ಶಿವಮೊಗ್ಗ: ರೈತ ಸಂಬಂಧಿಸಿದ ಕಾಯ್ದೆಗಳನ್ನು ವಾಪಸ್ ಪಡೆಯುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿರುವುದಾಗಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಬೆಳಗಾವಿ ಅಧಿವೆಶನದ ವೇಳೆ ಕೃಷಿ ಕಾಯ್ದೆ ಹಿಂಪಡೆಯುವಂತೆ ರಾಜ್ಯದ ರೈತರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಿದ್ದರು. ಸದ್ಯ ಈ ಸಂಬಂಧಿ ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಅವರು, ಮುಖ್ಯಮಂತ್ರಿ ಅವರು ರೈತರ ಜೊತೆ ಚರ್ಚೆ ಮಾಡಿದ್ದಾರೆ. ಬೆಳಗಾವಿ ಅಧಿವೇಶನ ಅವಧಿ ಕಡಿಮೆ ಸಮಯ ಇದೆ. ಇನ್ನು 20-25 ದಿನದಲ್ಲಿ ಮತ್ತೆ ಬೆಂಗಳೂರಿನಲ್ಲಿ ಅಧಿವೇಶನ ನಡೆಸುತ್ತೇವೆ. ಆ ಸಂದರ್ಭದಲ್ಲಿ ರೈತ ಸಂಬಂಧಿಸಿದ ಕಾಯ್ದೆಗಳನ್ನು ವಾಪಸ್ ಪಡೆಯುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಕೇಂದ್ರ ಸರ್ಕಾರ ಕಾಯ್ದೆ ಹಿಂಪಡೆದಿದೆ. ಹೀಗಾಗಿ ನಾವು ಕೂಡಾ ವಾಪಸ್ ಪಡೆಯುತ್ತೇವೆ ಎಂದಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸುವರ್ಣಸೌಧ ಮುತ್ತಿಗೆ ಯತ್ನ ವಿಫಲ – ಕೋಡಿಹಳ್ಳಿ ಚಂದ್ರಶೇಖರ್ ಸೇರಿ ನೂರಾರು ರೈತರು ಪೊಲೀಸರ ವಶಕ್ಕೆ
Advertisement
Advertisement
ದೆಹಲಿಯ ಹೋರಾಟಕ್ಕೂ ಮೀರಿದ ಹೋರಾಟ ನಡೆಸಲು ರಾಜ್ಯದ ರೈತರು ಸಿದ್ದರಿದ್ದಾರೆ. ಸರ್ಕಾರದ ನಡೆಯನ್ನು ನೋಡಿ ತೀರ್ಮಾನ ಕೈಗೊಳ್ಳುತ್ತೇವೆ. ಬೆಳೆಹಾನಿ ಪರಿಹಾರ ನೀಡುವ ವಿಚಾರದ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದೇವೆ. ಆದರೆ ಮುಖ್ಯಮಂತ್ರಿ ಅವರು ಖುರ್ಚಿಯ ಸುತ್ತಾ ಬ್ಯುಸಿ ಆಗಿದ್ದಾರೆ. ಪ್ರಾಕೃತಿಕವಾಗಿ ಬಹಳ ದೊಡ್ಡ ನಷ್ಟ ಆಗಿದೆ. ಸರ್ಕಾರ ಘೋಷಣೆ ಮಾಡಿದ ಪರಿಹಾರ ಇನ್ನೂ ತಲುಪಿಲ್ಲ. ಸರ್ಕಾರಕ್ಕೆ ಇಚ್ಚಾಶಕ್ತಿ ಇಲ್ಲದ ಕಾರಣ ರೈತರ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ರೈತರಿಗೆ ಓಬಿರಾಯನ ಕಾಲದ ಪರಿಹಾರ ನೀಡುತ್ತಿದ್ದಾರೆ. ಎಂಎಲ್‍ಎ ವೇತನ, ಎಂಪಿ ವೇತನ, ಅಧಿಕಾರಿಗಳ ವೇತನ ಎಷ್ಟು ಬಾರಿ ಹೆಚ್ಚಳ ಆಯಿತು. ರೈತರಿಗೆ ಪರಿಹಾರ ಕೊಡಲು ಚೌಕಾಸಿ ಮಾಡುತ್ತಿದ್ದಾರೆ. ಓಬಿರಾಯನ ಕಾಲದ ಪರಿಹಾರ ನಿಲ್ಲಿಸಿ, ಬದಲಾವಣೆ ಮಾಡಿ. ವೈಜ್ಞಾನಿಕವಾದ ರೀತಿಯಲ್ಲಿ ಪರಿಹಾರ ಕೊಡಿ ಎಂದು ಕಿಡಿಕಾರಿದ್ದಾರೆ.
Advertisement
Advertisement
ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರ ಎಂಇಎಸ್ ಪುಂಡಾಟಿಕೆಯನ್ನು ಇಡೀ ರಾಜ್ಯದ ತುಂಬಾ ಚರ್ಚೆ ಮಾಡಬೇಕಿತ್ತಾ. ಯಾರೂ ಪುಂಡರು ಇದ್ದಾರೆ ಅವರನ್ನು ಒದ್ದು ಒಳಗೆ ಹಾಕಬೇಕು. ರೌಡಿಶೀಟ್ ಓಪನ್ ಮಾಡಬೇಕು, ಗಡಿಪಾರು ಮಾಡಬೇಕು. ಅದೇ ದೊಡ್ಡ ಸುದ್ದಿ ಏನು. ಕನ್ನಡ ಬಾವುಟ ಸುಟ್ಟು ಹಾಕುವುದಿರಲಿ, ಮಹಾತ್ಮರ ಪುತ್ಥಳಿ ಧ್ವಂಸ ಮಾಡಿದರೇ ನೋಡಿಕೊಂಡು ಸುಮ್ಮನಿರಬೇಕಾ. ಯಾರೇ ಇದ್ದರೂ ಅಂತಹವರ ವಿರುದ್ಧ ಕ್ರಮ ಕೈಗೊಂಡು, ರಾಜ್ಯದಿಂದ ಕುತ್ತಿಗೆ ಹಿಡಿದು ಹೊರಗೆ ತಳ್ಳಿ. ಗಡಿ ಭಾಗದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಓಟ್ ಇದ್ದಾವೆ. ಕೆಲವರು ಮಾತನಾಡುತ್ತಾರೆ, ಇನ್ನೂ ಕೆಲವರು ಹಾಗೆ ಸುಮ್ಮನಿರುತ್ತಾರೆ. ರಾಜಕೀಯ ಲಾಭದ ನಿರೀಕ್ಷೆ ಇಟ್ಟುಕೊಂಡು ಮಾತನಾಡುತ್ತಾರೆ. ರಾಜ್ಯದ ಹಿತಾಸಕ್ತಿ ಬಂದಾಗ, ನಮ್ಮ ಎಲ್ಲಾ ಧ್ವನಿ, ತೀರ್ಮಾನ ಒಂದೇ ಆಗಿರಬೇಕು. ಎಂಇಎಸ್ ಕೈವಾಡ ಇದೆ, ಇಲ್ಲ ಎಂಬ ಪ್ರಶ್ನೆಯೇ ಬೇಡ. ಯಾರು ಕಿಡಿಗೇಡಿಗಳು ಇದ್ದಾರೆ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪ್ರತಿ ಮನೆಯಲ್ಲೂ ತಲ್ವಾರ್ ಇಟ್ಟುಕೊಂಡು ಗೋವು ರಕ್ಷಣೆ ಮಾಡಿ: ಸಾಧ್ವಿ ಸರಸ್ವತಿ