಳಲ್ಲಿ ಅದನ್ನೆಲ್ಲಾ ಪರಿಶೀಲಿಸಿ ಅರ್ಹ ವ್ಯಕ್ತಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.
ಇಂದು ಸಿಎಂ-ಡಿಸಿಎಂ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಎಂ, ಕೋಗಿಲು ಬಡಾವಣೆಯಲ್ಲಿ ಡಿ.20 ರಂದು ಅಕ್ರಮವಾಗಿ ನಿರ್ಮಿಸಿದ್ದ ಶೆಡ್ ತೆರವು ಪ್ರಕರಣದ ಕುರಿತು ಕಂಪ್ಲೀಟ್ ವಿವರ ನೀಡಿದ್ರು. ಬೈಯ್ಯಪ್ಪನಹಳ್ಳಿಯಲ್ಲಿ (Baiyappanahalli) 1,187 ಮನೆಗಳಿವೆ ಅಲ್ಲಿ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಡುತ್ತೇವೆ. ಒಂದು ಮನೆಗೆ 11.20 ಲಕ್ಷ ರೂ. ಅಲಾಟ್ ಮಾಡಬೇಕು ಅಂದುಕೊಂಡಿದ್ದೇವೆ ಎಂದು ಮಾಹಿತಿ ನೀಡಿದ್ರು. ಇದನ್ನೂ ಓದಿ: ನಮ್ಮ ಗೃಹ ಇಲಾಖೆ ಸತ್ತು ಹೋಗಿದ್ಯಾ? ಇದೆಂಥಾ ಗುಲಾಮಗಿರಿ ಸರ್ಕಾರ? – ಛಲವಾದಿ ನಾರಾಯಣಸ್ವಾಮಿ ನಿಗಿನಿಗಿ
ಇನ್ಮುಂದೆ ಅಕ್ರಮ ನಡೆದ್ರೆ ಅಧಿಕಾರಿಗಳೇ ಹೊಣೆ
ಒಟ್ಟು 167 ಶೆಡ್ ಗಳನ್ನ ತೆರವು ಗೊಳಿಸಿದ್ದರು. ಅವರೆಲ್ಲರಿಗೂ ನೋಟಿಸ್ ಕೊಡಲಾಗಿತ್ತು. ನೋಟಿಸ್ ಕೊಟ್ಟು ಸರ್ಕಾರಿ ಜಾಗ ಇದು, ತೆರವು ಮಾಡಿ ಅಂದ್ಮೇಲೂ ಖಾಲಿ ಮಾಡಿರಲಿಲ್ಲ. ನಿನ್ನೆ ಸಚಿವ ಜಮೀರ್ (Zameer Ahmed) ಅವರನ್ನ ಕಳುಹಿಸಿದ್ದೆ ಇವತ್ತು ಡಿಸಿಎಂ ಭೇಟಿ ಕೊಟ್ಟಿದ್ದಾರೆ. ಕಸ ವಿಲೇವಾರಿಗೆ 15 ಎಕರೆ ಜಮೀನನ್ನ ಡಿಸಿಯವರು ನಗರ ಪಾಲಿಕೆಗೆ ಹಸ್ತಾಂತರ ಮಾಡಿದ್ದಾರೆ. 2020-21 ರಿಂದ ಈ ರೀತಿಯಾಗಿ ಅಕ್ರಮವಾಗಿ ಶೆಡ್ ಕಟ್ಟಿಕೊಂಡು ವಾಸ ಮಾಡ್ತಿದ್ದಾರೆ. ತಹಶೀಲ್ದಾರ್ ಹಾಗೂ ಶಿರಸ್ಥೆದಾರರಿಗೆ ಗೊತ್ತಿಲ್ಲದಿರಲು ಸಾಧ್ಯವಿಲ್ಲ. ಹಾಗಾಗಿ ಇದನ್ನ ಗುರುತಿಸದ ಆ ಭಾಗದ ಪಾಲಿಕೆ ಹಾಗೂ ಕಂದಾಯ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ನಿರ್ಧಾರ ಮಾಡಲಾಗಿದೆ. ಮುಂದೆ ಈ ರೀತಿ ಅಕ್ರಮ ಮನೆ ಕಟ್ಟಲು ಅವಕಾಶ ಮಾಡಿಕೊಡದಂತೆಯೂ ಕ್ರಮಕ್ಕೆ ಮುಂದಾಗಿದ್ದೇವೆ. ಒಂದು ವೇಳೆ ಈ ರೀತಿ ಅಕ್ರಮ ಕಂಡುಬಂದ್ರೆ ಅದಕ್ಕೆ ಅಧಿಕಾರಿಗಳೇ ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಕೋಗಿಲು ಲೇಔಟ್ – ರಾಜೀವ್ ಗಾಂಧಿ ವಸತಿ ಯೋಜನೆಯ 20 ಅಧಿಕಾರಿಗಳು ಭೇಟಿ
ಅರ್ಹರಿಗೆ ಪರ್ಯಾಯ ವ್ಯವಸ್ಥೆ
ಅಕ್ರಮ ಶೆಡ್‌ನಲ್ಲಿ ಯಾರ‍್ಯಾರು ಇದ್ದರು ಜಿಲ್ಲಾಧಿಕಾರಿ ಹಾಗೂ ಕಾರ್ಪೊರೇಷನ್ ಕಮೀಷನರ್‌ಗೆ ಕೇಳಿದ್ದೇನೆ. ಇನ್ನೆರಡು ದಿನಗಳಲ್ಲಿ ಅದನ್ನೆಲ್ಲಾ ಪರಿಶೀಲಿಸಿ ಅರ್ಹ ವ್ಯಕ್ತಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಸರ್ಕಾರ ತೀರ್ಮಾನ ಮಾಡಿದೆ. ಡಿಸಿ ಹಾಗೂ ಕಾರ್ಪೊರೇಷನ್ ನವರು ಲೀಸ್ಟ್ ಕೊಡ್ತಾರೆ. ಆ ಲಿಸ್ಟ್‌ನ ಆಧಾರದ ಮೇಲೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗ್ಳೂರಿನ ಮೂರು ಕಡೆ ಮಾದಕ ವಸ್ತು ಫ್ಯಾಕ್ಟರಿ ಪತ್ತೆ ಕೇಸ್ – ಮೂವರು ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಸಸ್ಪೆಂಡ್
ಬೈಯಪ್ಪನಹಳ್ಳಿಯಲ್ಲಿ ಪರ್ಯಾಯ ವ್ಯವಸ್ಥೆ
ಈ ವಿಚಾರವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ ವೇಣುಗೋಪಾಲ್ ಚರ್ಚೆ ಮಾಡಿದ್ದಾರೆ. ಪರ್ಯಾಯ ವ್ಯವಸ್ಥೆ ಮಾಡುತ್ತೇವೆ ಅಂತ ಅವರಿಗೂ ಹೇಳಿದ್ದೇನೆ. ನಾನು ಹಾಗೂ ಡಿಸಿಎಂ ಇಬ್ಬರ ಜೊತೆಯೂ ಮಾತನಾಡಿದ್ದಾರೆ. ಅದೇ ಜಾಗದಲ್ಲಿ ಆಗಲ್ಲ, ಏಕೆಂದ್ರೆ ಅದು ಸರ್ಕಾರಿ ಜಾಗ. ಪರ್ಯಾಯ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದಿದ್ದೇನೆ. ಬೈಯ್ಯಪ್ಪನ ಹಳ್ಳಿಯಲ್ಲಿ 1,187 ಮನೆಗಳಿವೆ ಅಲ್ಲಿ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಡುತ್ತೇವೆ. ಒಂದು ಮನೆಗೆ 11.20 ಲಕ್ಷ ರೂ. ಅಲಾಟ್ ಮಾಡಬೇಕು ಅಂದುಕೊಂಡಿದ್ದೇವೆ. ಜನರಲ್, ಪರಿಶಿಷ್ಟ ಜಾತಿ, ವರ್ಗದವರಿಗೆ ಬೇರೆ ಬೇರೆ ಸಹಾಯಧನಗಳಿವೆ ಎಂದು ವಿವರಿಸಿದ್ರು. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಬಿಗ್ ರಿಲೀಫ್; ಹೆಚ್.ಡಿ ರೇವಣ್ಣ ವಿರುದ್ಧದ ಪ್ರಕರಣ ಕೈಬಿಟ್ಟ ಕೋರ್ಟ್



