ಕೊಡಗು: ಜಿಲ್ಲೆಯಲ್ಲಿ ಇಂದು ಕೊಡವ ಸಮುದಾಯದ ಜನರು ಎಲ್ಲಡೆ ‘ಕಕ್ಕಡ ಪದಿನೆಟ್’ ಎಂದು ಕರೆಯಲಾಗುವ ಆಟಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.
Advertisement
18 ಔಷದ ಗುಣಗಳನ್ನು ಹೊಂದಿರುವ ಮದ್ದು ಸೊಪ್ಪನ್ನು ಮನೆಗೆ ತಂದು ಅದರಿಂದ ರುಚಿ ರುಚಿಯಾದ ಖಾದ್ಯಗಳನ್ನು ತಯಾರು ಮಾಡುತ್ತಾರೆ. ಈ ಮದ್ದು ಸೊಪ್ಪಿನಿಂದ ತಯಾರಿಸುವ ಪಾಯಸವನ್ನು ಸೇವಿಸುವದರಿಂದ ಶೀತಕ್ಕೆ ಸಂಬಂಧಿಸಿದ ರೋಗಗಳು ಬರುವುದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
Advertisement
Advertisement
ಉದ್ದನೆಯ ಕಡ್ಡಿಯಲ್ಲಿ ಎಲೆಗಳನ್ನು ತುಂಬಿರುವ ಈ ಗಿಡಗಳು ಕೊಡಗಿನ ಅರಣ್ಯ ಪ್ರದೇಶಗಳಲ್ಲಿ ಬೆಳೆಯುತ್ತವೆ. ಈ ಎಲೆಗಳನ್ನು ಮಡಿಕೇರಿ, ವಿರಾಜಪೇಟೆ ಸೇರಿದಂತೆ ನಗರದ ವಿವಿಧೆಡೆ ಮಾರಾಟ ಮಾಡಲಾಗುತ್ತದೆ. ಆಟಿ ಅಥವಾ ಅಷಾಡಮಾಸದ 18 ನೇ ದಿನ 18 ಗಿಡಮೂಲಿಕೆ ಔಷಧಿಗಳ ಗುಣಗಳನ್ನು ಮೈದುಂಬಿಕೊಳ್ಳೋ ಈ ವಿಶೇಷ ಸೊಪ್ಪನ್ನು ಮಾರುಕಟ್ಟೆಯಿಂದ ಖರೀದಿಸಿ ಮನೆಗೆ ತಂದು ಅದರಿಂದ ಪಾಯಸ ಹಾಗೂ ಹಲ್ವಾ ಸೇರಿದಂತೆ ಹಲವು ಬಗೆ ಬಗೆಯ ತಿಂಡಿಗಳನ್ನ ತಯಾರಿಸಿ ಸವಿಯುತ್ತಾರೆ.
Advertisement
ಆಧುನೀಕತೆಯಲ್ಲಿ ಜನರು ಇಂತಹ ಗ್ರಾಮೀಣ ಹಬ್ಬಗಳನ್ನು ಆಚರಣೆಯಿಂದ ಹಿಂದೆ ಸರಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಪ್ರದಾಯವನ್ನು ಉಳಿಸುವ ಸಲುವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಸಾರ್ವಜನಿಕವಾಗಿ ಆಟಿ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಿಕೊಂಡು ಬರುತ್ತಿದೆ. ಈ ಹಬ್ಬವನ್ನು ಇನ್ನೂ ನಾಲ್ಕೈದು ದಿನಗಳವರೆಗೆ ಆಚರಿಸಲಾಗುತ್ತದೆ.