– ರಾಜ್ಯದಲ್ಲಿ ಜಲಕಂಟಕ, ಪ್ರಕೃತಿ ವಿಕೋಪ ಮುಂದುವರಿಯುತ್ತೆ; ಶ್ರೀಗಳ ಭವಿಷ್ಯ
ಬೆಳಗಾವಿ: ವಯನಾಡಿನಲ್ಲಿ ಇಂತಹ ದುರಂತ ಆಗುತ್ತೆ ಅಂತ ನಾನು 20 ದಿನಗಳ ಹಿಂದೆಯೇ ಹೇಳಿದೆ ಎಂದು ಕೋಡಿಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Kodi Mutt Shivayogi Rajendra Swamiji) ತಿಳಿಸಿದ್ದಾರೆ.
ಬೆಳಗಾವಿಯ (Belagavi) ರಾಮತೀರ್ಥ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇರಳದಲ್ಲಿ ಭೂಕುಸಿತ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಕಳೆದ ಇಪ್ಪತ್ತು ದಿನಗಳ ಹಿಂದೆಯೇ ಈ ರೀತಿ ಆಗುತ್ತೆ ಅಂತ ನಾನು ಹೇಳಿದ್ದೆ. ಮಳೆ ಆಗುತ್ತೆ, ಗುಡ್ಡ ಉರುಳುತ್ತೆ, ಜನರು ಸಾಯುತ್ತಾರೆ, ರೋಗ-ರುಜಿನಗಳು ಹೆಚ್ಚಾಗುತ್ತವೆ ಅಂತ ಹೇಳಿದ್ದೆ. ಇದು ಭಾರತಕ್ಕೆ ಅಷ್ಟೇ ಹೇಳಿರಲಿಲ್ಲ, ಜಾಗತಿಕ ಮಟ್ಟದಲ್ಲಿ ಕೆಲ ರಾಜ್ಯಗಳು ಮುಳುಗುತ್ತವೆ ಅಂತ ಹೇಳಿದ್ದೆ ಎಂದಿದ್ದಾರೆ.
Advertisement
Advertisement
ನನ್ನ ಪ್ರಕಾರ ಅಮಾವಾಸ್ಯೆವರೆಗೆ ಮಳೆ ಇರುತ್ತೆ. ಬಳಿಕ ಬೇರೆ ಭಾಗಕ್ಕೆ ಹೋಗುತ್ತೆ. ಇದು ಕ್ರೋಧಿನಾಮ ಸಂವತ್ಸರ, ಕ್ರೋಧಿ ಅಂದ್ರೆ ಸಿಟ್ಟು ಇದರಲ್ಲಿ ಒಳ್ಳೆಯದ್ದೂ ಇದೆ, ಕೆಟ್ಟದ್ದೂ ಇದೆ. ಈ ಪೈಕಿ ಕೆಟ್ಟದ್ದೇ ಜಾಸ್ತಿ ಇರುತ್ತೆ. ಈ ಪ್ರಾಕೃತಿಕ ದೋಷ ಮುಂದುವರಿಯುತ್ತೆ. ಮುಂದೆ ಅನಿಷ್ಠ ಜಾಸ್ತಿ ಇದೆ, ಕತ್ತಲು ಬೆಳಕು – ಎರಡು ಇರುತ್ತೆ ಅದರಲ್ಲಿ ಕತ್ತಲು ಜಾಸ್ತಿ ಇರುತ್ತೆ ಎಂದು ಸ್ವಾಮೀಜಿ ಹೇಳಿದ್ದಾರೆ. ಇದನ್ನೂ ಓದಿ: Landslide In Karnataka: ಶಿರಾಡಿ ಘಾಟ್‌ನಲ್ಲಿ ಭೂಕುಸಿತ – ತಪ್ಪಿದ ಭಾರೀ ಅನಾಹುತ
Advertisement
Advertisement
ಅಷ್ಟೇ ಅಲ್ಲ ಪ್ರಕೃತಿ ವಿಕೋಪವಾಗಿ ಭೂಮಿ ಕಂಪಿಸುತ್ತೆ, ಜನ ಸಾಯುತ್ತಾರೆ. ಕೆಲ ರಾಜ್ಯಗಳು ಮುಳುಗಡೆಯಾಗುತ್ತವೆ. ರಾಜ್ಯದಲ್ಲಿ ಜಲಕಂಟಕ ಹಾಗೂ ಪ್ರಕೃತಿ ವಿಕೋಪ ಮುಂದುವರಿಯಲಿದೆ. ಲಾಭಕ್ಕಿಂತ ಹಾನಿ ಜಾಸ್ತಿಯಾಗಲಿದೆ. ಬರುವ ಅಮಾವಾಸ್ಯೆವರೆಗೆ ಕಾಲ ಚೆನ್ನಾಗಿಲ್ಲ. ಕೇವಲ ಭಾರತಕ್ಕೆ ಅಷ್ಟೇ ಅಲ್ಲ ಇಡೀ ವಿಶ್ವಕ್ಕೆ ಜಲ ಕಂಟಕವಿದೆ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಮನು ಭಾಕರ್, ಸರಬ್ಜೋತ್ ಸಿಂಗ್‌ಗೆ ಪಿಎಂ, ಸಿಎಂ ಅಭಿನಂದನೆ
NDRF ತಂಡದಿಂದ ರಕ್ಷಣಾ ಕಾರ್ಯ:
ವಯನಾಡಿನ ಮೆಪ್ಪಾಡಿ ಜಿಲ್ಲೆಯಲ್ಲಿ ರಸ್ತೆ, ಸೇತುವೆ, ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಮತ್ತೊಂದೆಡೆ ಎನ್‌ಡಿಆರ್‌ಎಫ್, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಂದ ರಕ್ಷಣಾ ಕಾರ್ಯ ಮುಂದುವರಿದಿದೆ. ಈವರೆಗೆ ಸುಮಾರು 101 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಕಲ್ಪೆಟ್ಟಾದ ಬತ್ತೇರಿ ಸೇಂಟ್ ಮೇರಿಸ್ ಎಸ್‌ಕೆಎಂಜೆ ಶಾಲೆಯಲ್ಲಿ ಆಶ್ರಯ ಶಿಬಿರವನ್ನು ಸ್ಥಾಪಿಸಲಾಗಿದ್ದು, ವೈದ್ಯಕೀಯ ತಂಡಗಳು ಅಂಬುಲೆನ್ಸ್‌ಗಳೊಂದಿಗೆ ಸ್ಥಳದಲ್ಲೇ ಬಿಡುಬಿಟ್ಟಿವೆ. ಜೊತೆಗೆ ಸಂತ್ರಸ್ತರಿಗೆ ಆಹಾರ ಬಟ್ಟೆ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: Wayanad Landslides: ತಮಿಳುನಾಡಿನಿಂದ 5 ಕೋಟಿ ನೆರವು – ಅಗತ್ಯ ಸಹಕಾರ ನೀಡೋದಾಗಿ ಕರ್ನಾಟಕ ಸಿಎಂ ಭರವಸೆ
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸದ್ಯಕ್ಕೆ ಏನೂ ತೊಂದರೆ ಕಾಣ್ತಿಲ್ಲ. ಮುಂದೆ ತೊಂದರೆ ಆಗುತ್ತಾ? ಎಂಬ ವಿಚಾರಕ್ಕೆ ʻಬೇಡ ಸನ್ಯಾಸಿʼ ಕಥೆ ಹೇಳಿದರು. ಏನಾದರೂ ಹೇಳಿದ್ರೆ ಮುಂದೆ ಓಡಾಡದ ಹಾಗೆ ಮಾಡಿಬಿಟ್ಟೀರಾ? ಎಂದು ನುಡಿದರು.
ಜನರು ಎಲ್ಲವನ್ನೂ ಮನಃಶಾಂತಿಯಿಂದ ತೆಗೆದುಕೊಳ್ಳುತ್ತಿಲ್ಲ, ದ್ವೇಷ ಭಾಷೆಯಿಂದ ತೆಗೆದುಕೊಳ್ಳುತ್ತಿದ್ದಾರೆ. ಆತ್ಮಸಾಕ್ಷಿಯಾಗಿ ಜನರು ಮತ ನೀಡುತ್ತಿಲ್ಲ. ಎಲ್ಲಿಯವರೆಗೆ ಮತ ಮಾರಿಕೊಳ್ಳುತ್ತಾರೋ ಅಲ್ಲಿಯವರೆಗೆ ಲಾಭ – ನಷ್ಟ ಇರುತ್ತೆ. ಹಿಂದಿನಕಾಲದಲ್ಲಿ ಧರ್ಮದ ಅನುಮತಿ ಪಡೆದು ರಾಜಕಾರಣ ಮಾಡುತ್ತಿದ್ರು. ಈಗ ಧರ್ಮವೂ ಇಲ್ಲ, ಗುರಿಯೂ ಇಲ್ಲ, ದುಡ್ಡು ಮಾಡೋದಷ್ಟೇ ಗುರಿ. ಹಾಗಾಗಿ ಬಹುಬೇಗ ಇವರಿಗೆ ಅಪಘಾತಗಳು ಆಗ್ತಿವೆ. ಮನುಷ್ಯ ಯಾವುದೇ ಅಪೇಕ್ಷೆ ಇಲ್ಲದೇ ಎಲ್ಲಿವರೆಗೆ ಮತ ಹಾಕೋದಿಲ್ಲವೋ, ಅಲ್ಲಿಯವರೆಗೆ ರಾಮರಾಜ್ಯ ಸಿಗಲ್ಲ. ಬರುವ ದಿನಗಳಲ್ಲಿ ಅಲ್ಪಾಯಸ್ಸು ಕಡಿಮೆ ಆಗುತ್ತೆ, ಜನರು ಮಾನಸಿಕ ಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ. ಬರುವ ದಿನಗಳು ಅಷ್ಟೊಂದು ಶುಭವಾಗಿಲ್ಲ ಎಂದು ಹೇಳಿದರು.