ಹಾಸನ : ಅಶಾಂತಿ, ಮತೀಯಗಲಭೆ, ದೊಂಬಿಗಳು, ಸಾವು-ನೋವುಗಳು ಕೊಲೆಗಳಾಗುತ್ತವೆ ಎಂದು ಅರಸೀಕೆರೆ ಕೋಡಿಮಠದ ಕೋಡಿಶ್ರೀ ಭವಿಷ್ಯ ನುಡಿದಿದ್ದಾರೆ.
ಈ ವರ್ಷದ ಫಲಾಫಲದ ಬಗ್ಗೆ ಮಾತನಾಡಿದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಅಶಾಂತಿ, ಮತೀಯಗಲಭೆ, ದೊಂಬಿಗಳು, ಸಾವು-ನೋವುಗಳು ಕೊಲೆಗಳಾಗುತ್ತವೆ. ವಿಶೇಷವಾಗಿ ಎಲೆಕ್ಟ್ರಿಕ್‍ನಿಂದ ಅಪಾಯವಿದೆ. ಸುಂದರವಾದ ಹೆಣ್ಣುಮಕ್ಕಳ ಅಂಗಾಗಳನ್ನು ಕಿತ್ತು ತಿನ್ನುತಾರೆ. ರಾಜಕೀಯ ವಿಪಲ್ಲವಾಗುತ್ತೆ, ರಾಜಕೀಯ ಗುಂಪುಗಳಾಗುತ್ತವೆ. ಬೆಂಕಿಯ ಅನಾಹುತ ಜಾಸ್ತಿ, ಗಾಳಿ, ಸಿಡಿಲು, ಗುಡುಗು ವಿಪರೀತ. ಇಲ್ಲಿಯತನಕ ಕಂಡು ಕೇಳರಿಯದ ಬಹುದೊಡ್ಡ ಅಘಾತ ಭಾರತದಲ್ಲಿ ಆಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಹೀಗೆ ಮಾತನಾಡಿದ್ರೆ ಹಿಟ್ ವಿಕೆಟ್ ಆಗ್ತೀರಾ: ಆರ್.ಅಶೋಕ್ ತಿರುಗೇಟು
ಈ ವರ್ಷ ಮಳೆ ಕಂಡಮಂಡಲ. ಆದಲ್ಲಿ ಆಯಿತು ಹೋದಲ್ಲಿ ಹೋಯಿತು. ಮಲೆನಾಡು ಹೋಗಿ ಬಯಲು ಆಗುತ್ತದೆ, ಬಯಲು ಹೋಗಿ ಮಲೆನಾಡು ಆಗುತ್ತದೆ. ಆ ತರ ಅವಕಾಶ ಮಳೆಗೆ ಇದೆ. ಭಾರತದಲ್ಲಿ ಈ ಸಂವತ್ಸರದಲ್ಲಿ ಬಹುದೊಡ್ಡ ಅವಘಡ ನಡೆಯುತ್ತದೆ. ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುತ್ತಾರೆ. ಮುಂಗಾರು ಚೆನ್ನಾಗಿ ಆಗುತ್ತದೆ, ಹಿಂಗಾರು ಕಡಿಮೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಸುಕಿನಲ್ಲಿ ಸುಪ್ರಭಾತ, ಅಲ್ಲಾಹ್ ಕೂಗುವ ಪರಿಪಾಠ ನಿನ್ನೆ, ಇಂದಿನದಲ್ಲ: ಕುಮಾರಸ್ವಾಮಿ